ಅಖಿಲೇಶ್ ಪಾಲಾದ ಸಮಾಜವಾದಿ ಪಕ್ಷ, 'ಸೈಕಲ್ ಚಿಹ್ನೆ'
ಹೊಸದಿಲ್ಲಿ, ಜ.16: ಸಮಾಜವಾದಿ ಪಕ್ಷದ ಚಿಹ್ನೆಗೆ ಸಂಬಂಧಿಸಿ ಇಂದು ಚುನಾವಣಾ ಆಯೋಗ ತೀರ್ಪು ಪ್ರಕಟಿಸಿದ್ದು, ಸಮಾಜವಾದಿ ಪಕ್ಷದ 'ಸೈಕಲ್ ಚಿಹ್ನೆ' ಉತ್ತರ ಪ್ರದೇಶದ ಮುಖ್ಯ ಮಂತ್ರಿ ಅಖಿಲೇಶ್ ಅವರ ಸಮಾಜವಾದಿ ಪಕ್ಷದ ಪಾಲಾಗಿದೆ.ಕೇಂದ್ರ ಚುನಾವಣಾ ಆಯೋಗವು ಇಂದು ತೀರ್ಪು ಪ್ರಕಟಿಸಿದ್ದು, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಅಧಿಕೃತವೆಂದು ಚುನಾವಣಾ ಆಯೋಗವು ಹೇಳಿದ್ದು, ಸಮಾಜವಾದಿ ಪಕ್ಷ ಮತ್ತು ಚಿಹ್ನೆ 'ಸೈಕಲ್' ಅಖಿಲೇಶ್ ಪಾಲಾಗಿದೆ. ಇದರೊಂದಿಗೆ ತಂದೆ ಮುಲಾಯಂ ಸಿಂಗ್ ಯಾದವ್ ಮತ್ತು ಮಗ ಅಖಿಲೇಶ್ ಯಾದವ್ ಅವರ ಜಗಳದಲ್ಲಿ ಮಗ ಅಖಿಲೇಶ್ ಯಾದವ್ ಮೇಲುಗೈ ಸಾಧಿಸಿದ್ದಾರೆ.
ಅಖಿಲೇಶ್ ಯಾದವ್ ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
Next Story