ಕೆಎಂಸಿಯಲ್ಲಿ ಕೋವಿಡ್ ಲಸಿಕೆ ಸಾರ್ವಜನಿಕರಿಗೆ ಲಭ್ಯ
ಉಡುಪಿ, ಜ.17: ಪ್ರಸ್ತುತ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿರುತ್ತದೆ. ಮೊದಲ ಡೋಸ್, ಎರಡನೇ ಡೋಸ್ ಮತ್ತು ಸರಕಾರ ನಿರ್ಧರಿಸಿರುವ ಮಾನದಂಡ ದಂತೆ ಬೂಸ್ಟರ್ ಡೋಸ್ ಗಳಿಗಾಗಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳು ಇಲ್ಲಿ ಲಭ್ಯವಿದೆ ಎಂದು ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರಕಾರ ನಿಗದಿಪಡಿಸಿದ ದರದಲ್ಲಿ ಲಸಿಕೆಯನ್ನು ನೀಡಲಾಗುತಿದ್ದು, ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳ ಬಹುದು ಎಂದು ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ಹೇಳಿದ್ದಾರೆ. ಅವಶ್ಯವಿದ್ದವರು ಕೋವಿನ್ ಆ್ಯಪ್ ನಲ್ಲಿ ನೋಂದಣಿ ಮಾಡಿ ಅಥವಾ ನೇರವಾಗಿ ಆಧಾರ್ ಕಾರ್ಡ್ ಅಥವಾ ಸರಕಾರ ನಿಗದಿಪಡಿಸಿದ ದಾಖಲೆಯೊಂದಿಗೆ ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ಗೆ ಬರುವಂತೆ, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0820- 2922761ಗೆ ಕರೆ ಮಾಡುವಂತೆ ಅವರು ತಿಳಿಸಿದ್ದಾರೆ.
Next Story