ಕಾಪು : ವಿದೇಶದಿಂದ ಕೆಲಸ ಬಿಟ್ಟು ಬಂದು ಮನೆಯಲ್ಲಿಯೇ ಇದ್ದ ಮೂಡಬೆಟ್ಟು ಗ್ರಾಮದ ಮಾರ್ಕ್ ಮಾರ್ಟಿಸ್ (62) ಎಂಬವರು ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಮೇ 19ರಂದು ಬೆಳಗ್ಗೆ ಮನೆಯ ಬಾವಿಯ ನೀರೆತ್ತುವ ಹಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.