ಎಂಎಸ್ಎಂಇ, ಸ್ಟಾರ್ಟ್-ಅಪ್ಗಳ ಸಮಿತಿಗೆ ಸಿಎ ನರಸಿಂಹ ನಾಯಕ್ ನಾಮನಿರ್ದೇಶನ
ನರಸಿಂಹ ನಾಯಕ್
ಉಡುಪಿ : ಉಡುಪಿಯ ಲೆಕ್ಕಪರಿಶೋಧಕ ನರಸಿಂಹ ನಾಯಕ್ ಅವರನ್ನು ೨೦೨೨-೨೩ನೇ ಸಾಲಿನ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿ ಎಂಎಸ್ಎಂಇ ಮತ್ತು ಸ್ಟಾರ್ಟ್-ಅಪ್ಗಳ ಸಮಿತಿಗೆ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ.
ಅವರು ೨೦೧೯-೨೦ನೇ ಸಾಲಿಗೆ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಉಡುಪಿ ಶಾಖೆಯ ಅಧ್ಯಕ್ಷರಾಗಿದ್ದರು. ಅವರು ಕರ್ನಾಟಕ ಸರ್ಕಾರದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಮೆ. ನಾಯಕ್ ಅಸೋಸಿಯೇಟ್ಸ್ ಉಡುಪಿ ಇದರ ಪಾಲುದಾರರಾಗಿದ್ದಾರೆ.
Next Story