ಉಡುಪಿ: ದಿನದಲ್ಲಿ ನಾಲ್ವರು ಕೋವಿಡ್ ಪಾಸಿಟಿವ್
ಉಡುಪಿ : ಶುಕ್ರವಾರವೂ ಮತ್ತೆ ನಾಲ್ವರು ಜಿಲ್ಲೆಯಲ್ಲಿ ಕೋವಿಡ್ಗೆ ಪಾಸಿಟಿವ್ ಬಂದಿದ್ದಾರೆ. ಇಂದು ಎಂಟು ಮಂದಿ ಸೋಂಕಿನಿಂದ ಚೇತರಿಸಿ ಕೊಳ್ಳುವ ಮೂಲಕ ಸದ್ಯ ಜಿಲ್ಲೆಯಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ೨೧ಕ್ಕಿಳಿದಿದೆ.
ಇಂದು ಪರೀಕ್ಷೆಗೊಳಗಾದ ೧೫೫ ಮಂದಿಯಲ್ಲಿ ಮೂವರು ಪುರುಷರು ಹಾಗೂ ಓರ್ವ ಮಹಿಳೆ ಸೇರಿದಂತೆ ಐವರು ಕೋವಿಡ್ಗೆ ಪಾಸಿಟಿವ್ ಬಂದಿದ್ದಾರೆ. ಸೋಂಕು ಪತ್ತೆಯಾದವರಲ್ಲಿ ಒಬ್ಬರು ಮಾತ್ರ ಉಡುಪಿ ತಾಲೂಕಿನ ವರಾದರೆ ಮೂವರು ಕಾರ್ಕಳ ತಾಲೂಕಿನವರು.ಇಂದಿನ ನಾಲ್ವರು ಸಹ ಅವರವರ ಮನೆಗಳಲ್ಲಿದ್ದು ಚಿಕಿತ್ಸೆ ಪಡೆಯುತಿದ್ದಾರೆ.
ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿರುವ ೨೧ ಮಂದಿಯಲ್ಲಿ ಮೂವರು ಆಸ್ಪತ್ರೆಗಳಲ್ಲಿದ್ದಾರೆ. ಒಬ್ಬರು ಐಸಿಯುನಲ್ಲಿದ್ದರೆ, ಇನ್ನೊಬ್ಬರು ವೆಂಟಿಲೇಟರ್ ನಲ್ಲಿದ್ದಾರೆ. ಮತ್ತೊಬ್ಬರಿಗೆ ಎಚ್ಡಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಉಡುಪಿ ತಾಲೂಕಿನ ೯೦ ಮಂದಿಯನ್ನು ಕೋವಿಡ್ ಪರೀಕ್ಷೆಗೊಳ ಪಡಿಸ ಲಾಯಿತು. ಅಲ್ಲದೇ ಕುಂದಾಪುರ ತಾಲೂಕಿನ ೩೦ ಮಂದಿ ಹಾಗೂ ಕಾರ್ಕಳ ತಾಲೂಕಿನ ೩೫ ಮಂದಿಯನ್ನು ಸಹ ಕೋವಿಡ್ಗಾಗಿ ಪರೀಕ್ಷಿಸಲಾಗಿದೆ.