ಮಲ್ಪೆಯಲ್ಲಿ ಗಾಳಕ್ಕೆ ಸಿಕ್ಕಿದ ಬೃಹತ್ ಗಾತ್ರದ ಕುಲೇಜ್, ಕೆಂಬೆರಿ ಮೀನು!
ಮಲ್ಪೆ, ಆ.2: ಮಲ್ಪೆ ಸೀವಾಕ್ವೇ ನಲ್ಲಿ ಅಭಿಲಾಷ್ ಎಂಬವರ ಗಾಳಕ್ಕೆ ಬೃಹತ್ ಗಾತ್ರದ ಕೆಂಬೆರಿ ಮತ್ತು ಕುಲೇಜು ಮೀನು ಸೋಮವಾರ ಸಂಜೆ ದೊರಕಿದೆ.
ಕುಲೇಜ್ ಮೀನು 7 ಕೆ.ಜಿ., ಕೆಂಬೆರಿ 5 ಕೆ.ಜಿ ತೂಕ ಭಾರವನ್ನು ಹೊಂದಿದೆ. ಸಮುದ್ರ ನೀರಿನ ಉಬ್ಬರ ಇಳಿತದ ಸಂದರ್ಭದಲ್ಲಿ ಈ ಮೀನು ಗಾಳಕ್ಕೆ ಸಿಗುತ್ತವೆ. ಮೀನಿನ ಮಾದರಿಯನ್ನು ಹೋಲುವ ವಸ್ತುವನ್ನು ಗಾಳಕ್ಕೆ ಹಾಕಲಾಗುತ್ತದೆ. ಕುಲೇಜು ಕೆ.ಜಿ.ಗೆ 480ರೂ. ಕೆಂಬೆರಿ 450ರೂ.ಗೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ.
Next Story