ಅಂದರ್ ಬಾಹರ್: ಐವರ ಬಂಧನ
ಬ್ರಹ್ಮಾವರ, ಆ.11: ಯಡ್ತಾಡಿ ಗ್ರಾಮದ ದ್ವಾರಾಕಾ ಬೋರ್ಡಿಂಗ್ ಲಾಡ್ಜಿಂಗ್ನ ರೂಮ್ನಲ್ಲಿ ಆ.10ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಐದು ಮಂದಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಕಾರ್ತಿಕ್ (25), ಕಿರಣ್(30), ವಿಠ್ಠಲ(30), ಸಂದೇಶ(29), ಶರಣ್(30) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ಕಿರಣ್ ಮೊಗವೀರ ಲಾಡ್ಜ್ನ ಕಿಟಕಿಯಿಂದ ಹಾರಿ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಬಂಧಿತ ರಿಂದ 23,500ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story