ಗಾಂಜಾ ಸೇವನೆ: ಇಬ್ಬರು ವಶಕ್ಕೆ
ಶಿರ್ವ : ಗಾಂಜಾ ಸೇವನೆಗೆ ಸಂಬಂಧಿಸಿ ಶಿರ್ವ ಪೊಲೀಸರು ಆ.೧೦ ರಂದು ಬೆಳಗ್ಗೆ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುರ್ಕಾಲು ಗ್ರಾಮದ ಕುರ್ಕಾಲ್ ಬ್ರಿಡ್ಜ್ ಬಳಿ ಓರ್ವನನ್ನು ಮತ್ತು ಶಿರ್ವ ಗ್ರಾಮದ ಸೊರ್ಕಳದ ಬಳಿ ಸ್ಥಳೀಯ ನಿವಾಸಿ ರಿವನ್ ರೈ(30) ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಿಬ್ಬರು ಗಾಂಜಾ ಸೇವನೆ ಮಾಡಿರುವುದು ವರದಿಯಿಂದ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story