ಉಡುಪಿ: ದಿನದಲ್ಲಿ 13 ಮಂದಿ ಕೋವಿಡ್ಗೆ ಪಾಸಿಟಿವ್
ಉಡುಪಿ, ಆ. 20: ಶನಿವಾರ ಜಿಲ್ಲೆಯ 13 ಮಂದಿ ಕೋವಿಡ್ಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ ಏಳು ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಸದ್ಯ 43 ಮಂದಿ ಕೋವಿಡ್ಗೆ ಸಕ್ರೀಯರಾಗಿದ್ದು ಚಿಕಿತ್ಸೆಯಲ್ಲಿದ್ದಾರೆ.
ಇಂದು ಪರೀಕ್ಷೆಗೊಳಗಾದ 716 ಮಂದಿಯಲ್ಲಿ 13 ಮಂದಿಯಲ್ಲಿ ಸೋಂಕು ಕಂಡುಬಂದಿದೆ. ಇವರಲ್ಲಿ ಐವರು ಪುರುಷರಾದರೆ ಎಂಟು ಮಂದಿ ಮಹಿಳೆಯರು. ಶನಿವಾರ ಉಡುಪಿ ತಾಲೂಕಿನ ಆರು ಮಂದಿ, ಕುಂದಾಪುರ ತಾಲೂಕಿನ ಐವರು ಹಾಗೂ ಕಾರ್ಕಳ ತಾಲೂಕಿನ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ ೧೧ ಮಂದಿ ತಮ್ಮ ತಮ್ಮ ಮನೆಗಳಲ್ಲಿದ್ದು ಚಿಕಿತ್ಸೆ ಪಡೆಯುತಿದ್ದರೆ, ಇಬ್ಬರು ಆಸ್ಪತ್ರೆಗೆ ಸೇರಿದ್ದಾರೆ. ಸದ್ಯ ಜಿಲ್ಲೆಯಲ್ಲಿ ೧೧ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದು, ಒಬ್ಬರು ವೆಂಟಿಲೇಟರ್ನಲ್ಲಿದ್ದಾರೆ.
ಇಂದು ಉಡುಪಿ ತಾಲೂಕಿನ 309, ಕುಂದಾಪುರ ತಾಲೂಕಿನ 265 ಹಾಗೂ ಕಾರ್ಕಳ ತಾಲೂಕಿನ 142 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
Next Story