ಶಿರ್ವ ಗ್ರಾಪಂ ನೂತನ ಅಧ್ಯಕ್ಷರಾಗಿ ರತನ್ ಕುಮಾರ್ ಶೆಟ್ಟಿ
ರತನ್ ಕುಮಾರ್ ಶೆಟ್ಟಿ
ಶಿರ್ವ, ಸೆ.14: ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಕೆ.ಆರ್. ಪಾಟ್ಕರ್ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ನಡೆದ ಚುನಾ ವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ರತನ್ ಕುಮಾರ್ ಶೆಟ್ಟಿ ಕಲ್ಲೊಟ್ಟು ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ಬೆಂಬಲಿತ ರತನ್ ಕುಮಾರ್ ಶೆಟ್ಟಿ ಹಾಗೂ ಬಿಜೆಪಿ ಬೆಂಬಲಿತ ಶ್ರೀನಿವಾಸ ಶೆಣೈ ನಾಮಪತ್ರ ಸಲ್ಲಿಸಿದ್ದರು. ನೂತನ ಅಧ್ಯಕ್ಷರಾಗಿ ರತನ್ಕುಮಾರ್ ಶೆಟ್ಟಿ 20-14 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. 34 ಸದಸ್ಯ ಬಲದ ಶಿರ್ವ ಗ್ರಾಪಂನಲ್ಲಿ ಕಾಂಗ್ರಸ್ ಬೆಂಬಲಿತ 19 ಸದಸ್ಯರಿದ್ದು, ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಜೆಪಿಯ ಒಂದು ಮತ ಕಾಂಗ್ರೆಸ್ ಪಾಲಾಗಿದೆ. ಚುನಾವಣಾಧಿಕಾರಿಯಾಗಿ ಉಡುಪಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.
Next Story