ಯುವಕ ಆತ್ಮಹತ್ಯೆ
ಹಿರಿಯಡ್ಕ, ಸೆ.14: ತಂದೆ ತಾಯಿ ನಿಧನದಿಂದ ಮಾನಸಿಕವಾಗಿ ನೊಂದಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.14ರಂದು ಬೆಳಗಿನ ಜಾವ ನಡೆದಿದೆ.
ಮೃತರನ್ನು ಕೃತಿಕ್(22) ಎಂದು ಗುರುತಿಸಲಾಗಿದೆ. ಕೃತಿಕ್ ಒಂದು ವರ್ಷದ ಹಿಂದೆ ಪದವಿ ವಿದ್ಯಾಬ್ಯಾಸ ಮುಗಿಸಿ ಮನೆಯಲ್ಲಿಯೇ ಇದ್ದನು. ಆತನ ತಂದೆ ಐದು ತಿಂಗಳ ಹಿಂದೆ ಹಾಗೂ ತಾಯಿ ಸುಮಾರು ವರ್ಷಗಳ ಹಿಂದೆ ಮೃತಪಟ್ಟಿದ್ದರು.
ತಂದೆ ತಾಯಿ ತೀರಿದ ಬಳಿಕ ಅದೇ ವಿಚಾರದಲ್ಲಿ ಅಥಾವ ವೈಯಕ್ತಿಕ ಕಾರಣ ದಿಂದ ಮಾನಸಿಕವಾಗಿ ನೊಂದ ಕೃತಿಕ್ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಸಮೀಪದ ಹಾಡಿಯಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story