ಮನೆಗೆ ನುಗ್ಗಿ ಸೊತ್ತು ಕಳವು
ಸಾಂದರ್ಭಿಕ ಚಿತ್ರ
ಕುಂದಾಪುರ, ಸೆ.22: ಹಂಗಳೂರು ಗ್ರಾಮದ ಸಂಜಯಗಾಂಧಿ ರಸ್ತೆಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಸೆ.17ರ ಸಂಜೆಯಿಂದ ಸೆ.21ರ ಬೆಳಗಿನ ಮಧ್ಯಾವದಿಯಲ್ಲಿ ರಾಧಿಕಾ ರಾವ್ ಕೆ. ಎಂಬವರ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಬೆಡ್ ರೂಂನ ಗೋದ್ರೇಜ್ ಲಾಕರ್ನಲ್ಲ್ದ್ದ ಬೆಳ್ಳಿಯ ಸಾಮಗ್ರಿಗಳಾದ ಬೆಳ್ಳಿಯ ಬಟ್ಟಲು, ಬೆಳ್ಳಿಯ ಚೊಂಬು, ಬೆಳ್ಳಿಯ ಲೋಟಗಳು ಹಾಗೂ 10 ಸಾವಿರ ರೂ.ನಗದು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 85,000 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story