ಇಸ್ಲಾಮಿಕ್ ವೆಲ್ಫೇರ್ ಸೊಸೈಟಿ ಮಹಾಸಭೆ
ಉಡುಪಿ, ಸೆ.24: ಉಡುಪಿ ಇಸ್ಲಾಮಿಕ್ ವೆಲ್ಫೇರ್ ಕ್ರೆಡಿಟ್ ಕೋ-ಆಪ ರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಸೆ.22ರಂದು ಉಡುಪಿಯ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಸಭಾಂಗಣದಲ್ಲಿ ನಡೆಯಿತು.
ಸೊಸೈಟಿಯ ಅಧ್ಯಕ್ಷ ಅಕ್ಬರ್ ಅಲಿ ಉಡುಪಿ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಆರೀಫ್ ಕಾಶಿಮ್ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.
ಉಪಾಧ್ಯಕ್ಷ ಸಲಾಹುದ್ದೀನ್ ಸಾಹೆಬ್ ಲೆಕ್ಕ ಪರಿಶೋಧಕರ ನೇಮಕ ಪ್ರಕ್ರಿಯೆ ನಡೆಸಿಕೊಟ್ಟರು. ನಿರ್ದೇಶಕ ಅನ್ವರ್ ಅಲಿ ಕಾಪು 2021-22 ಸಾಲಿನ ವಾರ್ಷಿಕ ವರದಿಯನ್ನು ಓದಿ ದಾಖಲಿಸಿದರು. ನಿರ್ದೇಶಕ ಮುಹಮ್ಮದ್ ಇಕ್ಬಾಲ್ ಕಾಪು 2022-23 ಸಾಲಿನ ಅಂದಾಜು ಆಯವ್ಯಯ ಪತ್ರದ ಮಂಡನೆ ಮಾಡಿದರು. ಸದಸ್ಯ ಮುಹಮ್ಮದ್ ಶಾರುಕ್ ಮಹಾಸಭೆಯ ಆಮಂತ್ರಣ ಪತ್ರಿಕೆ ಓದಿ ದಾಖಲಿಸಿದರು.
ಆರಂಭದಲ್ಲಿ ಸದಸ್ಯರಾದ ಮೌಲಾನಾ ದಾನಿಶ್ ಪ್ರಾರ್ಥನೆ ನೆರವೇರಿಸಿದರು. ನಿರ್ದೇಶಕ ನಿಸಾರ್ ಅಹ್ಮದ್ ಸ್ವಾಗತಿಸಿದರು. ನಿರ್ದೇಶಕ ರಿಯಾಝ್ ಅಹ್ಮದ್ ವಂದಿಸಿದರು. ನಿರ್ದೇಶಕ ಜಿ.ಎಂ.ಶರೀಫ್ ಹೂಡೆ ಕಾರ್ಯಕ್ರಮ ನಿರೂಪಿಸಿ ದರು.
Next Story