ಗಾಂಜಾ ಸೇವನೆ ಆರೋಪ : ಮೂವರು ವಶಕ್ಕೆ
ಮಣಿಪಾಲ, ಸೆ.28: ಗಾಂಜಾ ಸೇವನೆಗೆ ಸಂಬಂಧಿಸಿ ಸೆ.೨೬ರಂದು ಮಣಿಪಾಲದ ಶೀಂಬ್ರಾ ಸೇತುವೆ ಬಳಿ ಚೆರಿಯನ್ ಅಬ್ರಾಹಂ (21), ಜೊಯಲ್ ಜಾನ್ಸನ್(21), ಮ್ಯಾಥ್ಯೂ ಬೇಬಿ(21) ಎಂಬವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇವರನ್ನು ಮಣಿಪಾಲ ಕೆಎಂಸಿ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿ ಪರೀಕ್ಷೆಗೆ ಒಳಪಡಿಸಿದ್ದು, ಇವರೆಲ್ಲ ಗಾಂಜಾ ಸೇವಿಸಿರುವುದು ವರದಿಯಿಂದ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story