ಅ.8ರಂದು ಗೋವಾ ಸಿಎಂ ಉಡುಪಿಗೆ
ಉಡುಪಿ, ಅ.7: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಅ.8ರಂದು ಉಡುಪಿಗೆ ಆಗಮಿಸಲಿದ್ದು, ಇಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ ಧರ್ಮಸ್ಥಳದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಉಡುಪಿಗೆ ಅಪರಾಹ್ನ 3.30ಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ಮೊದಲು ಪ್ರಸಾದ್ ನೇತ್ರಾಲಯದಲ್ಲಿ ನ್ಯೂ ಡಿಜಿಟಲ್ ಸಿಸ್ಟಮ್ ಉದ್ಘಾಟಿಸಲಿದ್ದಾರೆ. ಬಳಿಕ ಸಂಜೆ 4.40ಕ್ಕೆ ಉಡುಪಿ ಶ್ರೀಕೃಷ್ಣ ಮಠ, 5ಕ್ಕೆ ಜಿಲ್ಲಾ ಬಿಜೆಪಿ ಕಚೇರಿ ಹಾಗೂ 5.20ಕ್ಕೆ ಮಾಹೆ ವಿವಿಗೆ ಭೇಟಿ ನೀಡಿ ಸಂಜೆ 6ಕ್ಕೆ ಉಡುಪಿಯಿಂದ ಗೋವಾಕ್ಕೆ ಮರಳಲಿದ್ದಾರೆ.
Next Story