ಕುಸಿದು ಬಿದ್ದು ಯುವಕ ಮೃತ್ಯು
ಶಂಕರನಾರಾಯಣ, ಅ.17: ಪತ್ನಿ ಜೊತೆ ಮೊಬೈಲ್ನಲ್ಲಿ ಲೂಡ ಆಡುತ್ತಿದ್ದ ವ್ಯಕ್ತಿಯೊಬ್ಬರು ಹಠಾತ್ತನೆ ಕುಸಿದು ಬಿದ್ದು ಮೃತಪಟ್ಟ ಘಟನೆ ಅ.16ರಂದು ರಾತ್ರಿ ವೇಳೆ ಶಂಕರನಾರಾಯಣ ಕೌಲಾಳಿ ಎಂಬಲ್ಲಿ ನಡೆದಿದೆ.
ಮೃತರನ್ನು ಕೌಲಾಳಿ ನಿವಾಸಿ ಜಯರಾಮ (30) ಎಂದು ಗುರುತಿಸಲಾಗಿದೆ. ಇವರು ತನ್ನ ಪತ್ನಿ ಜೊತೆ ಮೊಬೈಲ್ನಲ್ಲಿ ಲೂಡ ಆಡುತ್ತಿದ್ದಾಗ ಒಮ್ಮೇಲೆ ಕುಸಿದು ಬಿದ್ದರು. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರು, ಶಂಕರನಾರಾಯಣದ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story