ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಶಿರ್ವ, ನ.19: ಮನೆಯೊಂದಕ್ಕೆ ನ.18ರಂದು ರಾತ್ರಿ ವೇಳೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಬಲ್ಕೀಸ್ ಬಾನು ಎಂಬವರ ಮನೆಯ ಹಿಂದುಗಡೆಯ ಮರದ ಬಾಗಿಲಿಗೆ ಹಾಕಿದ್ದ ಟವರ್ ಲಾಕ್ನ್ನು ಪಕ್ಕದಲ್ಲಿದ್ದ ಕಿಟಕಿಯ ಮೂಲಕ ತೆಗೆದು ಮನೆಯ ಒಳಗಡೆ ನುಗ್ಗಿದ ಕಳ್ಳರು, ಮರದ ಕಪಾಟಿನಟ್ಟಿದ್ದ 2 ಕೈ ಬಲೆ, ಬಂಗಾರದ ಉದ್ದ ಸರ, ಮುತ್ತಿನ ಹಾರ, 2 ಉಂಗುರ, ಬ್ರಾಸ್ಲೈಟ್ಗಳನ್ನು ಕಳವು ಮಾಡಿರುವುದಾಗಿ ದೂರಲಾಗಿದೆ. ಇವುಗಳ ಒಟ್ಟು ಮೌಲ್ಯದ 4.24 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story