-

ಕರಾವಳಿ ಕಡಲಿನಲ್ಲಿ ಹೇರಳವಾಗಿ ಸಿಗುತ್ತಿದೆ ಬೂತಾಯಿ, ಬಂಗುಡೆ

-

ಉಡುಪಿ, ಡಿ.4: ಕರಾವಳಿಯ ಮೀನು ಪ್ರಿಯರಿಗೆ ಈ ಬಾರಿ ಧಾರಾಳವಾಗಿ ಲಭ್ಯವಾಗುತ್ತಿದೆ ಜನಪ್ರಿಯ ಮೀನುಗಳಾದ ಬೂತಾಯಿ ಮತ್ತು ಬಂಗುಡೆ. ಕಳೆದೆರಡು ವರ್ಷಗಳಲ್ಲಿ 100ರೂ.ಗೆ ಗರಿಷ್ಟ ಎರಡು ಸಿಗುತಿದ್ದ ದೊಡ್ಡ ಗಾತ್ರದ ತಾಜಾ ಬಂಗುಡೆ ಈ ಬಾರಿ ಕನಿಷ್ಠ 8-10ರಷ್ಟು ಧಾರಾಳವಾಗಿ ಸಿಗುತ್ತಿದೆ.

ಇದಕ್ಕೆ ಕೊರೋನದಿಂದಾಗಿ ಕಳೆದೆರಡು ವರ್ಷಗಳಲ್ಲಿದ್ದ ಲಾಕ್‌ಡೌನ್ ಹಾಗೂ ಮೀನುಗಾರಿಕೆಯ ಮೇಲೆ ವಿಧಿಸಿದ್ದ ನಿರ್ಬಂಧಗಳೊಂದಿಗೆ, ಪದೇ ಪದೇ ಸಂಭವಿಸುತಿದ್ದ ಪ್ರಾಕೃತಿಕ ವಿಕೋಪಗಳಿಂದ ಮೀನುಗಾರಿಕೆ ಮೇಲೆ ವಿಧಿಸಲಾಗುತಿದ್ದ  ನಿಷೇಧವೂ ಕಾರಣವಾಗಿದೆ ಎಂದು ಮೀನುಗಾರರು ಹಾಗೂ ತಜ್ಞರು ಹೇಳುತ್ತಾರೆ.

ಇವುಗಳಿಂದಾಗಿ ಕಳೆದೆರಡು ವರ್ಷಗಳಲ್ಲಿ ಮೀನುಗಾರಿಕೆ ನಿರೀಕ್ಷಿತ ಮಟ್ಟದಲ್ಲಿ ನಡೆದೇ ಇರಲಿಲ್ಲ. ಇದು ಮೀನುಗಾರರ ಸಮುದಾಯ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಿದ್ದರೂ, ಈ ಬಾರಿ ಕೆಲವು ಜಾತಿಯ ಮೀನುಗಳು ಭಾರೀ ಪ್ರಮಾಣದಲ್ಲಿ ಲಭ್ಯವಾಗುತ್ತಿದೆ. ಇವುಗಳಲ್ಲಿ ಬೂತಾಯಿ ಜಾತಿಯ ಮೀನಿಗೆ ಅಗ್ರಸ್ಥಾನ ಎನ್ನಬಹುದು. ಕಳೆದ 3-4 ವರ್ಷಗಳಿಂದ ಮೀನುಗಾರರ ಬಲೆಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗದ ಬೂತಾಯಿಯ ಬೇರೆ ಬೇರೆ ಗಾತ್ರದ  ಮೀನು ಈ ಬಾರಿ ಭಾರೀ ಪ್ರಮಾಣದಲ್ಲಿ ಸಿಗುತ್ತಿದೆ. ಹೀಗಾಗಿ ತೀರಾ ಕಡಿಮೆ ದರಕ್ಕೆ ಈ ಮೀನುಗಳು ಮಾರಾಟವಾಗುತ್ತಿವೆ.

ಇದರೊಂದಿಗೆ ಕಳೆದೆರಡು ವರ್ಷಗಳಲ್ಲಿ ಲೈಟ್ ಫಿಶಿಂಗ್, ಬೂಲ್‌ಟ್ರಾಲ್ ಸಹಿತ ಕಾನೂನು ಬಾಹಿರ ಮೀನುಗಾರಿಕೆಗೂ ಕಡಿವಾಣ ಬಿದ್ದ ಪರಿಣಾಮ ಸಮುದ್ರದಲ್ಲಿ ಮತ್ಸ್ಯ ಸಂತಾನೋತ್ಪತ್ತಿ ವೃದ್ಧಿಯಾಗಿದ್ದು ಸಹ ರುಚಿಕರ ಬೂತಾಯಿ, ಬಂಗುಡೆ ಸಹಿತ ವಿವಿಧ ಜಾತಿಯ ಮೀನುಗಳು ಹೇರಳವಾಗಿ ಸಿಗಲು ಕಾರಣ ಎನ್ನಬಹುದು.

ಎರಡು ವರ್ಷಗಳ ಬಳಿಕ ಎಲ್ಲಾ ವಿಧದ ಮೀನುಗಾರಿಕೆ ಈ ಬಾರಿ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಸೀಮೆಎಣ್ಣೆ  ಲಭ್ಯತೆಯ ಕಾರಣದಿಂದ ನಾಡದೋಣಿ ಮೀನುಗಾರಿಕೆಗೆ ಹಿನ್ನಡೆಯಾಗಿದ್ದರೂ, ಆಳಸಮುದ್ರ ಮೀನುಗಾರಿಕೆ ಸೇರಿದಂತೆ ಎಲ್ಲಾ ವಿಧದ ಮೀನುಗಾರಿಕೆ ಬಿರುಸಾಗಿ ನಡೆಯುತ್ತಿದೆ. ಆರಂಭದ ದಿನಗಳಲ್ಲಿ ಸ್ವಲ್ಪ ನಿಧಾನಗತಿಯಲ್ಲಿದ್ದರೂ, ಈಗ ಕರಾವಳಿಯಲ್ಲಿ ಮೀನುಗಾರಿಕೆ ಚೇತರಿಸಿಕೊಂಡಿದೆ. 

2 ಬಾರಿ ಸಂತಾನ ವೃದ್ಧಿ: ಬಂಗುಡೆ, ಬೂತಾಯಿ ಸಹಿತ ಕೆಲ ಮೀನುಗಳು ವರ್ಷಕ್ಕೆ 2 ಬಾರಿ ಸಂತಾನ ವೃದ್ಧಿ ಮಾಡುತ್ತವೆ. ಬಂಗುಡೆ, ಬೂತಾಯಿಯದ್ದು ಸಾಮಾನ್ಯವಾಗಿ ಮಾರ್ಚ್‌ನಿಂದ ಮೇವರೆಗೆ ಹಾಗೂ ಜೂನ್‌ನಿಂದ ಆಗಸ್ಟ್‌ವರೆಗೆ ಸಂತಾನೋತ್ಪತ್ತಿ ಸಮಯವಾಗಿರುತ್ತದೆ. ಅವು ಸಮುದ್ರದಲ್ಲಿನ ಸೂಕ್ಷ್ಮ ಜೀವಿಗಳನ್ನು ತಿನ್ನುವುದರಿಂದ ಬೇಗನೇ ಬೆಳೆಯುತ್ತವೆ. ಹೀಗಾಗಿ ಈ ಬಾರಿ ನಾನಾ ಗಾತ್ರದ ಬಂಗುಡೆ, ಬೂತಾಯಿ ಮೀನುಗಳು ಹೇರಳವಾಗಿ ಲಭ್ಯವಾಗುತ್ತಿವೆ ಎಂದು ಕಾರವಾರ ಕಡಲಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ಹರಗಿ ಹೇಳುತ್ತಾರೆ.

2019ಕ್ಕೂ ಮೊದಲು ಬೂತಾಯಿ, ಬಂಗುಡೆ ಲಭ್ಯವಾಗುವುದು ಬಹಳ ವಿರಳವಾಗಿತ್ತು. ಆದರೆ ಈ ಬಾರಿ ಮೀನುಗಾರಿಕಾ ಋತುವಿನಲ್ಲಿ ಮತ್ಸ್ಯ ಸಂಪತ್ತು ಹೇರಳವಾಗಿ ಸಿಗುತ್ತಿದೆ. ಮೀನುಗಾರಿಕೆಗೆ ತೆರಳಿದ ಎಲ್ಲಾ ಬೋಟ್‌ಗಳಿಗೂ ಬಂಗುಡೆ, ಬೂತಾಯಿ ಸಿಕ್ಕರೆ ಮಾರುಕಟ್ಟೆಯಲ್ಲಿ ಸಮಸ್ಯೆ ಆಗುತ್ತದೆ. ಅಲ್ಲದೇ ಮತ್ಸ್ಯ ಸಂತತಿಯೂ ನಾಶವಾಗುತ್ತದೆ. ಹೀಗಾಗಿ ಮೀನುಗಾರರೆಲ್ಲರೂ ಸಂಘಟಿತ ಹಾಗೂ ವ್ಯವಸ್ಥಿತ ಮೀನುಗಾರಿಕೆಗೆ ಮುಂದಾಗಬೇಕೆಂದು ಡಾ. ಹರಗಿ ಸಲಹೆ ನೀಡುತ್ತಾರೆ.

ಕೋಲ್ಡ್ ಸ್ಟೋರೇಜ್: ಮತ್ಸ್ಯ ಸಂಪತ್ತು ಅತೀ ದುಬಾರಿ ಹಾಗೂ ಅತೀ ಬೇಗನೇ ಕೊಳೆಯುವ ವಸ್ತು. ದೊಡ್ಡ ಪ್ರಮಾಣದಲ್ಲಿ ಮತ್ಸ್ಯ ಲಭ್ಯವಾದರೆ ಸ್ಟೋರೇಜ್ ಮಾಡುವುದು ಕೂಡಾ ಸಮಸ್ಯೆ. ಇದಕ್ಕಾಗಿ ದಿನಕ್ಕಿಷ್ಟು ಬೋಟ್‌ಗಳಂತೆ ಮೀನುಗಾರಿಕೆ ನಡೆಸಬೇಕು. ಈ ಮೂಲಕ ಮತ್ಸ್ಯ ಸಂಪತ್ತು ಹಾಗೂ ಉದ್ಯಮವನ್ನು ಉಳಿಸಿಕೊಳ್ಳಬೇಕು ಎಂದವರು ಹೇಳಿದರು.

ಮೊದಲೆಲ್ಲಾ ಅರಬ್ಬಿ ಸಮುದ್ರದಲ್ಲಿ ಬೂತಾಯಿ, ಬಂಗುಡೆ ಮೀನು ಯಥೇಚ್ಛವಾಗಿ ಸಿಗುತ್ತಿತ್ತು. ಆದರೆ ಕಳೆದ 3-4 ವರ್ಷಗಳಿಂದ ಬೂತಾಯಿ, ಬಂಗುಡೆ ಮೀನಿನ ಲಭ್ಯತೆ ಕಡಿಮೆ ಇತ್ತು. ಈ ಬಾರಿ ಮತ್ತೆ ಹೇರಳವಾಗಿ ಸಿಗುತ್ತಿದೆ. ರುಚಿಕರವೂ ಆಗಿದೆ ಎನ್ನುತ್ತಾರೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋಪಾಲ್ ಆರ್.ಕೆ.

"ವೈಜ್ಞಾನಿಕ ಮೀನುಗಾರಿಕೆ ಮತ್ತು ಕಾನೂನು ಬಾಹಿರ ಮೀನುಗಾರಿಕೆಗೆ ಕಡಿವಾಣ ಹಾಕಿರುವುದರಿಂದ ಮತ್ಸ್ಯ ಸಂತತಿ ಹೆಚ್ಚಳವಾಗಿದೆ. ಮತ್ಸ್ಯ ಸಂಪತ್ತು ಮರು ನವೀಕರಿಸಬಹುದಾದ ಸಂಪನ್ಮೂಲವಾಗಿದ್ದು, ಒಂದೆರಡು ವರ್ಷ ಮತ್ಸ್ಯ ಬೇಟೆಯಾಗದೇ ಹೋದರೆ ಸಂತತಿ ವೃದ್ಧಿಯಾಗುತ್ತದೆ".
-ಡಾ. ಶಿವಕುಮಾರ್ ಹರಗಿ, ಸಹಾಯಕ ಪ್ರಾಧ್ಯಾಪಕರು, ಕಾರವಾರ ಕಡಲ ಜೀವಶಾಸ್ತ್ರ ವಿಭಾಗ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top