ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ಪದಕ
ಉಡುಪಿ: ನ್ಯೂಝಿಲ್ಯಾಂಡ್ನ ಆಕ್ಲೆಂಡ್ನಲ್ಲಿ ಇತ್ತೀಚೆಗೆ ನಡೆದ ಕಾಮನ್ ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ಉಡುಪಿ ಅಜ್ಜರಕಾಡಿನ ಡಾ. ಜಿ.ಶಂಕರ್ ಸರಕಾರಿ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿನಿ ಪ್ರತೀಕ್ಷಾ ಪದಕ ಗೆದ್ದುಕೊಂಡಿದ್ದಾರೆ.
ಮಹಿಳೆಯರ ಜೂನಿಯರ್ 84 ಕೆ.ಜಿ ವಿಭಾಗದಲ್ಲಿ ಎಕ್ವಿಪ್ಟ್ ಪವರ್ ಲಿಫ್ಟಿಂಗ್ನಲ್ಲಿ ಪ್ರಥಮ ಸ್ಥಾನ, ಸ್ಕ್ವಾಟ್ನಲ್ಲಿ 193 ಕೆ.ಜಿ ಭಾರ ಎತ್ತುವ ಮೂಲಕ ಕೂಟ ದಾಖಲೆಯನ್ನು ಇವರು ನಿರ್ಮಿಸಿದ್ದಾರೆ. ಇಕ್ವಿಪ್ಟ್ ಹಾಗೂ ಅನ್ ಎಕ್ವಿಪ್ಟ್ ಬೆಚ್ಪ್ರೆಸ್ ಸ್ಪರ್ಧೆಯಲ್ಲಿ ಚಿನ್ನದ ಪದಕದ ಜೊತೆಗೆ ಬಲಶಾಲಿ ಮಹಿಳೆ ಎಂಬ ಟೈಟಲ್ ಪಡೆದುಕೊಂಡಿದ್ದಾರೆ.
ಈ ಸಾಧನೆಗೆ ಪೋಷಕರು, ಕೋಚ್, ಕಾಲೇಜಿನ ಪ್ರಾಂಶುಪಾಲರು, ದೈಹಿಕ ಶಿಕ್ಷಣ ಶಿಕ್ಷಕರು, ಕ್ರೀಡೆ ಹಾಗೂ ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಸಿಬ್ಬಂದಿಗಳ ಪ್ರೋತ್ಸಾಹವೇ ಕಾರಣ ಎಂದು ಪ್ರತೀಕ್ಷಾ ತಿಳಿಸಿದ್ದಾರೆ.
Next Story