ಬ್ರಹ್ಮಾವರ: ಹೊಸ ವಾಹನಗಳ ಸೈಲೆನ್ಸರ್ ಕಳವು
ಬ್ರಹ್ಮಾವರ : ಉಪ್ಪೂರು ಗ್ರಾಮದ ರಾಹೆ 66ರ ಬದಿಯಲ್ಲಿರುವ ಆಭರಣ ಮೋಟಾರ್ಸ್ಗೆ ಸಂಬಂಧಿಸಿದ ಮಾರುತಿ ಕಾರುಗಳ ಸ್ಟಾಕ್ ಯಾರ್ಡ್ ನಲ್ಲಿ ನಿಲ್ಲಿಸಿದ್ದ ಹೊಸ ವಾಹನಗಳ ಸೈಲೆನ್ಸರ್ ಕಳವು ಮಾಡಿರುವ ಘಟನೆ ಡಿ.6ರಂದು ಬೆಳಕಿಗೆ ಬಂದಿದೆ.
ಯಾರ್ಡ್ನಲ್ಲಿ ನಿಲ್ಲಿಸಲಾದ ನೊಂದಣಿ ಆಗದೇ ಇರುವ ಮೂರು ಮಾರುತಿ ಸೂಪರ್ ಕ್ಯಾರಿ ಗೂಡ್ಸ್ ವಾಹನಗಳ ಸೈಲೆನ್ಸರ್ಗಳನ್ನು ಕಳ್ಳರು ಕಳವು ಮಾಡಿ ಕೊಂಡು ಹೋಗಿದ್ದಾರೆ. ಕಳುವಾದ ಸೊತ್ತುಗಳ ಒಟ್ಟು ಮೌಲ್ಯ 2,10,000 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story