ಪ್ರಧಾನಿ ಮೋದಿಯ ಜನಪ್ರಿಯತೆಯ ಗ್ರಾಫ್ ಇಳಿಯದಿರಲು ಕಾರಣವೇನು?

 ದೇಶದ ಅರ್ಥವ್ಯವಸ್ಥೆ ಮೂರಾಬಟ್ಟೆಯಾಗಿದೆ. ಕೊರೋನ ಸೋಂಕು ದೇಶದಲ್ಲಿ ಮಿತಿಮೀರಿ ಏರುತ್ತಿದೆ. ಚೀನಾ ದೇಶ ಹಿಮಾಲಯದ ಗಡಿಯಲ್ಲಿ ತಂಟೆ ಮಾಡುತ್ತಾ ಹತ್ತಾರು ಭಾರತೀಯ ಸೈನಿಕರ ಸಾವಿಗೆ ಕಾರಣವಾಗಿದೆ. ತೆರಿಗೆ ರೂಪದಲ್ಲಿ ಬರುತ್ತಿದ್ದ ಆದಾಯ ಕಡಿತಗೊಂಡಿದೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ 21 ಮಿಲಿಯನ್ ಭಾರತೀಯರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಇಷ್ಟಾದರೂ, ಇತ್ತೀಚೆಗೆ ತಮ್ಮ ನಿವಾಸದ ತೋಟದಲ್ಲಿ ನವಿಲುಗಳಿಗೆ ತಿನಿಸುತ್ತಿರುವ ಚಿತ್ರವನ್ನು ಬಿಡುಗಡೆ ಮಾಡಿದ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಒಂದಿಷ್ಟು ಕುಗ್ಗಿಲ್ಲ!

ಇದನ್ನು ಮೋದಿ ಹೇಗೆ ಸಾಧಿಸಿದರು? ವಿವಿಧ ದೇಶಗಳ ನಾಯಕರು ಕೊರೋನ ಕಾಯಿಲೆಗೆ ಭಿನ್ನಭಿನ್ನ ರೀತಿಯಲ್ಲಿ ಸ್ಪಂದಿಸಿದ್ದರೂ, ಬಹುತೇಕರು ಜನಪ್ರಿಯತೆಯ ವಿಚಾರದಲ್ಲಿ ಪರದಾಡುತ್ತಿದ್ದಾರೆ. ಮೆಕ್ಸಿಕೋ ದೇಶದ ಅಧ್ಯಕ್ಷರ ಜನಪ್ರಿಯತೆ ಪ್ರತಾಪಕ್ಕೆ ಕುಸಿದಿದೆ. ಅನೇಕ ತಪ್ಪುಗಳನ್ನು ಎಸಗಿದ ಬ್ರಿಟಿಷ್ ಪ್ರಧಾನಿ ಬೋರಿಸ್‌ಜಾನ್ಸನ್ ಸದ್ಯಕ್ಕೆ ತಳಹಿಡಿದಿದ್ದಾರೆ. ರಶ್ಯದ ಪುಟಿನ್ ಪಕ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಠಿಣ ಸವಾಲನ್ನು ಎದುರಿಸುತ್ತಿದೆ. ಇನ್ನು ಅಮೆರಿಕದ ಅಧ್ಯಕ್ಷ ಟ್ರಂಪ್‌ರ ಚುನಾವಣೆ ಪ್ರಚಾರ ಕೊರೋನ ಅನ್ನುವುದು ಇಲ್ಲವೇ ಇಲ್ಲ ಎನ್ನುವ ವಾದವನ್ನು ಅವಲಂಬಿಸಿದೆ. ಹಾಗಿದ್ದರೆ, ಮೋದಿಯ ಯಶಸ್ಸಿನ ಗುಟ್ಟೇನು?

ಓರ್ವ ಜನಪ್ರಿಯ ನಾಯಕ ಮತ್ತು ಅವನ ಮತದಾರರ ನಡುವಿನ ಸಂಬಂಧವನ್ನು ಮೋದಿ ಇತರರಿಗಿಂತ ಭಿನ್ನವಾಗಿ ಅರ್ಥೈಸಿಕೊಂಡಿದ್ದಾರೆ. ತೀವ್ರವಾದ ಬಿಕ್ಕಟ್ಟಿನ ಸನ್ನಿವೇಶದಲ್ಲಿ ‘ನೇರ ಹಣಕಾಸು ನೆರವು’ ನೀಡುವ ಮೂಲಕ ಬ್ರೆಝಿಲ್ ದೇಶದ ಅಧ್ಯಕ್ಷರ ತರಹ ಅಲ್ಪಕಾಲದವರೆಗೆ ಜನಪ್ರಿಯತೆಯನ್ನು ಹೊಂದಬಹುದು; ಇಲ್ಲವೇ ಟರ್ಕಿಯ ಅಧ್ಯಕ್ಷರ ರೀತಿ ‘ಅಸ್ಮಿತೆಯ ರಾಜಕೀಯವನ್ನು’ ಮುಂದಿಟ್ಟು ಇರುವ ತೀವ್ರ ಸಮಸ್ಯೆಯಿಂದ ದೂರಕ್ಕೆ ಜನರ ಗಮನವನ್ನು ಸೆಳೆಯಬಹುದು. ಇಂತಹ ಪ್ರಯೋಗ ಭಾರತದಲ್ಲೂ ಈಗ ನಡೆಯುತ್ತಿದೆ ಎನ್ನುವುದನ್ನು ನಾವು ಗಮನಿಸಬೇಕಿದೆ. ಇದೆಲ್ಲವನ್ನೂ ಮೀರಿ ಮತ್ತೊಂದು ಅಂಶದ ಲಾಭವನ್ನು ಮೋದಿ ಪೂರ್ಣವಾಗಿ ಪಡೆಯುತ್ತಿದ್ದಾರೆ. ಚತುರ ಜನಪ್ರಿಯ ನಾಯಕರು ದೇಶದ ಜನರ ಗಮನವನ್ನು ಅನ್ಯದಿಕ್ಕಿನಡೆಗೆ ಸೆಳೆಯುವ ಮೂಲಕ ಅವರನ್ನು ಕಟುವಾಸ್ತವದಿಂದ ದೂರವಿಡುತ್ತಾರೆ. ಅಲ್ಲದೆ, ಇದರ ಮೂಲಕ ಪರ್ಯಾಯ ಸತ್ಯವನ್ನು ಹೊಸೆಯುತ್ತಾರೆ ಮತ್ತು ಈ ಪರ್ಯಾಯ ಸತ್ಯದಲ್ಲಿ ಅವರೇ ‘ಮಹಾನಾಯಕರೂ’ ಆಗಿರುತ್ತಾರೆ. ತೀವ್ರವಾದ ಆರ್ಥಿಕ ಹಿಂಜರಿತ ಹಾಗೂ ಮಹಾಸೋಂಕುಗಳ ಸಂದರ್ಭದಲ್ಲಿ ಇವರು ‘ಕ್ರಮ ಜರುಗಿಸುವ’ ಕಾರ್ಯವನ್ನು ಮಾಡಬೇಕಿರುತ್ತದೆ. ಹಾಗಾಗಿ, ಇವರು ಒಂದು ದೊಡ್ಡ ಪ್ರಮಾಣದ ನಿರ್ಧಾರವನ್ನು ಕೈಗೊಳ್ಳುತ್ತಾರೆ ಮತ್ತು ಇದರ ಸುತ್ತವೇ ಅವರ ಹಿಂಬಾಲಕರು ಒಂದು ನಿರೂಪಣೆಯನ್ನು ರೂಪಿಸುತ್ತಾ ಸಾಗುತ್ತಾರೆ. ಈ ಮಹಾ ನಿರ್ಧಾರವು ಬಹಳ ಧೈರ್ಯದ, ಕಠಿಣವಾದ, ಬುದ್ಧಿವಂತಿಕೆಯ, ಆದರ್ಶವಾದ ಮತ್ತು ಮಹಾಪಾಲಕನೊಬ್ಬನ ಕ್ರಮವೆಂದು ಬಿಂಬಿತವಾಗುತ್ತದೆ. 2016ರಲ್ಲಿ ಮೋದಿಯವರು ಕೇವಲ ಕೆಲವೇ ಗಂಟೆಗಳ ಮುನ್ಸೂಚನೆಯೊಂದಿಗೆ ನೋಟು ಅಮಾನ್ಯ ಮಾಡಿದ್ದು ಮೇಲುನೋಟಕ್ಕೆ ಕಾಣುವಂತೆ ಮಹಾಹಾನಿಕಾರಕ ಕ್ರಮವಾಗಿತ್ತು. ಜನ ತಮ್ಮ ನೌಕರಿಗಳನ್ನು ಮತ್ತು ಬದುಕನ್ನು ಕಳೆದುಕೊಂಡರು.

ದೇಶದ ಅರ್ಥವ್ಯವಸ್ಥೆ ಮಾರಣಾಂತಿಕ ಹೊಡೆತವನ್ನು ತಿಂದಿತು. ನಂತರದ ದಿನಗಳಲ್ಲಿ, ಈ ಕ್ರಮದ ಮೊದಲು ಇದ್ದಂತಹ ಸ್ಥಿತಿಗೆ ನೋಟುಗಳ ಚಲಾವಣೆ ಬಂದಕಾರಣ, ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ ಎನ್ನುವುದು ಸತ್ಯವಾಗಿದೆ. ಆದರೆ, ಈ ಕ್ರಮದಿಂದ ಮೋದಿಯವರು ಒಂದು ಪಾಠವನ್ನಂತೂ ಕಲಿತರು. ನೀವು ತೆಗೆದುಕೊಂಡ ಕ್ರಮದ ಫಲವೇನು ಎನ್ನುವುದು ಮುಖ್ಯವಲ್ಲ; ಬದಲಿಗೆ ನೀವು ತೆಗೆದುಕೊಂಡ ನಿರ್ಧಾರ ಎಷ್ಟು ಬೃಹತ್ತಾದುದು ಮತ್ತು ಭಿನ್ನವಾದುದು ಎನ್ನುವುದಷ್ಟೇ ಮುಖ್ಯ! ಇಂತಹದೊಂದು ಕಠಿಣವಾದ ಮತ್ತು ಬಲವಾದ ಕ್ರಮವನ್ನು ಉತ್ತಮ ಉದ್ದೇಶದ ಕಾರಣಕ್ಕೆ ನೀವು ಜರುಗಿಸುವ ಧೈರ್ಯ ಮಾಡಿದಿರಿ ಎನ್ನುವುದೇ ಎಂದಿಗೂ ಜನರಿಗೆ ಮುಖ್ಯವಾಗುತ್ತದೆ. ನೋಟು ಅಮಾನ್ಯದ ಕುರಿತು ಭಾರತದ ಬಹುತೇಕ ಮತದಾರರು ಇದನ್ನೇ ಚಿಂತಿಸಿದ್ದು. ಈ ಕ್ರಮ ನಿರೀಕ್ಷಿತ ಫಲವನ್ನು ನೀಡದೇ ಇರಲು ಇತರರು ಕಾರಣವೇ ಹೊರತು ಮೋದಿಯವರಲ್ಲ.

ಮೋದಿಯವರು ಇದನ್ನು ತಡೆಗಟ್ಟುವ ಯತ್ನವನ್ನಾದರೂ ಮಾಡಿದರು, ಅಧಿಕಾರಿಗಳು ಮತ್ತು ಇತರ ನಾಯಕರು ಇದನ್ನೂ ಸಹಾ ಮಾಡಲಿಲ್ಲ. ಇಂತಹ ಕಠಿಣ ಕ್ರಮವನ್ನು ಅಥವಾ ನಿರ್ಧಾರವನ್ನು ಭಾರತದ ಇತಿಹಾಸದಲ್ಲೇ ಮೋದಿಯವರನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಧಾನಿ ಮಾಡಲೇ ಇಲ್ಲ ಎಂದು ಜನ ಭಾವಿಸಿದರು. ಈ ಕಾರಣದಿಂದಲೇ, ಇಡೀ ದೇಶ ನೋಟು ಅಮಾನ್ಯದ ಪರಿಣಾಮದಡಿಯಲ್ಲಿ ತತ್ತರಿಸುತ್ತಿರಬೇಕಾದರೆ, ಬಿಜೆಪಿ ದೊಡ್ಡ ರಾಜ್ಯಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದ್ದು. ಯಾವ ಪ್ರದೇಶದಲ್ಲಿ ನೋಟು ಅಮಾನ್ಯದ ತೀವ್ರ ಪ್ರಭಾವ ಉಂಟಾಗಿತ್ತೋ ಆ ಪ್ರದೇಶದಲ್ಲೇ ಬಿಜೆಪಿಯು ಹೆಚ್ಚಿನ ಮತಗಳನ್ನು ಪಡೆದಿತ್ತು ಎನ್ನುವುದನ್ನು ರಾಜಕೀಯ ತಜ್ಞರಾದ ಶ್ರೀರಿಖಿಲ್‌ಭವಾನಿ ಮತ್ತು ಮಾರ್ಕ್ ಕೊಪ್ಲೋವಿಚ್ ಅವರು ಅಧ್ಯಯನದ ಮೂಲಕ ತಿಳಿದುಕೊಂಡರು. ‘‘ಔಷಧಿ ಕಹಿಯಾದಷ್ಟು, ವೈದ್ಯನಿಗೆ ರೋಗಿಯ ಮೇಲೆ ಹೆಚ್ಚಿನ ಕಾಳಜಿ ಇದೆ ಎಂದರ್ಥ’’ ಎನ್ನುವ ನಂಬಿಕೆಯ ವಾಸ್ತವಿಕ ಉದಾಹರಣೆಯಿದಾಗಿರುತ್ತದೆ.

ಕೊರೋನ ಸೋಂಕು ದೇಶದ ಬಾಗಿಲಿಗೆ ಬಂದಿದೆ ಎನ್ನುವುದು ಅರಿವಾಗುತ್ತಿದ್ದಂತೆ, ಭಾರತವು ಲಾಕ್‌ಡೌನ್ ಪ್ರಕ್ರಿಯೆಗೆ ಒಳಗಾಯಿತು. ಜಾಗತಿಕವಾಗಿ ಅತ್ಯಂತ ಕಟುವಾದ ಮತ್ತು ತೀವ್ರವಾದ ಲಾಕ್‌ಡೌನ್‌ಜಾರಿಯಾಗಿದ್ದು ಭಾರತದಲ್ಲಿ ಮಾತ್ರ. ಇಂತಹ ತೀವ್ರವಾದ ಲಾಕ್‌ಡೌನ್‌ನ ಉರಿಗೆ ಸಿಲುಕಿ ಎಲ್ಲರೂ ನರಳುತ್ತಿರುವಾಗ, ದೇಶದ ಹೆಚ್ಚಿನ ಮತದಾರರು ‘‘ದೇಶವನ್ನು ರಕ್ಷಿಸಲು ಮೋದಿಯವರು ಲಾಕ್‌ಡೌನ್ ಜಾರಿಗೆ ತಂದಿದ್ದಾರೆ’’ಎಂದೇ ಭಾವಿಸಿಕೊಂಡರು. ಬಹುಬೇಗ ಇಂತಹದೊಂದು ಬೃಹತ್ ಪ್ರಮಾಣದ ಲಾಕ್‌ಡೌನ್ ಜಾರಿಗೆ ತರುವ ಮೂಲಕ ಮಹಾಸೋಂಕಿನ ರಾಜಕೀಯ ಅಡ್ಡಪರಿಣಾಮಗಳ ಹರಿತವನ್ನು ಆರಂಭದಲ್ಲೇ ಮೋದಿ ಮೊಂಡು ಮಾಡಿದರು. ಮೋದಿ ಮತ್ತು ಫಿಲಿಪ್ಪೀನ್ಸ್‌ನ ಅಧ್ಯಕ್ಷರಾದ ರೋಡ್ರಿಗೋ ತರಹದ ನಾಯಕರಿಗೆ ಇಂತಹ ಬೃಹತ್‌ಕ್ರಮಗಳು ಉತ್ತಮ ಫಲವನ್ನು ನೀಡುತ್ತವೆಂದು ಕಾಣುತ್ತದೆ.

ಏಕೆಂದರೆ, ಟ್ರಂಪ್‌ರೀತಿಯ ನಾಯಕರು ನಿರಾಕರಣೆ ಮತ್ತು ನಿಧಾನಗತಿಯ ಕ್ರಮಗಳಿಗೆ ಮುಂದಾದ ಕಾರಣ, ತೀವ್ರವಾದ ರಾಜಕೀಯ ಬೆಲೆಯನ್ನು ಈಗ ತೆರುತ್ತಿದ್ದಾರೆ. ಭಾರತದಲ್ಲಿ ಮಾತ್ರ ಯಾವುದೇ ಸೋಲಿನ ಹೊಣೆಗಾರಿಕೆ ಪ್ರಧಾನಿಯನ್ನು ಹೊರತುಪಡಿಸಿ ಇತರರ ಮೇಲೆ ಮಾತ್ರವೇ ಇರುತ್ತದೆ. ದೇಶದ ಉತ್ತಮ ನಾಯಕನ ‘ಮುನ್ನೋಟಕ್ಕೆ’ ಪೂರಕವಾಗಿ ನಿಲ್ಲದ ಅಧಿಕಾರಿಗಳು ಅಥವಾ ರಾಜ್ಯ ಸರಕಾರಗಳು ಎಸಗಿದ ಲೋಪಗಳ ಕಾರಣದಿಂದ ಸಮಸ್ಯೆ ಬಿಗಡಾಯಿಸಿದೆಯೇ ಹೊರತು, ಪ್ರಧಾನಿಗಳ ಕ್ರಮದಿಂದ ಅಲ್ಲ ಎನ್ನುವ ಗ್ರಹಿಕೆ ಸಾರ್ವಜನಿಕವಾಗಿ ನಿರ್ಮಾಣವಾಗಿದೆ. ಅನೇಕರು ಕೊರೋನ ಸೋಂಕಿನ ಕಾರಣದಿಂದಾಗಿ ಮತದಾರರು ಇನ್ನು ಮುಂದೆ ತಮ್ಮ ನಾಯಕರಿಂದ ‘ಗುಣಾತ್ಮಕ ನಾಯಕತ್ವವನ್ನು’ ಒತ್ತಾಯಿಸುತ್ತಾರೆಂದು ನಂಬಿದ್ದಾರೆ. ಆದರೆ ಅಂತಹುದೇನು ನಡೆಯುವುದಿಲ್ಲ. ಅದೊಂದು ಆಶಾವಾದ ಮಾತ್ರ. ಇಂತಹ ಯಾವುದೇ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇಲ್ಲವೆನ್ನುವುದನ್ನು ಭಾರತ ಸಾಬೀತುಪಡಿಸಿದೆ. ಮೋದಿಯಂತಹ ಪಳಗಿದ ರಾಜಕಾರಣಿಯ ಬತ್ತಳಿಕೆಯಲ್ಲಿ ಜನರನ್ನು ಮರುಳುಗೊಳಿಸುವ ಇನ್ನೂ ಅನೇಕ ‘ಜನಪ್ರಿಯ ಯೋಜನೆಗಳ ಬಾಣಗಳು’ ಹಾಗೆಯೇ ಅಡಗಿ ಕುಳಿತಿವೆ.

(NDTV ಅಂತರ್ಜಾಲ ಆವೃತ್ತಿಯಲ್ಲಿ ಪ್ರಕಟಗೊಂಡ ಲೇಖನ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top