ಹಾಥರಸ್ ಪ್ರಕರಣದಿಂದ ಸರಕಾರದ ಮೇಲ್ಜಾತಿ ಮನಸ್ಥಿತಿ ಬಯಲಾಗಿದೆ: -ಜಿಗ್ನೇಶ್ ಮೇವಾನಿ

ಹೋರಾಟಗಾರ, ಶಾಸಕ ಜಿಗ್ನೇಶ್ ಮೇವಾನಿ ಅವರು ಇತ್ತೀಚೆಗೆ ‘ವಾರ್ತಾಭಾರತಿ’ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಡಿದ ಸಂದರ್ಶನ.


ಪ್ರಶ್ನೆ: ದೇಶವನ್ನು ಬೆಚ್ಚಿ ಬೀಳಿಸಿದ ಹಾಥರಸ್ ಸಾಮೂಹಿಕ ಅತ್ಯಾಚಾರ ಘಟನೆಯ ಬಗ್ಗೆ ಏನು ಹೇಳುತ್ತೀರಿ?
ಜಿಗ್ನೇಶ್: ಉತ್ತರ ಪ್ರದೇಶ ಸರಕಾರ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಎಸ್ಪಿ ನಡೆದುಕೊಂಡ ರೀತಿಯನ್ನು ಕ್ಷಮಿಸಲು ಸಾಧ್ಯವಿಲ್ಲ. ಸರಕಾರದ ಈ ರೀತಿಯ ನಡೆ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಸರಕಾರದ ಸಂಪೂರ್ಣ ವೈಫಲ್ಯ ಈ ಪ್ರಕರಣದಲ್ಲಿ ಎದ್ದು ಕಾಣುತ್ತಿದೆ. ದಲಿತರು, ಬುಡಕಟ್ಟು ಜನರ ವಿರುದ್ಧದ ದೌರ್ಜನ್ಯಗಳು ನಡೆಯಬಾರದು ಎನ್ನುವ ಕಾರಣಕ್ಕಾಗಿ ಎಸ್ಸಿ/ಎಸ್ಟಿ ಕಾಯ್ದೆಗಳಿವೆ. ಆದರೆ ಈ ರಕ್ಷಣೆಯನ್ನು ನೀಡುವುದರಲ್ಲಿ ಉತ್ತರ ಪ್ರದೇಶ ಸರಕಾರ ವಿಫಲವಾಗಿದೆ. ಎರಡನೆಯದಾಗಿ ಅತ್ಯಾಚಾರಕ್ಕೊಳಗಾಗಿ ಯುವತಿ ಮೃತಪಟ್ಟ ಬಳಿಕ ಸಂತ್ರಸ್ತೆಯ ಕುಟುಂಬದ ಬಗ್ಗೆ ಸರಕಾರ ಕಾಳಜಿ ವಹಿಸಬೇಕಾಗಿತ್ತು. ನ್ಯಾಯ ವಿಳಂಬವಾಗುವುದಿಲ್ಲ ಎನ್ನುವ ಆಶ್ವಾಸನೆಯನ್ನು ಸರಕಾರ ನೀಡಬೇಕಾಗಿತ್ತು. ಆದರೆ ಸರಕಾರ ಸಂವೇದನೆ ಇಲ್ಲದೆ ನಡೆದುಕೊಂಡಿದೆ. ಸರಕಾರ ಅಹಂಕಾರಿಯಾಗಿ, ಸಂವೇದನಾರಹಿತರಾಗಿ ಕುಟುಂಬಸ್ಥರ ಅನುಮತಿ ಪಡೆಯದೆ ಮೃತದೇಹದ ಅಂತ್ಯ ಸಂಸ್ಕಾರ ನಡೆಸಿದೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ಆದಿತ್ಯನಾಥ್ ರಾಜೀನಾಮೆ ನೀಡುವಂತೆ ಬಿಜೆಪಿ ಹೇಳಬೇಕು. ಜಿಲ್ಲಾಧಿಕಾರಿಯ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಖಾಲಿ ಪತ್ರಗಳಿಗೆ ಸಹಿ ಹಾಕುವಂತೆ, ಮಾಧ್ಯಮಗಳ ಜೊತೆ ಮಾತನಾಡದಂತೆ ಸಂತ್ರಸ್ತೆಯ ಕುಟುಂಬಕ್ಕೆ ಜಿಲ್ಲಾಧಿಕಾರಿ ಒತ್ತಡ ಹೇರಿದ್ದಾರೆ ಎನ್ನುವ ಆರೋಪಗಳಿವೆ. ಜಿಲ್ಲಾಧಿಕಾರಿ ಕುಟುಂಬ ಸದಸ್ಯನೊಬ್ಬನಿಗೆ ಕಾಲಿನಿಂದ ಒದ್ದಿದ್ದಾರೆ ಎನ್ನುವ ಆರೋಪಗಳಿವೆ. ಇಡೀ ಗ್ರಾಮಕ್ಕೆ ಬೀಗ ಹಾಕಲಾಗುತ್ತದೆ. ಏನು ನಡೆಯಿತು ಎಂದು ವಿವರಿಸಲು ಸಂತ್ರಸ್ತರಿಗೆ ಅವಕಾಶ ನೀಡುತ್ತಿಲ್ಲ. ಸಂತ್ರಸ್ತರನ್ನು ಭೇಟಿಯಾಗಲು ಆಗ ಮಾಧ್ಯಮಗಳು ಮತ್ತು ರಾಜಕಾರಣಿಗಳಿಗೂ ಅವಕಾಶ ನೀಡಿಲ್ಲ. ಇಂತಹ ವರ್ತನೆಗಳು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ.


ಪ್ರಶ್ನೆ: ಆಕೆಯ ಮೇಲೆ ಅತ್ಯಾಚಾರ ನಡೆದೇ ಇಲ್ಲ ಎಂದು ಬಿಜೆಪಿ ಹೇಳುತ್ತಿದೆ, ಈ ಬಗ್ಗೆ ಏನು ಹೇಳುತ್ತೀರಿ?
ಜಿಗ್ನೇಶ್: ಪುರುಷನೊಬ್ಬ ಮಹಿಳೆಯನ್ನು ಬಲವಂತಪಡಿಸಿದರೆ ಅದು ಅತ್ಯಾಚಾರಕ್ಕೆ ಸಮ ಎಂದು ಹೈಕೋರ್ಟ್ ಮತ್ತು ಅಪೆಕ್ಸ್ ಕೋರ್ಟ್ ಈ ಹಿಂದೆ ತೀರ್ಪೊಂದರಲ್ಲಿ ಹೇಳಿತ್ತು. ಆದರೆ ಇಲ್ಲಿ ಸಂತ್ರಸ್ತೆಯೇ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎನ್ನುವ ವೀಡಿಯೊ ಇದೆ. ನಿಮಗೆ ಬೇರೇನು ಬೇಕು? 10-12 ದಿನಗಳ ನಂತರ ಆಕೆಯ ದೇಹದಿಂದ ಸಾಕ್ಷಗಳನ್ನು ಪಡೆದಿದ್ದಾರೆ. ವೈದ್ಯಕೀಯವಾಗಿ ಅವರಿಗೆ ಬೇಕಾದ ರೀತಿ ತಿರುಚಬಹುದು. ಆಕೆ ಜೀವನ್ಮರಣ ಸ್ಥಿತಿಯಲ್ಲಿದ್ದಾಗ ಆಕೆಗೆ ತಾನು ಬದುಕುವುದಿಲ್ಲ ಎನ್ನುವುದು ತಿಳಿದಿರಬಹುದು. ಆ ಕೊನೆ ಘಳಿಗೆಯಲ್ಲೂ ಆಕೆ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎನ್ನುತ್ತಾಳೆ.


ಪ್ರಶ್ನೆ: ಸಿಬಿಐ ತನಿಖೆಯಿಂದ ನ್ಯಾಯ ಸಿಗಬಹುದು ಎಂದು ನಿಮಗನಿಸುತ್ತಿದೆಯೇ?
ಜಿಗ್ನೇಶ್: ಸ್ಥಳೀಯ ಪೊಲೀಸರು, ಸಿಐಡಿ, ಎನ್‌ಐಎ, ಸಿಬಿಐ ಸರಕಾರದ ಕೈಗೊಂಬೆಗಳು. ಸಂತ್ರಸ್ತೆಯ ಕುಟುಂಬಸ್ಥರು ಸೂಚಿಸಿದ ಇಬ್ಬರು ಅಧಿಕಾರಿಗಳು ಮತ್ತು ಸರಕಾರದಿಂದ ನೇಮಿಸಲ್ಪಟ್ಟ ಅಧಿಕಾರಿಗಳಿರುವ ಎಸ್‌ಐಟಿ ತಂಡ ರಚಿಸಬೇಕು. ಈ ತಂಡ ಮಾತ್ರ ಪಾರದರ್ಶಕ ತನಿಖೆ ನಡೆಸಬಹುದು. ಪೊಲೀಸರು ತಮ್ಮ ಕೆಲಸ ಮಾಡುವುದಿಲ್ಲ. ಆಗ ಸಂತ್ರಸ್ತೆಯ ಮನೆಯವರು ಹೈಕೋರ್ಟ್ ಮೆಟ್ಟಿಲೇರಿ ಸಿಐಡಿ ತನಿಖೆಗೆ ಆಗ್ರಹಿಸುತ್ತಾರೆ. ಸಿಐಡಿಯೂ ಸರಿಯಾಗಿ ಕೆಲಸ ಮಾಡದಿದ್ದಾಗ ಸಿಬಿಐ ತನಿಖೆ ನಡೆಯಲಿ ಎಂದು ಆಗ್ರಹಿಸಲಾಗುತ್ತದೆ. ಸಿಬಿಐ ಹಲವು ಪ್ರಕರಣಗಳಲ್ಲಿ ಏನು ಮಾಡಿದೆ ಎನ್ನುವುದು ನಮಗೆ ಗೊತ್ತಿದೆ. ಸಿಬಿಐ ಈಗಾಗಲೇ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಸಂತ್ರಸ್ತೆಯ ಕುಟುಂಬಸ್ಥರಿಗೆ ತನಿಖೆ ಪ್ರಕ್ರಿಯೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಇರಬಹುದು. ಹಾಗಾಗಿ ನನ್ನಂತಹ ಜನರು, ದಲಿತ ಗುಂಪುಗಳು, ಮಾನವಹಕ್ಕು ಹೋರಾಟಗಾರರು, ವಕೀಲರು ಎಲ್ಲರಿಗೂ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಲು ಮತ್ತು ಮಾತುಕತೆ ನಡೆಸಲು ಅವಕಾಶ ನೀಡಬೇಕು. ಸಿಬಿಐಯಿಂದ ನ್ಯಾಯ ಲಭಿಸಬಹುದು ಎನ್ನುವ ಯಾವುದೇ ನಂಬಿಕೆಯಿಲ್ಲ.


ಪ್ರಶ್ನೆ: ಹಾಥರಸ್ ಘಟನೆ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಆರೋಪಿಗಳ ಪರ ಸಭೆ ನಡೆಯುತ್ತಿದೆ. ಒಂದು ಸಭೆಯನ್ನು ಬಿಜೆಪಿ ನಾಯಕರೊಬ್ಬರು ಆಯೋಜಿಸಿದ್ದಾರೆ. ಈ ಬಗ್ಗೆ ಏನು ಹೇಳುತ್ತೀರಿ?
ಜಿಗ್ನೇಶ್: ಇದು ನನಗೇನೂ ಹೊಸದಲ್ಲ. ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಇಂತಹದ್ದನ್ನು ನೋಡಿದ್ದೇನೆ. ದಲಿತರ ಮೇಲಿನ ದಾಳಿಗಳು ಭಾರೀ ಆಕ್ರೋಶ ಸೃಷ್ಟಿಸಿದ ಸಂದರ್ಭದಲ್ಲಿ ತಮ್ಮ ಜಾತಿಯ ಜನರ ಕೃತ್ಯದಿಂದ ನಾಚಿಕೆಪಟ್ಟುಕೊಳ್ಳುವ ಬದಲು ಕೆಲವರು ಆರೋಪಿಗಳ ಪರ ನಿಲ್ಲುತ್ತಾರೆ. ಈ ವಿಚಾರ ಹೊಸತಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಕೃತ್ಯಗಳಿಗೆ ಅವಕಾಶ ನೀಡುತ್ತಿರುವುದು ಆಡಳಿತದ ಮೇಲ್ಜಾತಿ ಮನಸ್ಥಿತಿಯನ್ನು ತೋರಿಸುತ್ತದೆ.


ಪ್ರಶ್ನೆ: ಹಾಥರಸ್ ಘಟನೆ, ಮಧ್ಯರಾತ್ರಿ ಆಕೆಯ ಮೃತದೇಹವನ್ನು ಸುಟ್ಟು ಹಾಕಿ ದ್ದು, ಇಂತಹ ಬೆಳವಣಿಗೆಗಳು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಲ್ಲವೇ?
ಜಿಗ್ನೇಶ್: ಪ್ರಜಾಪ್ರಭುತ್ವದ ನಾಶ ಈಗಾಗಲೇ ಆರಂಭವಾಗಿದೆ. ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ. ನ್ಯಾಯಾಂಗ, ಕಾರ್ಯಾಂಗದ ವಿಚಾರದಲ್ಲಿ ಏನು ನಡೆಯುತ್ತಿದೆ ಎನ್ನುವುದು ನಮಗೆ ಗೊತ್ತಿದೆ. ವಿಪಕ್ಷಗಳು, ಹೋರಾಟಗಾರರನ್ನು ಮಾತನಾಡಲು ಬಿಡುತ್ತಿಲ್ಲ. ಇದು ನಮ್ಮ ಭಾರತದ ಕಲ್ಪನೆಯಲ್ಲ. ಭಾರತದ ಪ್ರಜಾಪ್ರಭುತ್ವ ಕಷ್ಟಕರ ಸನ್ನಿವೇಶದಲ್ಲಿದೆ.


ಪ್ರಶ್ನೆ: ಈ ರೀತಿ ಗುರಿ ಮಾಡಿ ದಲಿತರು, ಮುಸ್ಲಿಮರ ಮೇಲೆ ನಡೆಸುವ ದಾಳಿಗೆ ಕೊನೆ ಯಾವಾಗ?
ಜಿಗ್ನೇಶ್: ನಾವೆಲ್ಲರೂ ಮಾನವರಾದಾಗ ಮಾತ್ರ ಕೆಳ ಜಾತಿ, ಕೆಳ ವರ್ಗ ಎನ್ನುವ ಮನಸ್ಥಿತಿ ಕೊನೆಯಾಗುತ್ತದೆ. ಇದಕ್ಕಾಗಿ ನಮ್ಮ ಮನಸ್ಥಿತಿ ವಿಶಾಲವಾಗ ಬೇಕು. ದುರದೃಷ್ಟವಶಾತ್ ನಮ್ಮ ದೇಶ ಸದ್ಯ ಅದಕ್ಕೆ ತಯಾರಿಲ್ಲ. ಇದಕ್ಕಾಗಿ ಎಷ್ಟು ವರ್ಷಗಳು, ದಶಕಗಳು ಬೇಕಾಗಬಹುದು ಎನ್ನುವುದು ನನಗೆ ತಿಳಿದಿಲ್ಲ. ಆದರೆ ಒಂದು ದಿನ ನಾವೆಲ್ಲರೂ ಇದನ್ನು ಇತಿಹಾಸದ ಕಸದ ಬುಟ್ಟಿಗೆ ಎಸೆಯುತ್ತೇವೆ ಎನ್ನುವ ನಂಬಿಕೆ ಇದೆ.


ಪ್ರಶ್ನೆ: ಹೋರಾಟಗಾರರನ್ನು ದಿಲ್ಲಿ ಹಿಂಸಾಚಾರ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎನ್ನುವ ಆರೋಪಗಳಿವೆ...?
ಜಿಗ್ನೇಶ್: ಪ್ರಮುಖ ಹೋರಾಟಗಾರರು, ಆರೆಸ್ಸೆಸ್, ಬಿಜೆಪಿ ವಿರುದ್ಧ ಧ್ವನಿಯೆತ್ತುವ ಯಾರೇ ಆಗಲಿ ಅವರ ಮೇಲೆ ಮೋದಿ, ಅಮಿತ್ ಶಾ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ಮಾತ್ರವಲ್ಲ, ಯಾವುದೇ ರೀತಿಯ ವಿಪಕ್ಷವನ್ನು ಬಿಜೆಪಿ ಮತ್ತು ಆರೆಸ್ಸೆಸ್ ಬಯಸುತ್ತಿಲ್ಲ. ನೀವು ಪತ್ರಕರ್ತರಾಗಿ ಕಠಿಣ ಪ್ರಶ್ನೆಗಳನ್ನು ಕೇಳುತ್ತೀರಿ ಎಂದಾದರೆ ನಿಮಗೆ ಏನು ಬೇಕಾದರೂ ನಡೆಯಬಹುದು. ಹೋರಾಟಗಾರರು ಮತ್ತು ಪ್ರಮುಖ ರಾಜಕೀಯ ಪಕ್ಷಗಳ ನಾಯಕರಿಗೂ ಏನು ಬೇಕಾದರೂ ಸಂಭವಿಸಬಹುದು. ಇವರು ಸಂಪೂರ್ಣವಾಗಿ ಫ್ಯಾಶಿಸ್ಟರು ಮತ್ತು ಯಾವುದೇ ಮಟ್ಟಕ್ಕೂ ಹೋಗುವವರು.


ಪ್ರಶ್ನೆ: ಆದರೆ ಇದೇ ಸಂದರ್ಭ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದವರು, ‘‘ಗೋಲಿಮಾರೋ’’ ಎಂದವರು ಹಾಯಾಗಿದ್ದಾರೆ...?
ಜಿಗ್ನೇಶ್: ಹೌದು. ಇದು ಗುಜರಾತ್ ಮಾದರಿ. ಧ್ವನಿಯೆತ್ತುವವರನ್ನು, ಬಡವರಿಗಾಗಿ ಹೋರಾಟ ನಡೆಸುವವರನ್ನು ಯುಎಪಿಎ, ಇತರ ಕಠಿಣ ಕಾನೂನುಗಳಡಿ ಜೈಲಿಗೆ ತಳ್ಳುತ್ತಾರೆ. ಸಾರ್ವಜನಿಕವಾಗಿ ‘‘ಗೋಲಿ ಮಾರೋ’’ ಎಂದವರು ಹೊರಗಡೆ ತಿರುಗುತ್ತಾರೆ.


ಪ್ರಶ್ನೆ: ಉಮರ್ ಖಾಲಿದ್ ಬಂಧನದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಜಿಗ್ನೇಶ್: 3 ವರ್ಷಗಳಿಂದ ಉಮರ್ ಬಗ್ಗೆ ನನಗೆ ತಿಳಿದಿದೆ. ಆತ ಪ್ರಾಮಾಣಿಕ. ಮುಸ್ಲಿಮ್ ಸಮುದಾಯದಿಂದ ಬಂದ ಉಮರ್ ಖಾಲಿದ್ ಧರ್ಮ, ಜಾತಿಗಳನ್ನು ಮೀರಿದ ಮನಸ್ಥಿತಿಯ ವ್ಯಕ್ತಿ. ಅವರೊಬ್ಬ ನೈಜ ಭಾರತೀಯ. ಅವರು ಉಮರ್‌ಖಾಲಿದ್ ಆದ ಮಾತ್ರಕ್ಕೆ, ಗೋವಿಂದ್ ಚತುರ್ವೇದಿ ಅಲ್ಲದ ಕಾರಣ ಅವರನ್ನು ಗುರಿ ಮಾಡಲಾಗಿರುವ ಸಾಧ್ಯತೆ ಇದೆ. 2-3 ವರ್ಷಗಳಿಂದ ಮಾಧ್ಯಮಗಳು ಅವರ ವಿರುದ್ಧ ಮಾಡಿದ ಅಪಪ್ರಚಾರದ ಹಿಂದೆ ಷಡ್ಯಂತ್ರವಿದೆ ಎನ್ನುವುದು ನಮಗೆ ತಿಳಿದಿದೆ. ಪ್ರಧಾನಿ ಕಚೇರಿ ಜೊತೆ ಸೇರಿ ಕೆಲ ಮಾಧ್ಯಮ ಸಂಸ್ಥೆಗಳು ಈ ಪಿತೂರಿ ನಡೆಸಿವೆ. ಯಾಕೆಂದರೆ ಫ್ಯಾಶಿಸ್ಟರಿಗೆ ಯಾವತ್ತೂ ಕೃತಕ ವೈರಿಗಳು ಬೇಕು. ಆಗ ಮಾತ್ರ ಅವರಿಗೆ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಾಧ್ಯವಾಗುತ್ತದೆ.


ಪ್ರಶ್ನೆ: ಶಾಸಕರಾಗಿ ನಿಮ್ಮ ನಿರ್ವಹಣೆ ಹೇಗಿದೆ. ಗುಜರಾತ್‌ನ ರಾಜಕೀಯ ಭವಿಷ್ಯದಲ್ಲಿ ನಿಮ್ಮ ಪಾತ್ರವನ್ನು ಹೇಗೆ ನೋಡುತ್ತೀರಿ?
ಜಿಗ್ನೇಶ್: ವಿಪಕ್ಷಗಳ ಕಡೆಯಿಂದ ಧ್ವನಿಯೆತ್ತುವವನಾಗಿ ನಾನೂ ಇದ್ದೇನೆ. ಬಡವರಿಗಾಗಿ ಹೋರಾಟಗಳನ್ನು ನಡೆಸುತ್ತಿದ್ದೇನೆ. ನರೇಗಾಕ್ಕೆ ಸಂಬಂಧಿಸಿ ನನ್ನ ಕ್ಷೇತ್ರದಲ್ಲಿ ಹಲವು ಕೆಲಸಗಳು ನಡೆಯುತ್ತಿವೆ.


ಪ್ರಶ್ನೆ: ನಿಮ್ಮದೇ ಆದ ಪಕ್ಷ ಸ್ಥಾಪನೆಯ ಯಾವುದಾದರೂ ಯೋಜನೆ ಇದೆಯೇ?
ಜಿಗ್ನೇಶ್: ನೋಡೋಣ. ನನಗೀಗ 40 ವರ್ಷ. ಚುನಾವಣೆಗಳಿಗಿಂತ ಜನರ ಹೋರಾಟದಲ್ಲಿ ಪಾಲ್ಗೊಳ್ಳುವುದಕ್ಕೆ ನನ್ನ ಆದ್ಯತೆ.


ಪ್ರಶ್ನೆ: ಬಿಜೆಪಿಯಲ್ಲಿರುವ ದಲಿತ ನಾಯಕರು ಧ್ವನಿಯೆತ್ತುವುದು ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿದ ನಂತರ ಮಾತ್ರ. ಈ ಬಗ್ಗೆ ಏನು ಹೇಳುತ್ತೀರಿ?
ಜಿಗ್ನೇಶ್: ಅವರು ಆಡಳಿತದ ಪರ ಇರುವವರು, ಅವರು ವೈಯಕ್ತಿಕ ಹಿತಾಸಕ್ತಿಯ ಜನರು. ಅವರು ಹಣ ಮಾಡುವವರು ಮತ್ತು ದಲಿತರನ್ನು ಮೂರ್ಖ ರನ್ನಾಗಿಸುವವರು. ಅದಕ್ಕಾಗಿಯೇ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ. ಅವ ರನ್ನು ಕಡೆಗಣಿಸಲಾಗುತ್ತಿದೆ ಎಂದು ಗೊತ್ತಾದ ಮೇಲೆ ಮಾತನಾಡುತ್ತಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top