ಪ್ರಧಾನಿ ಮೋದಿಯವರ ತೆರಿಗೆ ಭಯೋತ್ಪಾದನೆ | Vartha Bharati- ವಾರ್ತಾ ಭಾರತಿ

--

ಪ್ರಧಾನಿ ಮೋದಿಯವರ ತೆರಿಗೆ ಭಯೋತ್ಪಾದನೆ

ಭಾಗ - 2

 ಬಹುಶಃ ಜಗತ್ತಿನ ಯಾವ ದೇಶದಲ್ಲೂ ಭಾರತದಲ್ಲಿರುವಷ್ಟು ಕಾರ್ಪೊರೇಟ್ ಭ್ರಷ್ಟಾಚಾರ ಇರಲಿಕ್ಕಿಲ್ಲ. ಅದಾನಿ, ಅಂಬಾನಿಗಳು ಕಣ್ಣು ಹಾಕಿದ್ದೆಲ್ಲ ಅವರ ಪಾಲಾಗುತ್ತಿವೆ. ಅವರಿಗೆ ಬೇಕಾದ ಹಾಗೆ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಹೊಸ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಅಗತ್ಯ ವಸ್ತುಗಳ ಕಾಯ್ದೆ, ಕೃಷಿ ಕಾಯ್ದೆಗಳ ತಿದ್ದುಪಡಿಗಳ ವಿರುದ್ಧ ದೇಶಕ್ಕೆ ಅನ್ನ ಕೊಡುವ ರೈತರು ಕಳೆದ 200ಕ್ಕೂ ಅಧಿಕ ದಿನಗಳಿಂದ ದಿಲ್ಲಿಯ ಬಳಿ ಧರಣಿ ನಡೆಸುತ್ತಿದ್ದಾರೆ. ಅವರನ್ನು ಕ್ಯಾರೆ ಅನ್ನದೆ ಸರಕಾರ ಆಡಳಿತ ನಡೆಸುತ್ತಿದೆ. ಇಂಥ ಸರಕಾರಕ್ಕೆ ಲಜ್ಜೆ, ಪ್ರಜಾತಂತ್ರದಲ್ಲಿ ನಂಬಿಕೆ ಇದೆ ಎನ್ನಲು ಸಾಧ್ಯವೇ?

ಅದಾನಿ ಏಶ್ಯದ ಎರಡನೇ ದೊಡ್ಡ ಶ್ರೀಮಂತನಾಗಿರುವುದು ನಮ್ಮ ಜನರು ಬೆವರು, ರಕ್ತ ಹರಿಸಿ ಬ್ಯಾಂಕುಗಳಲ್ಲಿ ಇಟ್ಟ ಹಣದಿಂದ. ಜನ ತಮ್ಮ ದುಡಿಮೆಯ ಒಂದಷ್ಟು ಉಳತಾಯವನ್ನು ಮಕ್ಕಳ ಓದಿಗೆ, ಮಗಳ ಮದುವೆಗೆಂದು ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟರು. ಈ ಹಣವನ್ನು ಸಾಲವಾಗಿ ಬ್ಯಾಂಕ್‌ಗಳಿಂದ ಪಡೆದ ಅದಾನಿ ಮುಂತಾದವರು ಅದನ್ನು ವಾಪಸ್ ಕಟ್ಟದೆ ಎನ್‌ಪಿಎ ಮಾಡಿಸಿ, ಮನ್ನಾ ಮಾಡಿಸಿಕೊಂಡರು. ಬಳಿಕ ನಮ್ಮದೇ ದೇಶದ ಜನರು ಅನೇಕ ದಶಕಗಳಿಂದ ಕಟ್ಟಿದ್ದ ವಿಮಾನ ನಿಲ್ದಾಣ, ಬಂದರುಗಳು, ಆಹಾರ ನಿಗಮದ ಗೋಡೌನುಗಳು ಹಾಗೂ ದೇಶದ ಖನಿಜ ಸಂಪತ್ತು ಮುಂತಾದವುಗಳನ್ನು ಬಿಡಿಗಾಸಿಗೆ ಕೊಂಡುಕೊಳ್ಳುವ ಮೂಲಕ ಶ್ರೀಮಂತನಾಗುತ್ತಿದ್ದಾರೆೆ. ಯಾವ ದೇಶದಲ್ಲಿ ಇಂಥ ಲೂಟಿಯನ್ನು ಸಹಿಸಲು ಸಾಧ್ಯ ಹೇಳಿ? ಇಂತಹ ಲೂಟಿಗೆ ಸಹಕರಿಸುತ್ತಿರುವ ಪ್ರಧಾನಿ ಮೋದಿಯವರು ಎಂದಾದರೂ ಈ ದೇಶವನ್ನು ಅಭಿವೃದ್ಧಿ ಮಾಡಲು ಸಾಧ್ಯವೇ? ಖಾಸಗಿ ಬಂಡವಾಳಿಗರು ದೇಶಕ್ಕೆ ನ್ಯಾಯಯುತವಾಗಿ ಕಟ್ಟಬೇಕಾದ ತೆರಿಗೆಯನ್ನು ತೆರಿಗೆ ಭಯೋತ್ಪಾದನೆ ಎನ್ನುವ ಪ್ರಧಾನ ಮಂತ್ರಿಗಳು ದೇಶವನ್ನು ಸಂಪೂರ್ಣ ವಿನಾಶ ಮಾಡುವುದರಲ್ಲಿ, ಜನರನ್ನು ಭಿಕ್ಷುಕರನ್ನಾಗಿಸುವುದರಲ್ಲಿ ಯಾವ ಸಂದೇಹವೂ ಇಲ್ಲ.

 ಜಗತ್ತಿನ ಮುಂದುವರಿದ ದೇಶಗಳು ಮತ್ತು ನಮ್ಮ ಅಕ್ಕ ಪಕ್ಕದ ದೇಶಗಳ ತೆರಿಗೆ ವ್ಯವಸ್ಥೆ ಹೇಗಿದೆ ಎಂಬುದರ ಮಾಹಿತಿ ಇದು. ಈ ದೇಶಗಳು ಹೇಗೆ ಮುಂದುವರಿದಿವೆ? ಏಕೆ ಮುಂದುವರಿದಿವೆ? ಎಂಬುದು ಈ ಮೇಲಿನ ಪಟ್ಟಿಯನ್ನು ನೋಡಿದರೆ ಅರ್ಥವಾಗುತ್ತದೆ. ಅತ್ಯಂತ ಕಡಿಮೆ ಕಾರ್ಪೊರೇಟ್ ತೆರಿಗೆ ವಿಧಿಸುತ್ತಿರುವ ದೇಶ ಭಾರತ. ಹಾಗೆಯೇ ಕೋಟ್ಯಂತರ ಆದಾಯವಿರುವವರಿಗೂ ಸಹ ಅತ್ಯಂತ ಕಡಿಮೆ ಆದಾಯ ತೆರಿಗೆ ವಿಧಿಸುತ್ತಿರುವುದೂ ಸಹ ಭಾರತದಲ್ಲೆ. ಆದರೆ ಇದೇ ಸಂದರ್ಭದಲ್ಲಿ ಕಡಿಮೆ ಆದಾಯದವರಿಗೆ 5-10ಶೇ. ತೆರಿಗೆ ಇದೆ. ಅಂದರೆ 10 ಲಕ್ಷ ದುಡಿಯುವವರು ಶೇ. 20ರಷ್ಟು ತೆರಿಗೆ ಕಟ್ಟಬೇಕು. 15 ಲಕ್ಷದ ಒಂದು ರೂ. ದುಡಿಯುವವರು ಶೇ.30ರಷ್ಟು ತೆರಿಗೆ ಕಟ್ಟಬೇಕು. ಅದೇ ಸಂದರ್ಭದಲ್ಲಿ ಸಾವಿರಾರು ಕೋಟಿ ಆದಾಯ ಇರುವವರೂ ಶೇ.30 ಕಟ್ಟಬೇಕು. ನಮ್ಮ ದೇಶದಲ್ಲಿ ಅತಿ ಹೆಚ್ಚು ಆದಾಯವಿರುವವರು ಮತ್ತು ಕಾರ್ಪೊರೇಟ್ ಬಂಡವಾಳಿಗರು ಕಡಿಮೆ ತೆರಿಗೆ ಕಟ್ಟುತ್ತಾರೆ. ಅದೇ ಸಂದರ್ಭದಲ್ಲಿ ಪರೋಕ್ಷ ತೆರಿಗೆ ಕಟ್ಟುವ ನಮ್ಮ ದೇಶದ ಜನರು ಅಮೆರಿಕ, ಚೀನಾ, ಇಂಗ್ಲೆಂಡ್ ಮಾತ್ರವಲ್ಲ ಪಾಕಿಸ್ತಾನ, ಬಾಂಗ್ಲಾದೇಶದ ಜನರಿಗಿಂತಲೂ ಹೆಚ್ಚು ತೆರಿಗೆಯನ್ನು ಪಾವತಿಸುತ್ತಾರೆ.

   ಇಂತಹ ಸ್ಥಿತಿ ಆರೋಗ್ಯವಂತ ತೆರಿಗೆ ನೀತಿಯನ್ನು ಅಳವಡಿಸಿಕೊಂಡಿರುವ ಯಾವ ದೇಶಗಳಲ್ಲೂ ಇಲ್ಲ. ಅದೇ ರೀತಿ ಜಿಎಸ್‌ಟಿ ಮುಂತಾದ ಪರೋಕ್ಷ ತೆರಿಗೆಯಲ್ಲೂ ಗರಿಷ್ಠ ತೆರಿಗೆಯನ್ನು ಭಾರತದಲ್ಲೇ ಸಂಗ್ರಹಿಸಲಾಗುತ್ತಿದೆ. ನಮ್ಮಲ್ಲಿ ಬಹುಪಾಲು ವಸ್ತುಗಳ ಮೇಲಿನ ತೆರಿಗೆ ಶೇ.12, ಶೇ.18 ಮತ್ತು ಶೇ.28 ರ ಗುಂಪುಗಳಲ್ಲಿ ಬರುತ್ತವೆ. ಈ ಮಟ್ಟದ ತೆರಿಗೆ ದರೋಡೆ ಜಗತ್ತಿನ ಮುಂದುವರಿದ, ಮುಂದುವರಿಯುತ್ತಿರುವ ದೇಶಗಳಲ್ಲಿ ಇಲ್ಲ. ಇಂತಹ ತೆರಿಗೆ ನೀತಿ ಇದ್ದರೆ ಯಾವುದಾದರೂ ದೇಶ ಉದ್ಧಾರವಾಗಲು ಸಾಧ್ಯವೇ? ಜನರು ದುಡಿದ ಹಣದಲ್ಲಿ 12-28 ರೂ. ಜಿಎಸ್‌ಟಿ ತೆರಿಗೆ ಕಟ್ಟಲು ಮತ್ತು ಪ್ರತಿ ಲೀಟರ್ ಡೀಸೆಲ್, ಪೆಟ್ರೋಲ್ ಮೇಲೆ 60-65 ರೂ.ಗಳನ್ನು ಸುಂಕದ ನೆಪದಲ್ಲಿ ಕಿತ್ತುಕೊಂಡರೆ ಅವರ ಜೇಬಿನಲ್ಲಿ ಹಣ ಇರಲು ಸಾಧ್ಯವೇ? ದೇಶದ ಜನರ ಹಣವೆಲ್ಲವನ್ನು ತೆರಿಗೆ ರೂಪದಲ್ಲಿ ಕಿತ್ತುಕೊಂಡು ಅದಾನಿ, ಅಂಬಾನಿ ಮುಂತಾದವರು ಮಾಡಿದ ಸಾಲವನ್ನು ಮನ್ನಾ ಮಾಡುತ್ತಾ ಕುಳಿತರೆ ದೇಶ ಅಭಿವೃದ್ಧಿಯಾಗಲು ಸಾಧ್ಯವೇ? ಜನರ ಜೇಬಿಗೆ ಕನ್ನ ಕೊರೆದಿರುವುದು ತೆರಿಗೆ ಭಯೋತ್ಪಾದನೆಯಲ್ಲವೇ ಸನ್ಮಾನ್ಯ ಪ್ರಧಾನ ಮಂತ್ರಿಗಳೇ?

ಇದರ ಜೊತೆಗೆ ಈ ವರ್ಷ ಪೆಟ್ರೋಲ್, ಡೀಸೆಲ್, ರಸಗೊಬ್ಬರ, ತಾಳೆ ಎಣ್ಣೆ, ಬಟಾಣಿ, ಸೇಬು ಮುಂತಾದವುಗಳ ಮೇಲೆ ಶೇ.5ರಷ್ಟು ಕೃಷಿ ಸೆಸ್ ಅನ್ನು ಹೊಸದಾಗಿ ಹೇರಲಾಗುತ್ತಿದೆ. ತೆರಿಗೆಯ ಮೇಲೆ ತೆರಿಗೆ ಹಾಕಿದರೆ ಜನರಲ್ಲಿ ಕೊಳ್ಳುವ ಶಕ್ತಿ ಇರುತ್ತದೆಯೇ? ತೆರಿಗೆ ಹಾಕಿದ ಪ್ರಮಾಣದಲ್ಲಿ ನೀವು ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದೀರಾ? 2016 ರಲ್ಲಿ ನೋಟ್ ಬ್ಯಾನ್ ಮತ್ತು 2017ರಲ್ಲಿ ಜಿಎಸ್‌ಟಿಗಳನ್ನು ದೇಶದ ಮೇಲೆ ಬೆಂಕಿಯ ಬಂಡೆಯಂತೆ ಹೇರಿದಾಗಿನಿಂದ ಉತ್ಪಾದನಾ ವಲಯಗಳೆಲ್ಲ ನೆಲಕಚ್ಚಿ ಹೋಗಿವೆ. ಸಣ್ಣ ಕೈಗಾರಿಕೆಗಳಲ್ಲಿ ಶೇ.60 ರಷ್ಟು ಕಣ್ಣು ಮುಚ್ಚಿಕೊಂಡಿವೆ. ಸ್ವತಂತ್ರ ಭಾರತದಲ್ಲಿ ಎಂದೂ ಇಲ್ಲದಷ್ಟರ ಪ್ರಮಾಣದಲ್ಲಿ ನಿರುದ್ಯೋಗವು ಕಳೆದ 4-5 ವರ್ಷಗಳಲ್ಲಿ ಹೆಚ್ಚಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಹೇಳಿದರು. ದೇಶದ ಜನಸಂಖ್ಯೆಯಲ್ಲಿ ಶೇ.60 ಕ್ಕೂ ಹೆಚ್ಚಿನ ಪ್ರಮಾಣದಲ್ಲಿದ್ದ 35 ವರ್ಷದ ಯುವಕರು ಮೋದಿಯವರ ಮಾತನ್ನು ನಂಬಿದರು, ಆದರೆ ಹೇಳಿದ್ದನ್ನು ನಿಜ ಮಾಡದಿರುವುದೇ ಮೋದಿಯವರ ದೊಡ್ಡ ಸಾಧನೆ.

ಕಳೆದ ಹಲವು ವರ್ಷಗಳಿಂದ ಮೋದಿಯವರನ್ನು ಹತ್ತಿರದಿಂದ ಗಮನಿಸುತ್ತಾ ಬಂದವರು ಹೇಳುವ ಮಾತೊಂದಿದೆ. ಮೋದಿಯವರು ಯಾವ ಘೋಷಣೆಯನ್ನು ಮಾಡುತ್ತಾರೊ ಅದಕ್ಕೆ ವಿರುದ್ಧವಾಗಿ ಅರ್ಥ ಮಾಡಿಕೊಂಡರೆ ಸತ್ಯ ಬೇಗ ಅರ್ಥವಾಗುತ್ತದೆ ಅಂತ. ಈ ಮಾತುಗಳಲ್ಲಿ ನಿಜವಿದೆ. ಅಚ್ಛೇದಿನ್ ಎಂದರು ದೇಶ ಬರ್ಬಾದಾಯಿತು. ಆತ್ಮ ನಿರ್ಭರ ಎಂದರು ದೇಶದ ಸ್ಥಿತಿ ಬರ್ಭರವಾಯಿತು. ಎರಡು ಕೋಟಿ ಉದ್ಯೋಗ ಸೃಷ್ಟಿ ಎಂದರು ಪ್ರತಿ ವರ್ಷ ಅದಕ್ಕಿಂತ ಹೆಚ್ಚು ಉದ್ಯೋಗ ನಷ್ಟವಾದವು. ಆದಾಯ ದ್ವಿಗುಣ ಎಂದರು ಜನರ ಆದಾಯ ಶೂನ್ಯವಾಯಿತು. ಪ್ರತಿಯೊಬ್ಬರಿಗೆ 15 ಲಕ್ಷ ರೂ. ಎಂದರು ಜನರ ಜೇಬಿಗೆ ಹಣ ಬರುವುದಿರಲಿ ಜನರ ಜೇಬಿನಲ್ಲಿ ಒಂದು ರೂ.ಯನ್ನೂ ಬಿಡದೆ ದೋಚಿಕೊಂಡರು. ಜನರು ಕಳೆದ ಏಳು ದಶಕಗಳಿಂದ ಬೆವರು ಹರಿಸಿ ನಿರ್ಮಿಸಿದ್ದ ಸಾರ್ವಜನಿಕ ಸಂಸ್ಥೆಗಳೆಲ್ಲ ಕಾರ್ಪೊರೇಟ್ ಬಂಡವಾಳಿಗರ ಪಾಲಾದವು. ಸ್ವಿಸ್ ಬ್ಯಾಂಕಿನಲ್ಲಿರುವ ಹಣವನ್ನು ತಂದರೆ ದೇಶದ ರಸ್ತೆಗಳನ್ನೆಲ್ಲ ಚಿನ್ನದಲ್ಲಿ ನಿರ್ಮಿಸಬಹುದು ಎಂದರು, ಆದರೆ 2019 ರಲ್ಲಿ 6,625 ಕೋಟಿ ರೂಗಳಿದ್ದದ್ದು 2020ರ ಅಂತ್ಯಕ್ಕೆ 20,706 ಕೋಟಿಗಳಿಗೆ ಏರಿಕೆಯಾಗಿದೆಯೆಂದು ಸಿಟ್ಸರ್‌ಲ್ಯಾಂಡ್‌ನ ಸ್ವಿಸ್ ನ್ಯಾಶನಲ್ ಬ್ಯಾಂಕ್‌ನ ವಾರ್ಷಿಕ ವರದಿಗಳು ಹೇಳುತ್ತಿವೆ. ಮೋದಿ ಮೇಲಿಂದ ಮೇಲೆ ರಾಶಿ ಾಶಿ ಸುಳ್ಳು ಹೇಳುತ್ತಲೇ ಇದ್ದಾರೆ.

 ಬಹುಶಃ ಜಗತ್ತಿನ ಯಾವ ದೇಶದಲ್ಲೂ ಭಾರತದಲ್ಲಿರುವಷ್ಟು ಕಾರ್ಪೊರೇಟ್ ಭ್ರಷ್ಟಾಚಾರ ಇರಲಿಕ್ಕಿಲ್ಲ. ಅದಾನಿ, ಅಂಬಾನಿಗಳು ಕಣ್ಣು ಹಾಕಿದ್ದೆಲ್ಲ ಅವರ ಪಾಲಾಗುತ್ತಿವೆ. ಅವರಿಗೆ ಬೇಕಾದ ಹಾಗೆ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಹೊಸ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಅಗತ್ಯ ವಸ್ತುಗಳ ಕಾಯ್ದೆ, ಕೃಷಿ ಕಾಯ್ದೆಗಳ ತಿದ್ದುಪಡಿಗಳ ವಿರುದ್ಧ ದೇಶಕ್ಕೆ ಅನ್ನ ಕೊಡುವ ರೈತರು ಕಳೆದ 200ಕ್ಕೂ ಅಧಿಕ ದಿನಗಳಿಂದ ದಿಲ್ಲಿಯ ಬಳಿ ಧರಣಿ ನಡೆಸುತ್ತಿದ್ದಾರೆ. ಅವರನ್ನು ಕ್ಯಾರೆ ಅನ್ನದೆ ಸರಕಾರ ಆಡಳಿತ ನಡೆಸುತ್ತಿದೆ. ಇಂಥ ಸರಕಾರಕ್ಕೆ ಲಜ್ಜೆ, ಪ್ರಜಾತಂತ್ರದಲ್ಲಿ ನಂಬಿಕೆ ಇದೆ ಎನ್ನಲು ಸಾಧ್ಯವೇ?

ದೇಶದ ದೊಡ್ಡ ಸಂಖ್ಯೆಯ ಯುವಕರು ಮೋದಿಯವರನ್ನು ನಂಬಿ ಕಣ್ಣು ಮುಚ್ಚಿಕೊಂಡು ಆಯ್ಕೆ ಮಾಡಿದರು. ಈಗ ಅವರೆಲ್ಲಾ ಕಣ್ಣು ಬಿಡುತ್ತಿದ್ದಾರೆ. 2014 ರಲ್ಲಿ 20 ವರ್ಷದ ಯುವಕನಿಗೆ 2024 ರ ವೇಳೆಗೆ 30 ವರ್ಷ ವಯಸ್ಸಾಗುತ್ತದೆ. 30 ವರ್ಷದವರಿಗೆ 40 ವರ್ಷ ವಯಸ್ಸಾಗುತ್ತದೆ. ಅಲ್ಲಿಗೆ ಬದುಕು ಕಟ್ಟಿಕೊಳ್ಳುವ ಅವರ ಕನಸುಗಳೆಲ್ಲ ಕಣ್ಣೆದುರೇ ಕಮರಿ ಹೋಗಿವೆ. ದೇಶವೊಂದರ ದೊಡ್ಡ ಸಂಪತ್ತುಗಳಲ್ಲಿ ಮಾನವ ಸಂಪತ್ತೂ ಒಂದು. ಯಾವ ದೇಶ ದುಡಿಯುವ ಕೈಗಳಿಗೆ ಉದ್ಯೋಗ ನೀಡುತ್ತದೊ ಅಂತಹ ದೇಶದ ಅಭಿವೃದ್ಧಿ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಆ ದೇಶದ ಆರ್ಥಿಕತೆ ವಿನಾಶದ ಹಾದಿ ಹಿಡಿಯುತ್ತದೆ. ಈಗ ಭಾರತಕ್ಕೆ ಆಗಿರುವುದು ಇದೇ ಪರಿಸ್ಥಿತಿ. ಈ ಮಾತುಗಳನ್ನು ಮೆದುಳು, ಹೃದಯ ಇರುವವರು ಹೇಳಿದರೆ ಅವರನ್ನು ಪಾಕಿಸ್ತಾನದ ಪರ ಇರುವವರು ಎಂದು ಸುಳ್ಳು ಹೇಳಿಕೊಂಡು ಓಡಾಡಲು ಪ್ರಾರಂಭಿಸುತ್ತಾರೆ. ಪಾಕಿಸ್ತಾನ, ಮಸೀದಿ, ಗುಡಿ, ಮಂದಿರ, ಹಿಂದೂ-ಮುಸ್ಲಿಂ ಎಂದು ಹೇಳಿಕೊಂಡು ಓಟು ಪಡೆದು ಭೀಕರ ನಿರುದ್ಯೋಗವನ್ನು, ಭರಿಸಲಾಗದಷ್ಟು ಬೆಲೆ ಏರಿಕೆಯನ್ನು, ತೆರಿಗೆ ಏರಿಕೆಯನ್ನು, ರೈತ ವಿರೋಧಿ ಕಾಯ್ದೆಗಳನ್ನು ದೇಶದ ಮೇಲೆ ಹೇರಲಾಗಿದೆ. ದೇಶದ ಸಂಪತ್ತುಗಳನ್ನೆಲ್ಲ ಕಾರ್ಪೊರೇಟ್ ಬಂಡವಾಳಿಗರಿಗೆ ಬಿಟ್ಟುಕೊಡಲಾಗುತ್ತಿದೆ. ದೇಶದ ಬ್ಯಾಂಕುಗಳು, ಎಲ್‌ಐಸಿಯನ್ನೂ ಮುಳುಗಿಸಲಾಗುತ್ತಿದೆ. ಮಧ್ಯಮ ವರ್ಗದವರು ಕಾಸಿಗೆ ಕಾಸು ಸೇರಿಸಿ ಬ್ಯಾಂಕುಗಳಲ್ಲಿಟ್ಟ ಉಳಿತಾಯದ ಹಣಕ್ಕೆ ಬ್ಯಾಂಕುಗಳು ನಷ್ಟದಲ್ಲಿವೆ ಎಂದು ಹೇಳಿ ಕಡಿಮೆ ಬಡ್ಡಿ ನೀಡಿ ಶೋಷಿಸಲಾಗುತ್ತಿದೆ. ಅದೇ ಹೊತ್ತಿನಲ್ಲಿ ಬಂಡವಾಳಿಗರ ಸಾಲ ಮನ್ನಾ ಮಾಡಲಾಗುತ್ತಿದೆ. ಬ್ಯಾಂಕುಗಳು ಇನ್ನೆಲ್ಲಿ ಲಾಭದಲ್ಲಿರಲು ಸಾಧ್ಯ? ಸಾಕಷ್ಟು ಶ್ರಮಪಟ್ಟು ಕಟ್ಟಿದ್ದ ಕರ್ನಾಟಕ ಮೂಲದ ಬ್ಯಾಂಕುಗಳು ದೊಡ್ಡ ಮಟ್ಟದ ಲಾಭದಲ್ಲಿದ್ದವು. ಆದರೆ ಅವುಗಳನ್ನು ಉತ್ತರ ಭಾರತದ ಅಂಬಾನಿ, ಅದಾನಿ, ಚೋಕ್ಸಿ, ಮೋದಿಗಳಿಗೆ ಸಾಲ ಕೊಟ್ಟು ಬರ್ಬಾದಾಗಿ ಹೋದ ಬ್ಯಾಂಕುಗಳ ಜೊತೆ ವಿಲೀನಗೊಳಿಸಿ ಆರೋಗ್ಯಕರ ಬ್ಯಾಂಕುಗಳನ್ನೂ ನಾಶ ಮಾಡಲಾಯಿತು. ಒಂದೇ ಎರಡೇ ಮೋದಿಯವರು ಸೃಷ್ಟಿಸಿದ ಅವಾಂತರಗಳು. ಅವರ ತಲೆಯಲ್ಲಿ ದೇಶವನ್ನು ನಾಶ ಮಾಡುವುದು ಹೇಗೆ ಎಂಬ ಐಡಿಯಾಗಳ ಪರ್ವತವೇ ಇದ್ದಂತಿದೆ.

ಯಾವುದೇ ದೇಶ ಸ್ವಾವಲಂಬಿಯಾಗುವುದು ಎಂದರೆ ರಫ್ತನ್ನು ಜಾಸ್ತಿ ಮಾಡಿ ಆಮದನ್ನು ಕಡಿಮೆ ಮಾಡಬೇಕು. ಹಾಗಾಗಬೇಕಾದರೆ ಆಮದು ಶುಲ್ಕವನ್ನು ಅಂದರೆ ಕಸ್ಟಮ್ಸ್ ತೆರಿಗೆಗಳನ್ನು ಹೆಚ್ಚಿಸಬೇಕು. ಆದರೆ ಮೇಕ್ ಇನ್ ಇಂಡಿಯಾ ಎಂದು ಘೋಷಣೆ ಮಾಡಿದ ಭಾರತದಲ್ಲಿ ಇಂದು ಆಗುತ್ತಿರುವುದೇನು? 2013-14ರಲ್ಲಿ ರೂ.32.20 ಲಕ್ಷ ಕೋಟಿ ಮೌಲ್ಯದಷ್ಟು ಆಮದು ಮಾಡುತ್ತಿದ್ದರೆ, 2019-20 ರಲ್ಲಿ ಅದು ಇನ್ನಷ್ಟು ಹೆಚ್ಚಾಗಿ ಹತ್ತತ್ತಿರ ರೂ.35 ಲಕ್ಷ ಕೋಟಿ ಮೌಲ್ಯದಷ್ಟು ವಸ್ತುಗಳ ಆಮದನ್ನು ಮಾಡಿಕೊಳ್ಳಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಘೋಷಣೆ ನಿಜವೇ ಆಗಿದ್ದರೆ, ರಫ್ತಿನ ಪ್ರಮಾಣ ಸಿಕ್ಕಾಪಟ್ಟೆ ಹೆಚ್ಚಾಗಬೇಕಾಗಿತ್ತು. ಆದರೆ ಇಲ್ಲಿ ಸುಮಾರು ರೂ.1.25 ಲಕ್ಷ ಕೋಟಿ ಮೌಲ್ಯದಷ್ಟು 2013-14ಕ್ಕೆ ಹೋಲಿಸಿದೆ ಕಡಿಮೆ ರಫ್ತು ಮಾಡುತ್ತಿದ್ದೇವೆ.

2015ರಲ್ಲಿ ಮನಮೋಹನ್‌ಸಿಂಗ್‌ರವರು ಅಧಿಕಾರದಿಂದ ಇಳಿದ ನಂತರದ ವರ್ಷದಲ್ಲೇ ರಫ್ತಿನ ಪ್ರಮಾಣ ರೂ. 19 ಲಕ್ಷ ಕೋಟಿಗಳಿಗೆ ಇಳಿಯಿತು. 2016ರಲ್ಲಿ ರೂ. 19 ಲಕ್ಷ ಕೋಟಿಗಳಿಗಿಂತಲೂ ಕಡಿಮೆಯಾಗುತ್ತದೆ. ಇದೇ ಅವಧಿಯ ಕಸ್ಟಮ್ಸ್ ತೆರಿಗೆಯ ಸಂಗ್ರಹಣೆ ಕೂಡ ವೇಗವಾಗಿ ಕಡಿಮೆಯಾಗುತ್ತಿದೆ. ಅಂದರೆ ಆಮದು ವಸ್ತುಗಳ ಮೇಲೆ ಅತ್ಯಂತ ಕಡಿಮೆ ಮಟ್ಟದ ತೆರಿಗೆಯನ್ನು ವಿಧಿಸಲಾಗುತ್ತಿದೆ. ಕಸ್ಟಮ್ಸ್ ತೆರಿಗೆ 1,72,085 ಕೋಟಿಗಳಿಂದ 1,09,282 ಕೋಟಿ ರೂಗಳಿಗೆ ಇಳಿಕೆಯಾಗಿದೆ. ಆಮದು ಶುಲ್ಕ ಕಡಿಮೆ ಮಾಡಿದರೆ ವಿದೇಶಿ ವಸ್ತುಗಳ ಬೆಲೆ ಕಡಿಮೆಯಾಗಿ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡರೆ ನಿಮ್ಮ ಮೇಕ್ ಇನ್ ಇಂಡಿಯಾ ಘೋಷಣೆ ಬರೀ ಬುರ್ನಾಸು ಎನ್ನಿಸಿಕೊಳ್ಳುವುದಿಲ್ಲವೇ? 15ನೇ ಹಣಕಾಸು ಆಯೋಗವು ಅಂದಾಜು ಮಾಡಿರುವ ಕಸ್ಟಮ್ಸ್ ತೆರಿಗೆಗಳು ಸಹ 2024-25ಕ್ಕೆ ಕೇವಲ ರೂ.1,63,214 ಕೋಟಿ ಮಾತ್ರ. ಇದು 2015 ರಲ್ಲಿ ರೂ.2,10,338 ಕೋಟಿಗಳಷ್ಟು ಇತ್ತು. 2016 ರಲ್ಲಿ ರೂ.2,25,370 ಕೋಟಿಗಳಿಗೆ ಏರಿಕೆಯಾಗಿತ್ತು. ಯಾವಾಗ ಪ್ರಧಾನಿ ಮೋದಿಯವರು ಮೇಕ್ ಇನ್ ಇಂಡಿಯಾ ಎಂದು 2014 ರಲ್ಲಿ ಘೋಷಣೆ ಮಾಡಿದರೋ ದೇಶಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿಬಿಟ್ಟರು. ರೇಷ್ಮೆ ಮೇಲಿನ ಆಮದು ತೆರಿಗೆ ಶೇ.30 ರಿಂದ ಶೇ.5 ಕ್ಕೆ ಇಳಿಯಿತು. ಅನೇಕ ಕೃಷಿ ಉತ್ಪನ್ನಗಳ ಮೇಲಿನ ತೆರಿಗೆ ಕಡಿಮೆಯಾಯಿತು. ಒಂದು ಕೆಜಿಗೆ ರೂ. 750 ನಂತೆ ಮಾರಾಟವಾಗುತ್ತಿದ್ದ ಮೆಣಸು ಈಗ ರೂ.250ಕ್ಕೆ ಇಳಿದು ಬಿಟ್ಟಿದೆ. ದೇಶದ ಜನರು ಇತ್ತೀಚೆಗೆ ಅಲ್ಲಲ್ಲಿ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿಯವರು ಮಾಡಿದ ಘೋಷಣೆಗೆ ಅಥವಾ ಮಾತಿಗೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಅರ್ಥ ಮಾಡಿಕೊಂಡರೆ ಮಾತ್ರ ನಿಜ ಏನೆಂದು ಅರ್ಥವಾಗುತ್ತದೆ. ದೇಶವನ್ನು ಅಭಿವೃದ್ಧಿ ಮಾಡುತ್ತಿದ್ದೇನೆ ಎಂದು ಅವರು ಘೋಷಣೆ ಕೂಗಿದರೆ ದೇಶವನ್ನು ಮಾರಾಟ ಮಾಡುತ್ತಿದ್ದೇನೆ ಎಂಬಂತೆ ಕೇಳಿಸುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top