ವಿಧಾನ ಪರಿಷತ್ ಚುನಾವಣೆ: ಕಮಲದ ಭದ್ರಕೋಟೆಗೆ ಲಗ್ಗೆ ಇಡಲು ಕೈ ಕಸರತ್ತು | Vartha Bharati- ವಾರ್ತಾ ಭಾರತಿ

--

ಆತಂಕದಲ್ಲಿ ಸೋಲಿನ ರುಚಿ ನೋಡದ ಬಿಜೆಪಿ

ವಿಧಾನ ಪರಿಷತ್ ಚುನಾವಣೆ: ಕಮಲದ ಭದ್ರಕೋಟೆಗೆ ಲಗ್ಗೆ ಇಡಲು ಕೈ ಕಸರತ್ತು

 ಮಂಥರ್ ಗೌಡ - ಕಾಂಗ್ರೆಸ್ ಅಭ್ಯರ್ಥಿ          ಸುಜಾಕುಶಾಲಪ್ಪ- ಬಿಜೆಪಿ ಅಭ್ಯರ್ಥಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆ ಕಾವೇರುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಮಲದ ಭದ್ರಕೋಟೆಗೆ ಲಗ್ಗೆ ಇಡಲು ಕೈ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದರೆ, ಸೋಲಿನ ರುಚಿ ನೋಡದ ಬಿಜೆಪಿ ಆತಂಕದಿಂದಲೇ ಈ ಚುನಾವಣೆಯನ್ನು ಎದುರಿಸುತ್ತಿರುವುದು ವಿಶೇಷ. 

ಪುಟ್ಟ ಜಿಲ್ಲೆ ಕೊಡಗಿನಲ್ಲಿ 104 ಗ್ರಾಮ ಪಂಚಾಯತ್ ಗಳು, ಮಡಿಕೇರಿ ನಗರಸಭೆ, ಸೋಮವಾರಪೇಟೆ, ಕುಶಾಲನಗರ ಮತ್ತು ವಿರಾಜಪೇಟೆ ಪಟ್ಟಣ ಪಂಚಾಯತ್ ನ ಒಟ್ಟು 1334 ಮತದಾರರಿದ್ದಾರೆ. ಇವರುಗಳು ಬಿಜೆಪಿ ಅಭ್ಯರ್ಥಿ ಸುಜಾಕುಶಾಲಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಅವರ ರಾಜಕೀಯ ಭವಿಷ್ಯ ಬರೆಯುವ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಾಗಿದ್ದಾರೆ.

ಡಿ.10ರಂದು ನಡೆಯುವ ಚುನಾವಣೆ ಕೊಡವ ಮತ್ತು ಗೌಡ ಅಭ್ಯರ್ಥಿಗಳು ಎನ್ನುವ ಕಾರಣಕ್ಕಾಗಿ ಕೊಡಗಿನ ಮಟ್ಟಿಗೆ ತೀವ್ರ ಕುತೂಹಲವನ್ನು ಕೆರಳಿಸಿದೆ. ರಾಜಕೀಯ ನೆಲೆ ಕಂಡುಕೊಳ್ಳುವ ತವಕದಲ್ಲಿದ್ದ ಮಂಥರ್ ಗೌಡ ಅವರಿಗೆ ಕೆಪಿಸಿಸಿ ಬಿಜೆಪಿಯ ಭದ್ರಕೋಟೆ ಕೊಡಗಿನಲ್ಲಿ ಮಣೆ ಹಾಕಿ ಅಗ್ನಿ ಪರೀಕ್ಷೆಗೆ ದೂಡಿದೆ. ಬಿಜೆಪಿಯಲ್ಲಿ ಮುನಿಸಿಕೊಂಡಿರುವ ಮಾಜಿ ಸಚಿವ ಎ.ಮಂಜು ತಮ್ಮ ಪುತ್ರನ ಪರ ಪ್ರಚಾರಕ್ಕಿಳಿದಿರುವುದು ವಿಶೇಷ.

ಕೊಡಗಿನಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಧೈರ್ಯವನ್ನು ಯಾರೂ ಮಾಡದ ಕಾರಣ ಆ ಪಕ್ಷ ಇಷ್ಟು ವರ್ಷ ಭದ್ರವಾಗಿತ್ತು ಎಂದು ಅಭಿಪ್ರಾಯಪಡುವ ಮಂಥರ್ ಗೌಡ, ಈ ಬಾರಿ ತಾವು ಪ್ರಬಲ ಪೈಪೋಟಿ ನೀಡುವ ಪ್ರತಿಜ್ಞೆ ಮಾಡಿದ್ದಾರೆ. ನಾನು ಗೆದ್ದು ತೋರಿಸುತ್ತೇನೆ ಎಂದಿದ್ದರೆ, ಕೊಡಗು ಜಿಲ್ಲಾ ಕಾಂಗ್ರೆಸ್ಸಿಗರು ಕೂಡ ಯುವ ಅಭ್ಯರ್ಥಿಯ ವೇಗಕ್ಕೆ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಉತ್ಸಾಹ ಮತ್ತು ಬದ್ಧತೆ ಹೆಚ್ಚಾಗಿದೆ ಎಂದು ಮುಖಂಡರು ಬೀಗುತ್ತಿದ್ದಾರೆ. 

ಆಮದು ಅಭ್ಯರ್ಥಿ ಎಂದು ಟೀಕೆಯಲ್ಲಿ ತೊಡಗಿರುವ ಬಿಜೆಪಿಗೆ ತಿರುಗೇಟು ನೀಡುತ್ತಲೇ ಬರುತ್ತಿರುವ ಹಾಸನದ ಮಂಥರ್ ಗೌಡ ನಾನು ಕೊಡವ ಕುಟುಂಬದ ಯುವತಿಯನ್ನೇ ವಿವಾಹವಾಗಿದ್ದು, ಕೊಡಗಿನ ಅಳಿಯ ಎಂದು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಗೆಲುವು ಸುಲಭವಲ್ಲ

ಕೊಡಗಿನ ಬಹುಪಾಲು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಬಿಜೆಪಿ ಬೆಂಬಲಿತರೇ ಆಗಿದ್ದರೂ ಮಂಥರ್ ಗೌಡ ಧೈರ್ಯಗೆಟ್ಟಂತೆ ಕಂಡು ಬರುತ್ತಿಲ್ಲ. ಆದರೆ ಬಿಜೆಪಿ ನಮ್ಮ ಗೆಲುವು ಅಷ್ಟು ಸುಲಭವಲ್ಲ ಎನ್ನುವ ಆತಂಕದಿಂದಲೇ ಚುನಾವಣಾ ತಂತ್ರಗಾರಿಕೆಯಲ್ಲಿ ತೊಡಗಿದೆ. ಬಿಜೆಪಿ ಅಭ್ಯರ್ಥಿ ಸುಜಾಕುಶಾಲಪ್ಪ ಅವರು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ಈ ಹಿಂದೆ ಎಂಎಲ್‍ಸಿ ಯಾಗಿದ್ದ ಸುನೀಲ್ ಸುಬ್ರಮಣಿ ಅವರ ಸಹೋದರರಾಗಿದ್ದು, ಕುಟುಂಬ ರಾಜಕಾರಣದ ಹಣೆಪಟ್ಟಿ ಅವರನ್ನು ಕಾಡಿದೆ. 

ಇದನ್ನೇ ಅಸ್ತ್ರ ಮಾಡಿಕೊಂಡಿರುವ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಒಂದೇ ಕುಟುಂಬದ ಸದಸ್ಯರಿಗೆ ಎಲ್ಲಾ ಅಧಿಕಾರವನ್ನು ನೀಡುತ್ತಿರುವ ಬಿಜೆಪಿಯ ನಿಲುವಿನಿಂದ ಮತದಾರರು ಬೇಸತ್ತಿದ್ದು, ಈ ಬಾರಿ ನಮಗೆ ಮತ ನೀಡಿ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲೇ ಸ್ಪರ್ಧಿಸಬೇಕಾಗಿದ್ದ ಸುಜಾಕುಶಾಲಪ್ಪ ಅವರು ಕಾನೂನಾತ್ಮಕ ತೊಡಕಿನಿಂದಾಗಿ ಕಣದಿಂದ ಹಿಂದೆ ಸರಿದಿದ್ದರು. ಇದೇ ಕಾರಣದಿಂದ ಸಹೋದರ ಸುನೀಲ್ ಸುಬ್ರಮಣಿ ವಿಧಾನ ಪರಿಷತ್ ಪ್ರವೇಶಿಸಲು ಸಾಧ್ಯವಾಯಿತು. ಇದೀಗ ಮತ್ತೆ ಸ್ಪರ್ಧೆಗಿಳಿದಿರುವ ಸುಜಾಕುಶಾಲಪ್ಪ ಗೆಲುವಿನ ವಿಶ್ವಾಸದಲ್ಲಿದ್ದಾರೆ. 

ಕೊಡಗು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ನ ಒಂದು ಸ್ಥಾನಕ್ಕೆ ನಡೆಯುವ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿಗೆ ವೇದಿಕೆಯಾಗಿ ಪರಿಣಮಿಸಿದ್ದು, ಮೇಲ್ನೊಟಕ್ಕೆ ಬಿಜೆಪಿಯ ಅಭ್ಯರ್ಥಿ ಸುಜಾ ಕುಶಾಲಪ್ಪ ಪ್ರಬಲವಾಗಿ ಗೋಚರಿಸಿದರು, ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಅವರು ಬಿಜೆಪಿಯ ನಾಗಲೋಟಕ್ಕೆ ಲಗಾಮು ಹಾಕುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದು ಕಂಡು ಬಂದಿದೆ.

ಗ್ರಾ.ಪಂ ಸದಸ್ಯರೇ ನಿರ್ಣಾಯಕ

ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಬೆಂಬಲಿತರು ಸುಮಾರು 800 ರಿಂದ 900 ಮಂದಿ ಇದ್ದರೆ, 300 ರಿಂದ 400 ಮಂದಿ ಕಾಂಗ್ರೆಸ್ ಪರವಾಗಿದ್ದಾರೆ. ಆದರೆ ಗ್ರಾ.ಪಂ ಚುನಾವಣೆ ಯಾವುದೇ ಪಕ್ಷದ ಗುರುತಿನಿಂದ ನಡೆಯದೇ ಇರುವುದರಿಂದ ನಿಖರವಾಗಿ ಬಿಜೆಪಿ ಅಥವಾ ಕಾಂಗ್ರೆಸ್ ಗೆ ಇಷ್ಟೇ ಮತಗಳು ಹಂಚಿಕೆಯಾಗುತ್ತದೆ ಎಂದು ಅಂದಾಜಿಸುವುದು ಕಷ್ಟಸಾಧ್ಯ. ಕೊನೆಯ ದಿನಗಳ ಮತ ಸೆಳೆಯುವ ತಂತ್ರಗಾರಿಕೆಯಿಂದ ರಾಜಕೀಯ ಲೆಕ್ಕಾಚಾರಗಳು ತಲೆ ಕೆಳಗಾಗುವ ಎಲ್ಲಾ ಸಾಧ್ಯತೆಗಳಿದೆ. 

ಕೊಡಗಿನಲ್ಲಿ ಜಾತಿ ರಾಜಕಾರಣ ಕಷ್ಟ

ಬಿಜೆಪಿಯ ಸುಜಾಕುಶಾಲಪ್ಪ ಅವರು ಕೇವಲ ಕೊಡವರ ಮತಗಳನ್ನೇ ನಂಬಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ನ ಮಂಥರ್ ಗೌಡ ಕೂಡ ಗೌಡರ ಮತಗಳನ್ನೇ ಅವಲಂಬಿಸುವಂತ್ತಿಲ್ಲ. ಕಾರಣ ಉಭಯ ಕಡೆಯ ಮತಗಳ ಸಂಖ್ಯೆ ತಲಾ 200 ರಿಂದ 300 ಅಷ್ಟೆ. ಕೊಡವ ಮತ್ತು ಗೌಡ ರಾಜಕಾರಣ ಕೆಲಸ ಮಾಡುವುದು ಸ್ವಲ್ಪ ಕಷ್ಟವೇ ಆಗಿದೆ. ಬಿಜೆಪಿ ತನ್ನ ಸಾಂಪ್ರದಾಯಿಕ ಮತಗಳನ್ನೇ ವರವಾಗಿ ಪರಿಗಣಿಸಿದರೆ, ಕಾಂಗ್ರೆಸ್ ಅಹಿಂದ ಮತಗಳೇ ಶ್ರೀರಕ್ಷೆ ಎನ್ನುವ ಲೆಕ್ಕಾಚಾರದಲ್ಲಿದೆ.

ಕೇಸರಿಯ ಭದ್ರಕೋಟೆ ಕೊಡಗಿನಲ್ಲಿ ಹಾಸನದ ಹುಡುಗ ಮಂಥರ್ ಗೌಡರ ರಾಜಕೀಯ ಮಂತ್ರಗಾರಿಕೆ ಕೆಲಸ ಮಾಡುತ್ತದೆಯೇ ಅಥವಾ ಬಿಜೆಪಿಯ ಸಾಂಪ್ರದಾಯಿಕ ತಂತ್ರಗಾರಿಕೆ ಫಲ ನೀಡುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top