ಮಸುಮ ಸಾಹಿತ್ಯ ಕೃತಿಗಳ ಹೆಜ್ಜೆ ಸದ್ದು | Vartha Bharati- ವಾರ್ತಾ ಭಾರತಿ

--

ಈ ಹೊತ್ತಿನ ಹೊತ್ತಿಗೆ

ಮಸುಮ ಸಾಹಿತ್ಯ ಕೃತಿಗಳ ಹೆಜ್ಜೆ ಸದ್ದು

‘ಹೆಜ್ಜೆ ಸದ್ದು ನಿಲ್ಲಲಿಲ್ಲ’ ಮಸುಮ ಸಾಹಿತ್ಯ ಕೃತಿಗಳ ವಿಮರ್ಶಾ ಸಂಕಲನ. ಡಾ. ಶ್ರೀನಿವಾಸ ಗಿಳಿಯಾರು, ರಮೇಶ್ ಮಂಜೇಶ್ವರ ಪ್ರಧಾನ ಸಂಪಾದಕತ್ವದಲ್ಲಿ ಮೂಡಿ ಬಂದಿರುವ ಈ ಕೃತಿಯಲ್ಲಿ ಮಸುಮ ಕೃತಿಗಳನ್ನು ವಿವಿಧ ಲೇಖಕರು ವಿಶ್ಲೇಷಿಸಿದ್ದಾರೆ.

ಇಲ್ಲಿನ ಲೇಖಕರು ಕೃತಿಕಾರನ ಹಂಗನ್ನು ಕಡಿದುಕೊಂಡು ಮಸುಮ ಕೃತಿಗಳಲ್ಲಿನ ಸಾಹಿತ್ಯ ಸೌಂದರ್ಯ, ಜೀವನ ಪ್ರೀತಿ, ಕನಸುಗಾರಿಕೆಕುರಿತು ಮಾತನಾಡಿದ್ದಾರೆ. ಡಾ. ಮಾಧವ ಪೆರಾಜೆರವರು ಕಾವ್ಯ ಭಾಷೆಯ ಕುರಿತು ಚರ್ಚಿಸಿ ಮಸುಮ ಕವನಗಳನ್ನು ‘ಮೇಘಕ್ಕೆ ತಾಗುವ ಕಾವ್ಯ’ ಎಂದು ವರ್ಣಿಸಿದ್ದಾರೆ. ಡಾ. ದಿನೇಶ್ ನಾಯಕ್ ಕಾರಾಜೆರವರು ಮಸುಮಸಿಟ್ಟು, ಆಕ್ರೋಶ ವ್ಯಕ್ತಪಡಿಸುವ ವ್ಯಕ್ತಿಯಾಗಿ ಹಲವು ಲೇಖಕರು ಗುರುತಿಸಿದ್ದು, ಆದರೆ ಸಿಟ್ಟು ಆಕ್ರೋಶಗಳು ಅವರ ಕಾವ್ಯದಲ್ಲಿ ಗೈರು ಹಾಜರಾಗುವ ಕುತೂಹಲಕಾರಿ ಅಂಶವನ್ನು ಗುರುತಿಸಿದ್ದಾರೆ. ಕೃತಿಗಳ ವಿಶ್ಲೇಷಣೆಗೆ ಸಾಹಿತ್ಯೇತರ ಅರಿವಿನ ಚೌಕಟ್ಟುಗಳನ್ನು ಅಂದರೆ ರಮೇಶ್ ಮಂಜೇಶ್ವರ ಅವರು ‘ಲಿಂಗತ್ವ’, ‘ಲೈಂಗಿಕತೆ’ ‘ಜಾತಿ’, ಶ್ರೀನಿವಾಸ ಹೊಡೆಯಾಲರವರು ‘ಮಾಧ್ಯಮ’, ಡಾ. ಪ್ರಕಾಶ್ ಪಿಂಟೊರವರು ‘ಗ್ರಾಮೀಣ ಆರ್ಥಿಕತೆ’, ಡಾ. ಶ್ರೀನಿವಾಸಗಿಳಿಯಾರುರವರು ‘ಆಧುನಿಕೋತ್ತರ ಸಾಮಾಜಿಕ ಚೌಕಟ್ಟು’ ಇತ್ಯಾದಿ ಪರಿಕಲ್ಪನೆಗಳನ್ನು ಬಳಸಿಕೊಂಡಿದ್ದಾರೆ. ಕೃತಿಗಳನ್ನು ವಿವರಣಾತ್ಮಕವಾಗಿ ಓದುವ ಪ್ರಯತ್ನವನ್ನೂ ಹಲವು ಲೇಖಕರು ಮಾಡಿದ್ದಾರೆ.

ಮಸುಮ ಅವರ ಕೃತಿಗಳನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ, ಆರ್ಥಿಕ, ಭೌಗೋಳಿಕ ಹಾಗೂ ಸಾಂಸ್ಕೃತಿಕ ಪರಿಸರದಲ್ಲಿಟ್ಟು ಕನ್ನಡ ಸಾಹಿತ್ಯ / ಕರಾವಳಿ ಭಾಗದ ಕನ್ನಡ ಸಾಹಿತ್ಯದಲ್ಲಿ ಮಸುಮ ಅವರ ಸ್ಥಾನ ಎಂಥದ್ದು ಎನ್ನುವ ನಿರ್ಣಯ ತೆಗೆದುಕೊಳ್ಳುವ ಬಹುಮುಖ್ಯ ಪ್ರಯತ್ನವನ್ನು ಇಲ್ಲಿನ ಲೇಖನಗಳು ಮಾಡಿವೆ. ಕರಾವಳಿ ದಲಿತ ಸಾಹಿತ್ಯ ಚರಿತ್ರೆ ಹಾಗೂ ಇಲ್ಲಿನ ಸಾಂಸ್ಕೃತಿಕ ಪರಿಸರದೊಂದಿಗೆ ಮಸುಮ ಕೃತಿಗಳನ್ನು ವಿವರಿಸಿಕೊಳ್ಳುತ್ತಾ ಅದುವರೆಗೂ ಬಂದಿರುವ ಸಾಹಿತ್ಯ ಉದಾರವಾದಿ ಹಿನ್ನೆಲೆಯದ್ದು ಎಂದು ಡಾ. ಸುಧಾರಾಣಿಯವರು ಗುರುತಿಸಿದರೆ, ಡಾ. ಜ್ಯೋತಿ ಚೇಳ್ಯಾರುರವರು ಕನ್ನಡ ದಲಿತ ಸಾಹಿತ್ಯ ಪರಂಪರೆಯಲ್ಲಿ ಮಸುಮ ಕೃತಿಗಳನ್ನು ಇಟ್ಟು ದಲಿತ ಬಂಡಾಯ ಸಾಹಿತ್ಯಕ್ಕೆ ಮಸುಮ ಅವರು ಕರಾವಳಿ ಭಾಗದ ಸಮರ್ಥ ಪ್ರತಿನಿಧಿ ಎಂದು ಗುರುತಿಸಿದ್ದಾರೆ. ಸುಮುಖಾನಂದ ಜಲವಳ್ಳಿಯವರು ಇದು ದಲಿತ ಸಂವೇದನೆಯ ಕಾವ್ಯವೆನಿಸಿದರೂ ಅದನ್ನು ಮೀರಿ ಇಲ್ಲಿನ ಆಶಯ ಎಲ್ಲರನ್ನು ತಬ್ಬಿಕೊಳ್ಳುತ್ತದೆ ಎಂದಿದ್ದಾರೆ. ‘ಹೆಜ್ಜೆಸದ್ದು ನಿಲ್ಲಲಿಲ್ಲ’ ಶೀರ್ಷಿಕೆಯೇ ಹೇಳುವಂತೆ ಇದು ಜನಪರ ಚಟುವಟಿಕೆಗಳ ನಿರಂತರತೆಯನ್ನು ಧ್ವನಿಸುತ್ತದೆ. ಈ ನಿರಂತರತೆ ಕೆಲವೊಮ್ಮೆ ಏಕತಾನತೆಯಾಗಿಯೂ ಪರಿಣಮಿಸಬಹುದು. ಯಾಕೆಂದರೆ 1970 ರ ದಶಕದ ದಲಿತ ಬಂಡಾಯ ಸಾಹಿತ್ಯ ಕೊಡಮಾಡಿದ ಪರಿಕಲ್ಪನೆಗಳಿಂದ ಇಂದಿನ ಸಮಾಜವನ್ನು ಅರ್ಥೈಸಿಕೊಳ್ಳುವುದು ಸುಲಭವಲ್ಲ. ಇದನ್ನು ಅರ್ಥಮಾಡಿಕೊಳ್ಳಲು ಹೊಸ ಪರಿಕಲ್ಪನೆಗಳು, ಹೊಸ ಭಾಷೆ, ಹೊಸ ನೋಟ ಬೇಕಾಗುತ್ತದೆ. ಮಸುಮ ಅವರು ಬಹುಮಟ್ಟಿಗೆ ದಲಿತ ಬಂಡಾಯದ ಸಾಮಾಜಿಕ ಗ್ರಹಿಕೆ ನೀಡಿದ ಅರಿವಿನ ಚೌಕಟ್ಟಿನಲ್ಲಿ ನಿಂತುಬಿಡುತ್ತಾರೆಯೇ? ಈ ಬಗ್ಗೆ ಸಣ್ಣ ಸುಳಿವುಗಳು ಕೆಲವು ಲೇಖನಗಳಲ್ಲಿ ಕಾಣಿಸಿಕೊಂಡಿದ್ದೂ ಇದೆ. ಈ ನಿಟ್ಟಿನಲ್ಲಿ ವರ್ತಮಾನವನ್ನು ಮರುಕಟ್ಟುವ ಕೆಲಸ ಆಗಬೇಕಾಗಿದೆ.

ಆಕೃತಿ ಆಶಯ ಮಂಗಳೂರು ಈ ಕೃತಿಯನ್ನು ಹೊರತಂದಿದೆ.

200 ಪುಟಗಳ ಈ ಕೃತಿಯ ಮುಖಬೆಲೆ 240 ರೂಪಾಯಿ.

ಆಸಕ್ತರು 0824 2972002 ದೂರವಾಣಿಯನ್ನು ಸಂಪರ್ಕಿಸಬಹುದು. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top