ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯ ಮತ್ತು ನೂತನ ಆಯೋಗದ ಕಾರ್ಯವಿಧಾನ
-
ಕಳೆದೆರಡು-ಮೂರು ತಿಂಗಳಿನಿಂದಲೂ, ಪ್ರಸಕ್ತ ವಿದ್ಯಮಾನ ಕರ್ನಾಟಕದ ಜನಮಾನಸದಲ್ಲಿ ಅಚ್ಚಳಿದಿದೆ. ಕಾತರದಿಂದ ಕಾಯುತ್ತಿದ್ದ ಪ್ರಜಾಪ್ರಭುತ್ವ ಪ್ರೇಮಿಗಳಿಗೆ, ಸಲ್ಲದ ನೆವದಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆ ಬೇಸರ ಉಂಟುಮಾಡಿದೆ ಎಂಬುದರಲ್ಲಿ ಶಂಕೆಯಿಲ್ಲ. ಸರಕಾರ ಸದುದ್ದೇಶದಿಂದ ಆಯೋಗ ರಚಿಸಿದ್ದಲ್ಲಿ ಯಾವ ಅನುಮಾನಕ್ಕೂ ಆಸ್ಪದವಿರುತ್ತಿರಲಿಲ್ಲ. ಸರಕಾರದ ಈ ಸಂದೇಹಾಸ್ಪದ ನಡೆಯೇ ಇಷ್ಟೆಲ್ಲಾ ಊಹಾಪೋಹಗಳಿಗೆ ಹೇತುವಾಗಿದೆ.
ಸರ್ವೋಚ್ಚ ನ್ಯಾಯಾಲಯದ ಕಟ್ಟಾಜ್ಞೆ ಹೊರಬಿದ್ದ ಸರಿ ಸುಮಾರು ಹನ್ನೆರಡು ವರ್ಷಗಳ ನಂತರವಷ್ಟೇ, ಕರ್ನಾಟಕ ಸರಕಾರ ಸ್ಥಳೀಯ ನಗರ ಮತ್ತು ಪಂಚಾಯತ್ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಅವಕಾಶವಾಗುವಂತೆ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು, ಹೊಸ ಆಯೋಗವೊಂದನ್ನು ರಚಿಸಿ ಕೈತೊಳೆದುಕೊಂಡಿದೆ. ಹೀಗೆ ಹೇಳಲು ಕಾರಣವೂ ಇದೆ. ಮೂರು ತಿಂಗಳ ಅತ್ಯಲ್ಪ ಅವಧಿಯಲ್ಲಿ ಆಯೋಗವು ವರದಿ ಸಲ್ಲಿಸಲು ಸರಕಾರ ಆದೇಶಿಸಿರುವುದು, ಅಷ್ಟೇ ಆಗಿದ್ದರೆ, ಬಹುಶಃ ಯಾರೂ ಅನುಮಾನ ಪಡುವ ಅಗತ್ಯವಿರಲಿಲ್ಲ. ಆದರೆ ಉಚ್ಚ ನ್ಯಾಯಾಲಯದ ಮುಂದೆಯೂ ಸರಕಾರ ಇದೇ ಮಾತನ್ನು ಉಚ್ಚರಿಸಿದೆ ಮಾತ್ರವಲ್ಲ, ಮುಖ್ಯಮಂತ್ರಿಗಳೂ ಕೂಡ ಅದನ್ನೇ ಪುನರುಚ್ಚರಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದೋ ಅಥವಾ ಹಿಂದುಳಿದ ವರ್ಗಗಳ ಮೂಗಿಗೆ ತುಪ್ಪಸವರುವುದೋ, ಯಾವುದೋ ಒಂದು ಕಾರಣ ಸರಕಾರಕ್ಕಿರಬಹುದು. ಆದರೆ, ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಸರ್ವೋಚ್ಚ ನ್ಯಾಯಾಲಯ ಆಜ್ಞಾಪಿಸಿರುವ ವಿಧಿ-ವಿಧಾನಗಳನ್ನು ಅನುಸರಿಸಿ, ಗುರುತಿಸುವುದಕ್ಕಲ್ಲ ಎಂಬುದೂ ಸರಕಾರ ವಿಧಿಸಿರುವ ಗಡುವಿನಿಂದ ಕಾಣ ಬರುತ್ತದೆ. ಹಾಗಾಗಿ ಈ ಆಯೋಗದ ಉದ್ದೇಶ ಕೇವಲ ರಾಜಕೀಯ ಪ್ರೇರಿತವೇ ವಿನಃ ಮತ್ಯಾವುದೇ ಘನ-ಗಂಭೀರ ಅವಶ್ಯಕತೆಯ ಹಿನ್ನೆಲೆಯಲ್ಲಿ ಇಲ್ಲ.
ಕಳೆದೆರಡು- ಮೂರು ತಿಂಗಳಿನಿಂದಲೂ, ಪ್ರಸಕ್ತ ವಿದ್ಯಮಾನ ಕರ್ನಾಟಕದ ಜನಮಾನಸದಲ್ಲಿ ಅಚ್ಚಳಿದಿದೆ. ಕಾತರದಿಂದ ಕಾಯುತ್ತಿದ್ದ ಪ್ರಜಾಪ್ರಭುತ್ವ ಪ್ರೇಮಿಗಳಿಗೆ, ಸಲ್ಲದ ನೆವದಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆ ಬೇಸರ ಉಂಟುಮಾಡಿದೆ ಎಂಬುದರಲ್ಲಿ ಶಂಕೆಯಿಲ್ಲ. ಸರಕಾರ ಸದುದ್ದೇಶದಿಂದ ಆಯೋಗ ರಚಿಸಿದ್ದಲ್ಲಿ ಯಾವ ಅನುಮಾನಕ್ಕೂ ಆಸ್ಪದವಿರುತ್ತಿರಲಿಲ್ಲ. ಸರಕಾರದ ಈ ಸಂದೇಹಾಸ್ಪದ ನಡೆಯೇ ಇಷ್ಟೆಲ್ಲಾ ಊಹಾಪೋಹಗಳಿಗೆ ಹೇತುವಾಗಿದೆ.
ಕರ್ನಾಟಕ ಸರಕಾರ ಲಾಗಾಯ್ತಿನಿಂದಲೂ, ಈ ವಿಷಯದಲ್ಲಿ ಅನುಸರಿಸಿಕೊಂಡು ಬರುತ್ತಿರುವ ರೀತಿ-ನೀತಿಗಳನ್ನು ಅವಲೋಕಿಸಿದಾಗ, ನ್ಯಾಯಾಲಯಗಳ ಆದೇಶಕ್ಕಾಗಲಿ ಅಥವಾ ಪ್ರಜಾಸತ್ತಾತ್ಮಕ ಬದ್ಧ ತತ್ವಗಳಿಗಾಗಲಿ ಅದು ಬದ್ಧವಾಗಿಲ್ಲ ಎಂಬುದನ್ನು ಅರಿಯಲು, ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ನಂತರದ ಬೆಳವಣಿಗೆಗಳನ್ನು ಗಮನಿಸಬೇಕಾಗಿದೆ.
ಸ್ಥಳೀಯ ನಗರ ಮತ್ತು ಪಂಚಾಯತ್ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಅವಕಾಶವಾಗುವಂತೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕರ್ನಾಟಕ ಸರಕಾರ 1995ರಿಂದ ಜಾರಿಗೆ ತಂದಿದೆ. ಜಾರಿಗೆ ತಂದದ್ದು ಸರಿ. ಆದರೆ, ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವಲ್ಲಿ, ಸರಕಾರ ಸಂಪೂರ್ಣ ವಿಫಲಗೊಂಡಿತು. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಗುರುತಿಸಲಾಗಿದ್ದ ಹಿಂದುಳಿದ ವರ್ಗಗಳ ಪಟ್ಟಿಯನ್ನೇ, ರಾಜಕೀಯ ಮೀಸಲಾತಿಗೂ ಅಳವಡಿಸಿಕೊಂಡಿತು. ಪರಿಶಿಷ್ಟ ವರ್ಗಗಳು ಸೇರಿದಂತೆ, ಒಟ್ಟಾರೆ ಮೀಸಲಾತಿ ಶೇ.50ನ್ನು ಮೀರಿದೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ 2010ರಲ್ಲಿ ನ್ಯಾಯಾಲಯ, ನಿಗದಿಪಡಿಸಿರುವ ಮೀಸಲಾತಿ ಕೋಟಾವನ್ನು ಶೇ.50 ಕ್ಕೆ ಇಳಿಸುವುದೂ ಸೇರಿದಂತೆ ಮೂರು ಹಂತದ ಪರಿಶೀಲನಾ ಕಾರ್ಯವನ್ನು ಕೈಗೊಳ್ಳಲು ಕರ್ನಾಟಕ ಸರಕಾರಕ್ಕೆ ತಾಕೀತು ಮಾಡಿತು.
ಅವೆಂದರೆ -1. ಸ್ವತಂತ್ರ ಮತ್ತು ಸಮರ್ಪಿತ(dedicated) ಆಯೋಗವೊಂದರ ರಚನೆ,
2. ಪ್ರಾಯೋಗಿಕ ಅಂಕಿಅಂಶಗಳನ್ನು ಇಟ್ಟುಕೊಂಡು ಕಟ್ಟುನಿಟ್ಟಿ(rigorous)ನ ಪರಿಶೀಲನಾ ಕಾರ್ಯ ಕೈಗೊಂಡು ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವುದು,
3. ಮೀಸಲಾತಿಯ ಒಟ್ಟು ಕೋಟಾ ಮಿತಿ ಶೇ.50ನ್ನು ಮೀರಬಾರದು ಎಂಬುದು. ಕರ್ನಾಟಕ ಸರಕಾರ ಮೀಸಲಾತಿ ಕೋಟಾ ಮಿತಿಯನ್ನೇನೋ ಶೇ.50 ಕ್ಕಿಳಿಸಿತು. ಆದರೆ, ಮೂರು ಹಂತದ ಪರಿಶೀಲನಾ ಕಾರ್ಯವನ್ನು ಮಾತ್ರ ಕೈಗೊಳ್ಳಲಿಲ್ಲ. ಹಾಗೆಯೇ, ರಾಜ್ಯ ಚುನಾವಣಾ ಆಯೋಗ ಪಂಚಾಯತ್ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿತು. ಹಿಂದುಳಿದ ವರ್ಗಗಳ ಸ್ಥಾನಗಳನ್ನು ಇಳಿಸಲಾಗಿದೆ ಎಂಬ ಮನವಿ ಮೇರೆಗೆ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ವಿಸ್ತೃತ ವಿಚಾರಣೆಗೊಳಪಡಿಸಿ, ಚುನಾವಣೆ ನಡೆಸಲು ಅನುಮತಿ ನೀಡಿತಾದರೂ, ರಾಜಕೀಯವಾಗಿ ಪ್ರಬಲವಾಗಿವೆ ಎಂದು ಪರಿಗಣಿಸಿ ಕೆಲ ಸಮುದಾಯಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿಡುವ ಬಗ್ಗೆ ಪರಿಶೀಲಿಸಲು ಸರಕಾರಕ್ಕೆ ಸೂಚಿಸಿತು(ರಾಜ್ಯ ಚುನಾವಣಾ ಆಯೋಗ v/s ರಾಜ್ಯ ಸರಕಾರ ಮತ್ತು ಇತರರು). ಆದರೆ, ಸರಕಾರ ನ್ಯಾಯಾಲಯದ ಆದೇಶದಂತೆ, ಪರಿಶೀಲನಾ ಕಾರ್ಯಕ್ಕೆ ಕೈ ಹಾಕಲಿಲ್ಲ. ಯಥಾಪ್ರಕಾರ ಪಂಚಾಯತ್ ಚುನಾವಣೆಗಳು ನಡೆದು ಹೋದವು. ಹಾಗೆಯೇ ನ್ಯಾಯಾಲಯದ ಆದೇಶಗಳೂ ಕೂಡ ಸಾರ್ವಜನಿಕ ಮನಸ್ಸಿನಿಂದಲೇ ಮರೆಯಾದವು.
ಹೀಗಿರಲು, ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯದಲ್ಲಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಹಿಂದುಳಿದ ವರ್ಗಗಳಿಗೆ ಮೀಸಲಿರಿಸಿದ ಸ್ಥಾನಗಳ ಕುರಿತು ಪ್ರಕರಣಗಳು ದಾಖಲಾದ ಸಂದರ್ಭದಲ್ಲಿ ಅವುಗಳನ್ನು ನ್ಯಾಯಾಲಯ ಇತ್ಯರ್ಥಪಡಿಸಿ 2010ರಲ್ಲಿ ನೀಡಿರುವ ಆದೇಶದಂತೆ, ಮೂರು ಹಂತದ ಪರಿಶೀಲನಾ ಕಾರ್ಯ ಕೈಗೊಳ್ಳಿ ಅಥವಾ ಹಿಂದುಳಿದ ವರ್ಗಗಳ ಎಲ್ಲಾ ಸ್ಥಾನಗಳನ್ನು ಸಾಮಾನ್ಯ ಎಂದು ಪರಿಗಣಿಸಿ ಚುನಾವಣೆ ನಡೆಸಿ ಎಂಬ ಕಟ್ಟಪ್ಪಣೆಯನ್ನು ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಎಲ್ಲಾ ರಾಜ್ಯಗಳಿಗೂ ವಿಧಿಸಿದೆ.
ಸರ್ವೋಚ್ಚ ನ್ಯಾಯಾಲಯದ ಕಟ್ಟಪ್ಪಣೆಯ ಇಕ್ಕಟ್ಟಿಗೆ ಸಿಲುಕಿದ ಕರ್ನಾಟಕ ಸರಕಾರವು ಗತ್ಯಂತರವಿಲ್ಲದೆ, ಆಯೋಗವನ್ನು ರಚಿಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ಕಾಲಮಿತಿ ಹೇರಿದೆ. ನಿಗದಿತ ಕಾಲಮಿತಿಯಲ್ಲಿ ಆಯೋಗ ‘ರಾಜಕೀಯವಾಗಿ ಹಿಂದುಳಿದ ವರ್ಗಗಳ’ನ್ನು ಗುರುತಿಸಿ ವರದಿ ಸಲ್ಲಿಸಲು ಸಾಧ್ಯವೇ? ಎಂಬ ಅಂಶ ಪರಿಶೀಲನಗೆ ಅರ್ಹವಾಗಿದೆ.
ಮೂರು ಹಂತದ ಪರಿಶೀಲನೆಯಲ್ಲಿ ಬಹು ಮುಖ್ಯವಾಗಿ ಆಯೋಗ ಮಾಡಬೇಕಾಗಿರುವುದು, ಪ್ರಾಯೋಗಿಕ ಅಂಕಿಅಂಶಗಳನ್ನು ಆಧರಿಸಿದ ಅತಿ ಕಟ್ಟುನಿಟ್ಟಿ(rigorous)ನ ಪರಿಶೀಲನಾ ಕಾರ್ಯ. ಈ ಕಾರ್ಯವೆಸಗಬೇಕಾದರೆ, ಸಾಮಾನ್ಯವಾಗಿ ಆಯೋಗಗಳು ಸಿದ್ಧಸೂತ್ರದಡಿಯ ಕಾರ್ಯವಿಧಾನಗಳನ್ನು ಅನುಸರಿಸುವ ಪರಿಪಾಟವಿದೆ. ಅಂತಹ ಕಾರ್ಯವಿಧಾನಗಳನ್ನು ನೂತನ ಆಯೋಗವೂ ಅನುಸರಿಸುವುದು ಅಪೇಕ್ಷಣೀಯ. ಇಲ್ಲವಾದರೆ ನಿರೀಕ್ಷಿತ ಫಲಿತಾಂಶ ಸಿಗುವುದು ಕಷ್ಟಸಾಧ್ಯ.ಆಯೋಗ ಅನುಸರಿಸಬೇಕಾದ ಕೆಲವು ಕಾರ್ಯವಿಧಾನಗಳ ಜೊತೆಯಲ್ಲಿಯೇ ಪ್ರಕೃತ ಕಾರ್ಯಸಾಧನೆಗೆ ಮತ್ತಷ್ಟು ಪೂರಕ ಅಂಶಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಅವನ್ನು ಹೀಗೆ ಹೇಳಬಹುದು:
-ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಪೂರಕವಾಗುವಂತೆ ‘ಪರಿಭಾಷೆ’(definition)ಯನ್ನು ಮತ್ತು ಅಳವಡಿಸಿಕೊಳ್ಳಬೇಕಾದ ಅಗತ್ಯ ಮಾನದಂಡಗಳನ್ನು ರೂಪಿಸಲು ಸಾರ್ವಜನಿಕರಿಂದ ಅಭಿಪ್ರಾಯ ಪಡೆಯಬೇಕಾಗಿದೆ.
-ಹಿಂದುಳಿದ ವರ್ಗ ಮತ್ತು ಮೀಸಲಾತಿ ಕುರಿತಂತೆ ನಿಷ್ಣಾತ ಗಣ್ಯರನ್ನು ಒಳಗೊಂಡ ವಿಚಾರಸಂಕಿರಣ/ ಕಾರ್ಯಾಗಾರಗಳನ್ನು ಏರ್ಪಡಿಸಿ ಅಗತ್ಯ ಮಾಹಿತಿ ಪಡೆಯುವುದೂ ಅಗತ್ಯ.
-ಕಾಲಕಾಲಕ್ಕೆ ಸಲಹೆ ಪಡೆಯುವ ಉದ್ದೇಶದಿಂದ ಒಂದು ಶಾಶ್ವತ ವಿಷಯ ತಜ್ಞರ ಸಮಿತಿ ರಚಿಸುವುದು ಹಾಗೂ ಪ್ರಥಮ ಮೂಲದ ಮಾಹಿತಿಗಾಗಿ, ರಾಜ್ಯದ ಪ್ರತಿಯೊಂದು ಕುಟುಂಬದ ಸಮಗ್ರ ಸಮೀಕ್ಷೆಯನ್ನು ಕೈಗೊಂಡು ಜಾತಿವಾರು ಸಾಮಾಜಿಕ ಮತ್ತು ರಾಜಕೀಯ ಸ್ಥಿತಿ ಗತಿಗಳ ಕುರಿತು ಪ್ರಾಯೋಗಿಕ ಅಂಕಿಅಂಶಗಳನ್ನು ಸಂಗ್ರಹಿಸುವುದು ಅಥವಾ 2015ರಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಳ ಅಂಕಿಅಂಶಗಳನ್ನು ಪಡೆದುಕೊಳ್ಳುವುದು.
ಅಲ್ಲದೆ, ದ್ವಿತೀಯ ಮೂಲದ ಮಾಹಿತಿ (secondary source of information) ಸಂಗ್ರಹಣೆಯೂ ಪರಿಶೀಲನೆಗೆ ಅತ್ಯವಶ್ಯಕ. ಆ ಕಾರಣಕ್ಕಾಗಿ ಈ ಕೆಳಗೆ ನಮೂದಿಸಿರುವ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಜಾತಿವಾರು ಮಾಹಿತಿಯನ್ನು ಪಡೆದುಕೊಳ್ಳುವುದೂ ಅತ್ಯಗತ್ಯ.
-ಕನಿಷ್ಠ ಐದು ಅವಧಿಗಳಲ್ಲಿ ಚುನಾಯಿತರಾಗಿರುವ ಸಂಸತ್ತು ಮತ್ತು ವಿಧಾನ ಸಭಾ ಸದಸ್ಯರು.
-ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯತ್ ಕಾಯ್ದೆ ಅಡಿಯಲ್ಲಿ ಎರಡು ಅವಧಿಗಳಲ್ಲಿ ನಡೆದ ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯತ್ ಸದಸ್ಯರು.
-ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇಲ್ಲದ ಸಮಯದಲ್ಲಿ ನಡೆದ ಬೆಂಗಳೂರು ಮತ್ತು ಇತರ ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳಿಗೆ ಚುನಾಯಿತರಾಗಿದ್ದ ಸದಸ್ಯರು.
ಹಾಗೆಯೇ, ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ನಂತರವೂ ಕೂಡ ಮಾಹಿತಿ ಸಂಗ್ರಹಿಸುವ ಅಗತ್ಯವಿದೆ.
-ಕನಿಷ್ಠ ಮೂರು ಅವಧಿಗಳಲ್ಲಿ, ಪಂಚಾಯತ್ ರಾಜ್ ಕಾಯ್ದೆ, 1993ರ ಅಡಿಯಲ್ಲಿ ನಡೆದಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸದಸ್ಯರು. ಅಂತೆಯೇ,
-ಕನಿಷ್ಠ ಮೂರು ಅವಧಿಗಳಲ್ಲಿ ಬಿಬಿಎಂಪಿ ಮತ್ತು ಇತರ ನಗರಗಳ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳಿಗೆ ಚುನಾಯಿತರಾಗಿರುವ ಸದಸ್ಯರು.
ಮೀಸಲಾತಿ ಒದಗಿಸುವ ಮುನ್ನ ಮತ್ತು ಮೀಸಲಾತಿ ಒದಗಿಸಿದ ನಂತರದ ಅವಧಿಗಳಲ್ಲಿ TAPCMS, PLD ಮತ್ತು DCC ಬ್ಯಾಂಕುಗಳಿಗೆ ಚುನಾಯಿತರಾಗಿರುವ ಸದಸ್ಯರು.
ಇವೇ ಅಲ್ಲದೆ, ಆಯೋಗವು ಸೂಕ್ತ ಎಂದು ಕಂಡುಬರುವ ಮತ್ತು ಸರಕಾರ ಪರಿಶೀಲನಾಂಶಗಳಲ್ಲಿ ಗೊತ್ತುಪಡಿಸಿರುವ ಸಂಸ್ಥೆಗಳಿಂದ ದತ್ತಾಂಶಗಳನ್ನು ಪಡೆಯಬೇಕಾಗಿದೆ.
ಹೀಗೆ ಸಂಗ್ರಹಿಸಿದ ದತ್ತಾಂಶಗಳನ್ನು, ರೂಪಿಸಿರುವ ಮಾನದಂಡ(criteria)ಗಳೂಡನೆ ತುಲನಾತ್ಮಕ ಅಧ್ಯಯನ ಮಾಡಬೇಕು. ಅಧ್ಯಯನದ ನಂತರ ಪಡೆಯುವ ಅಂಕಗಳನ್ನು ಆಧಾರವಾಗಿಟ್ಟುಕೊಂಡು ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಕೆಲಸವಾಗಬೇಕು. ಹಾಗೆ ಹಿಂದುಳಿದ ವರ್ಗಗಳನ್ನು ಗುರುತಿಸುವಾಗ ಮುಖ್ಯ ಜಾತಿಗಳಿಂದ ಉಪಜಾತಿಗಳನ್ನು ಬೇರ್ಪಡಿಸಬಾರದು ಮತ್ತು ಅವುಗಳನ್ನು ಪ್ರವರ್ಗಗಳಾಗಿ (ಅತಿ ಹೆಚ್ಚು ಹಿಂದುಳಿದ ಮತ್ತು ಹಿಂದುಳಿದ) ವರ್ಗೀಕರಿಸುವ ಬಗ್ಗೆ ಆಯೋಗ ಸೂಕ್ತ ನಿರ್ಧಾರಕ್ಕೆ ಬಂದು, ಜಾತಿಗಳ ಜನಸಂಖ್ಯಾನುಸಾರ ಮೀಸಲಾತಿ ಕೋಟಾ ನಿಗದಿಪಡಿಸುವುದು. ಅತಿಹೆಚ್ಚು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೋಟಾ ನಿಗದಿ ಪಡಿಸುವಾಗ ಡಿಛಿಜಿಜಠಿ ಜಛಿನ್ನು ಅಗತ್ಯವಾಗಿ ಕೊಡಬೇಕು.
ಆಯೋಗದ ಕಾರ್ಯಕ್ಷಮತೆಯನ್ನು ಒರೆಗೆ ಹಚ್ಚುವ ಮತ್ತೊಂದು ಕೆಲಸ ವೆಂದರೆ - ಉಚ್ಚ ನ್ಯಾಯಾಲಯ, ರಾಜ್ಯ ಚುನಾವಣಾ ಆಯೋಗ / ರಾಜ್ಯ ಸರಕಾರ ಮತ್ತು ಇತರರು-ಈ ಪ್ರಕರಣದಲ್ಲಿ ಅಂಕಿಅಂಶಗಳ ಸಮೇತ ವಿಚಾರಣೆ ನಡೆಸಿ, ಪಾರಂಪರಿಕವಾಗಿ ಅಧಿಕ ರಾಜಕೀಯ ಪ್ರಾತಿನಿಧ್ಯವನ್ನು ಪಡೆದುಕೊಂಡು, ಪ್ರಾಬಲ್ಯಗಳಿಸಿರುವ ಕೆಲ ಜಾತಿಗಳನ್ನು ಚಾಲ್ತಿಯಲ್ಲಿರುವ ರಾಜಕೀಯ ಮೀಸಲಾತಿ ಪಟ್ಟಿಯಿಂದ ಹೊರಗಿಡುವಂತೆ ಸೂಚಿಸಿರುವ ಬಗ್ಗೆ ಆಯೋಗ, ಆ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯದ ಅಂಕಿಅಂಶಗಳನ್ನು ವಿಶ್ಲೇಷಣಾತ್ಮಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿದೆ. ಇದು ಕಾರ್ಯದಕ್ಷತೆಯಿಂದ ಕೂಡಿದ ಸೂಕ್ಷ್ಮಕೆಲಸ. ಇದಕ್ಕೆಲ್ಲ ಆಯೋಗ ಸಾಕಷ್ಟು ಶ್ರಮ ವ್ಯಯಿಸಬೇಕಾಗಿದೆ.
ಈ ಪರಿ ಕಾರ್ಯಬಾಹುಳ್ಯ ಇದ್ದಾಗ್ಯೂ, ಸರಕಾರ ವಿಧಿಸಿರುವ ವಾಯಿದೆಯೊಳಗೆ ವರದಿ ಸಿದ್ಧಪಡಿಸಲು ಸಾಧ್ಯವೇ ಎಂಬ ವಿಷಯವನ್ನು ಆಯೋಗವೇ ನಿರ್ಧರಿಸಬೇಕು. ಸಮರ್ಪಕವಾದ ಕಾರ್ಯ ವಿಧಾನಗಳನ್ನು ಅನುಸರಿಸದೆ ಅವಸರದಲ್ಲಿ ವರದಿ ತಯಾರಿಸುವುದು ಹಿಂದುಳಿದ ವರ್ಗಗಳಿಗೆ ಎಸಗುವ ಘೋರ ಅನ್ಯಾಯ ಅಷ್ಟೇ ಅಲ್ಲ, ಪ್ರಶ್ನಾರ್ಹ ಕೂಡಾ. ನಿಜ ಅರ್ಥದಲ್ಲಿ ‘ರಾಜಕೀಯವಾಗಿ ಹಿಂದುಳಿದ ವರ್ಗ’ಗಳನ್ನು ಗುರುತಿಸುವ ಕೆಲಸವನ್ನು ಮುಕ್ತವಾಗಿ ಆಯೋಗ ಪೂರ್ಣಗೊಳಿಸಿದಲ್ಲಿ ಆಯೋಗದ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವುದು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.