--

ನಮ್ಮನ್ನು ಬಹಿಷ್ಕರಿಸಲಾಗುತ್ತಿದೆ: ಗುಂಪಿನಿಂದ ಹತ್ಯೆಯಾಗಿದ್ದ ಕೇರಳದ ಆದಿವಾಸಿ ಯುವಕನ ತಾಯಿಯ ಅಳಲು

ನಾಲ್ಕು ವರ್ಷಗಳ ಹಿಂದೆ, 2018,ಫೆ.22ರಂದು ದಿನಸಿ ಅಂಗಡಿಯಿಂದ ಅಕ್ಕಿಯನ್ನು ಕದ್ದ ಆರೋಪದಲ್ಲಿ ಗುಂಪೊಂದರಿಂದ ಥಳಿಸಿ ಹತ್ಯೆಗೈಯಲ್ಪಟ್ಟಿದ್ದ ಕೇರಳದ ಅಟ್ಟಪ್ಪಾಡಿಯ ಆದಿವಾಸಿ ಯುವಕ ಮಧು (30)ವಿನ ತಾಯಿ ಮಲ್ಲಿ ಮತ್ತು ಸೋದರಿ ಸರಸು ಮಗನ ಸಾವಿಗೆ ನ್ಯಾಯ ಒದಗಿಸಲು ಇನ್ನೂ ಪರದಾಡುತ್ತಿದ್ದಾರೆ. ಸರಕಾರಿ ವಕೀಲರೂ ಪ್ರತಿವಾದಿಗಳ ಪರ ವಕೀಲರೊಂದಿಗೆ ಶಾಮೀಲಾಗಿದ್ದಾರೆ ಎಂದು ಶಂಕಿಸಿರುವ ಈ ನತದೃಷ್ಟ ಮಹಿಳೆಯರು ಪ್ರಕರಣದಲ್ಲಿ ಸಾರ್ವಜನಿಕ ಅಭಿಯೋಜಕರನ್ನು ಬದಲಿಸುವಂತೆ ಕೋರಿ ಕೇರಳ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದು, ಅದು ಸದ್ಯಕ್ಕೆ ಪ್ರಕರಣದ ವಿಚಾರಣೆಯನ್ನು ತಡೆಹಿಡಿದಿದೆ. ಈ ನಡುವೆ ಗ್ರಾಮಸ್ಥರೂ ತಮ್ಮ ಕುಟುಂಬವನ್ನು ಬಹಿಷ್ಕರಿಸಿದ್ದಾರೆ. ಆರಂಭದಲ್ಲಿ ತಮಗೆ ಸಹಾಯ ಮಾಡಿದ್ದ ಕೆಲವರೂ ಈಗ ತಮ್ಮಾಂದಿಗೆ ಮಾತನಾಡುವುದಿಲ್ಲ ಎಂದು ಮಧುವಿನ ತಾಯಿ ಮತ್ತು ಸೋದರಿ ಅಳಲು ತೋಡಿಕೊಂಡಿದ್ದಾರೆ.

ಮಧುವಿನ ಸಾವು ತೀವ್ರ ಆಂತರಿಕ ಗಾಯಗಳಿಂದ ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯು ತಿಳಿಸಿದೆ. ಶರೀರದ ಮೇಲೆ ಮತ್ತು ತಲೆಯ ಹಿಂಭಾಗದಲ್ಲಿ ಗಾಯಗಳಾಗಿದ್ದವಲ್ಲದೆ ಪಕ್ಕೆಲುಬುಗಳೂ ಮುರಿದಿದ್ದವು. ಇವೆಲ್ಲವನ್ನೂ ಪರಿಗಣಿಸಿದರೆ ಸಾಕಷ್ಟು ಸಾಕ್ಷಾಧಾರಗಳಿರುವುದರಿಂದ ಮಧುವಿಗೆ ಕನಿಷ್ಠ ನ್ಯಾಯಾಲಯದಲ್ಲಾದರೂ ನ್ಯಾಯ ಸಿಗುತ್ತದೆ ಎಂದು ಯಾರಾದರೂ ಭಾವಿಸಿದ್ದರೆ ಅದರಲ್ಲಿ ತಪ್ಪೇನಿಲ್ಲ. ಆದರೆ ಆ ಭಾವನೆ ಈಗ ಹಳಿತಪ್ಪುತ್ತಿದೆ. ವಿಚಾರಣೆ ಆರಂಭಗೊಳ್ಳುವ ಮೊದಲೇ ಇಬ್ಬರು ಸರಕಾರಿ ಅಭಿಯೋಜಕರು ಪ್ರಕರಣದಿಂದ ಹಿಂದೆ ಸರಿದಿದ್ದು, ಸಾಕ್ಷಿಗಳೂ ತಿರುಗಿಬಿದ್ದಿದ್ದಾರೆ. ಹೀಗಾಗಿ ಅಗ್ನಿಪರೀಕ್ಷೆಯ ಅಂತ್ಯವು ಮಧುವಿನ ಕುಟುಂಬಕ್ಕೆ ಇನ್ನೂ ದೂರದ ಕನಸಾಗಿಯೇ ಉಳಿದಿದೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಲ್ಲಿ ಮತ್ತು ಸರಸು, ಈ ಪ್ರಕರಣವು ನ್ಯಾಯಾಲಯದಲ್ಲಿ ಎಳೆಯಲ್ಪಡುತ್ತಿರುವ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ವಿಶೇಷ ತನಿಖಾ ತಂಡವು ಮೇ 2018ರಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದು, 16 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಅವರ ವಿರುದ್ಧ ಕೊಲೆ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಆರೋಪಗಳನ್ನು ಹೊರಿಸಲಾಗಿತ್ತು.

ಕೇರಳ ಉಚ್ಚ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿರುವ ರಾಜೇಂದ್ರನ್ ಅವರು ಫೆ.16ರಂದು ಪ್ರಕರಣದಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಕಗೊಂಡಿದ್ದು, ಕೊನೆಗೂ ಎಪ್ರಿಲ್‌ನಲ್ಲಿ ಮನ್ನಾರಕಾಡ್ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಗೊಂಡಿದೆ. ಆದರೆ ಇಬ್ಬರು ಸಾಕ್ಷಿಗಳು ತಿರುಗಿಬಿದ್ದಿದ್ದಾರೆ. ಆರೋಪಿಗಳು ರಾಜಕೀಯ ಪಕ್ಷಗಳ ಬೆಂಬಲ ಹೊಂದಿದ್ದಾರೆ ಎಂದು ಮಧುವಿನ ಕುಟುಂಬ ಆರೋಪಿಸಿದೆ. ವಿಚಾರಣೆಯಲ್ಲಿ ಅಸಾಧಾರಣ ವಿಳಂಬಗಳು ಮತ್ತು ಅಡೆತಡೆಗಳು ಈ ಆರೋಪಕ್ಕೆ ಪುಷ್ಟಿ ನೀಡಿವೆ.

‘‘ಆರಂಭದಲ್ಲಿ ರಾಜೇಂದ್ರನ್ ನಮ್ಮಂದಿಗೆ ತುಂಬ ಸಹಕರಿಸಿದ್ದರು. ಆದರೆ ವಿಚಾರಣೆ ಅರಂಭಗೊಂಡಾಗ ಕೆಲವು ಪ್ರಶ್ನೆಗಳನ್ನೆತ್ತುವಾಗ ಪ್ರತಿವಾದಿ ಪರ ವಕೀಲರು ಅವರ ಮೇಲೆ ಪ್ರಭಾವ ಬೀರುತ್ತಿದ್ದುದನ್ನು ನಾವು ಗಮನಿಸಿದ್ದೆವು. ಇಬ್ಬರು ಸಾಕ್ಷಿಗಳು ತಿರುಗಿಬಿದ್ದಾಗ ರಾಜೇಂದ್ರನ್ ಅವರನ್ನು ಸಾಕಷ್ಟು ಪ್ರಶ್ನಿಸಿರಲಿಲ್ಲ. ಇಲ್ಲಿ ನಾವೇ ಆರೋಪಿಗಳಾಗಿದ್ದೇವೆ ಎಂಬ ಭಾವನೆ ನಮ್ಮಲ್ಲಿ ಮೂಡಿತ್ತು. ಪ್ರಕರಣವು ಇದೇ ರೀತಿ ಮುಂದುವರಿದರೆ ತಾವೇ ಗೆಲ್ಲುತ್ತೇವೆ ಎಂದು ಕೆಲವು ಪ್ರತಿವಾದಿ ಪರ ವಕೀಲರು ಮಾತನಾಡುತ್ತಿದ್ದನ್ನು ನಾನು ಕೇಳಿದ್ದೆ. ಇದು ನಮ್ಮ ಮನಸ್ಸಿನಲ್ಲಿ ಶಂಕೆಗಳನ್ನು ಹುಟ್ಟುಹಾಕಿತ್ತು ಮತ್ತು ವಿಚಾರಣೆಯನ್ನು ತಡೆಯುವಂತೆ ಕೋರಿ ನಾವು ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದೆವು’’ ಎಂದು ಸರಸು ತಿಳಿಸಿದ್ದಾರೆ.

ವಿಚಾರಣೆ ಆರಂಭಗೊಂಡಾಗ ಮೊದಮೊದಲು ಪ್ರಕರಣ ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿತ್ತು. ಆದರೆ ಕ್ರಮೇಣ ರಾಜೇಂದ್ರನ್ ಅವರ ನಿಲುವು ಬದಲಾಗತೊಡಗಿತ್ತು. ಇದೇ ಕಾರಣದಿಂದ ಅವರನ್ನು ಬದಲಿಸುವಂತೆ ಉಚ್ಚ ನ್ಯಾಯಾಲಯವನ್ನು ಕೋರಿದ್ದೇವೆ ಎಂದು ಮಲ್ಲಿ ತಿಳಿಸಿದ್ದಾರೆ. ಮಧುವಿನ ಹತ್ಯೆಯಲ್ಲಿ ಒಳಸಂಚನ್ನೂ ಅವರು ಆರೋಪಿಸಿದರು.

ಮಧುವಿನ ಹತ್ಯೆ ನಡೆದಿದ್ದ ಮುಕ್ಕಾಲಿ ಪಟ್ಟಣಕ್ಕೆ ತಾನೆಂದೂ ಹೋಗುವುದಿಲ್ಲ ಎಂದು ಹೇಳಿದ ಮಲ್ಲಿ, ‘‘ಘಟನೆಯ ಬಳಿಕ ನಮ್ಮ ಕುಟುಂಬವು ಬಹಳಷ್ಟು ಬಹಿಷ್ಕಾರವನ್ನು ಅನುಭವಿಸಿದೆ. ನಮಗೆ ಕೋಟ್ಯಂತರ ರೂ. ಸಿಕ್ಕಿವೆ ಎಂಬ ವದಂತಿಗಳನ್ನು ಹರಡಲಾಗಿತ್ತು. ಹೀಗಾಗಿ ಜನರು ನಮಗೆ ನೆರವಾಗುವುದನ್ನು ನಿಲ್ಲಿಸಿದ್ದರು. ಸಾಕ್ಷಿಗಳು ಸೇರಿದಂತೆ ಅವರಲ್ಲಿ ಹೆಚ್ಚಿನವರು ನಮ್ಮಿಂದಿಗೆ ಒಂದೇ ವಾಹನದಲ್ಲಿ ಪ್ರಯಾಣಿಸಲು ಹೆದರುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮುಸುಕು ಧರಿಸಿದ್ದ ಇಬ್ಬರು ವ್ಯಕ್ತಿಗಳು ದೊಣ್ಣೆಗಳೊಂದಿಗೆ ನಮ್ಮ ಮನೆಗೆ ನುಗ್ಗಿದ್ದರು. ನಾವು ತಕ್ಷಣ ಮನೆಯಿಂದ ಹೊರಗೋಡಿ ಜೀವವನ್ನು ಉಳಿಸಿಕೊಂಡಿದ್ದೆವು’’ ಎಂದರು. ಈ ಘಟನೆಯಲ್ಲಿಯೂ ಆರೋಪಿಗಳ ಕೈವಾಡವನ್ನು ಅವರು ಶಂಕಿಸಿದ್ದಾರೆ.

‘‘ನನ್ನ ಹೋರಾಟವನ್ನು ಮುಂದುವರಿಸುತ್ತೇನೆ. ನನ್ನ ಹೋರಾಟ ಕೇವಲ ನನಗೊಬ್ಬಳಿಗಾಗಿ ಅಲ್ಲ, ಅದು ಇತರರಿಗಾಗಿಯೂ ಇದೆ. ನಮ್ಮಂತೆ ಯಾರೂ ಕಷ್ಟವನ್ನು ಎದುರಿಸಬಾರದು’’ ಎಂದು ಮಲ್ಲಿ ಹೇಳಿದ್ದಾರೆ.

 ಕೃಪೆ: thenewsminute.com

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top