--

ಜಿಎಸ್‌ಟಿಗೆ ಐದು ವರ್ಷಗಳು; ಮುಂದುವರಿದ ಬಿಕ್ಕಟ್ಟು

ಹಲವಾರು ಇತರ ದೇಶಗಳಲ್ಲಿ ಜಿಎಸ್‌ಟಿ ಜಾರಿಯಲ್ಲಿದೆ, ಹೀಗಾಗಿ  ಭಾರತವೂ ಜಿಎಸ್‌ಟಿಯನ್ನು ಹೊಂದಿರಬೇಕು ಎಂಬ ವಾದವು  ತಪ್ಪಾಗಿದೆ. ಭಾರತದ ಆರ್ಥಿಕತೆಯು ಇತರ ದೊಡ್ಡ ಆರ್ಥಿಕತೆಗಳಿಗಿಂತ ಭಿನ್ನವಾಗಿದೆ ಮತ್ತು ತನ್ನದೇ ಆದ ಸಮಸ್ಯೆಗಳನ್ನು ಹೊಂದಿದೆ. ಪ್ರಸಕ್ತ ಜಿಎಸ್‌ಟಿಯ ಭಾಗಶಃ ರೂಪವು ಈ ಸಮಸ್ಯೆಗಳನ್ನು ಬಗೆಹರಿಸುವ ಬದಲು ಅವುಗಳನ್ನು ಉಲ್ಬಣಿಸುತ್ತಿದೆ. ನಾವು ಗಡಿಯಾರವನ್ನು ಹಿಂದಕ್ಕೆ ತಿರುಗಿಸುವಂತಿಲ್ಲ, ಆದರೆ ಐದು ವರ್ಷಗಳ ಕಾಲ ಜಿಎಸ್‌ಟಿ ಯನ್ನು ನಿರ್ವಹಿಸುವಾಗ ಅದರ ರಚನಾತ್ಮಕ ಪರಿಷ್ಕರಣೆಯು ಅಗತ್ಯವಾಗಿದೆ ಎನ್ನುವುದು ಸ್ಪಷ್ಟವಾಗಿದೆ.

ಭಾರತದಲ್ಲಿ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಯನ್ನು 2017,ಜು.1ರಂದು ಭಾರೀ ಅಬ್ಬರದೊಂದಿಗೆ ಜಾರಿಗೊಳಿಸಲಾಗಿತ್ತು. ಹಲವರು ಅದನ್ನು ಎರಡನೇ ‘ಟ್ರಾಯ್ಸ್ಟ್ ವಿಥ್ ಡೆಸ್ಟಿನಿ (ವಿಧಿಯ ಜೊತೆ ಪ್ರಯತ್ನ)’ಎಂದು ಬಣ್ಣಿಸಿದ್ದರು. ಅದು ವ್ಯವಹಾರ ನಿರ್ವಹಣೆಯನ್ನು ಸುಗಮಗೊಳಿಸುವುದರೊಂದಿಗೆ ಏಕ ಮಾರುಕಟ್ಟೆಯನ್ನು ಸೃಷ್ಟಿಸುವ ಮೂಲಕ ದೇಶವನ್ನು ಏಕೀಕರಿಸುವ ಸುಧಾರಣೆಯಾಗಿದೆ ಎಂದು ಹೇಳಲಾಗಿತ್ತು.

ಜಿಎಸ್‌ಟಿ ಜಾರಿಯಿಂದ ಜಿಡಿಪಿಯು ಶೇ.1ರಿಂದ ಶೇ.2ರಷ್ಟು ವೃದ್ಧಿಯಾಗಲಿದೆ, ಬಹುಹಂತಗಳ ತೆರಿಗೆಯನ್ನು ನಿವಾರಿಸುವ ಮೂಲಕ ಹಣದುಬ್ಬರವನ್ನು ತಗ್ಗಿಸಲಿದೆ ಮತ್ತು ‘ಕಪ್ಪು ಆರ್ಥಿಕತೆ’ಯು ನಿಯಂತ್ರಿಸಲ್ಪಡುತ್ತದೆ ಎಂದೆಲ್ಲ ಹೇಳಲಾಗಿತ್ತು. ಜಿಎಸ್‌ಟಿ ಅಂತಿಮ ಹಂತದ ತೆರಿಗೆಯಾಗಿರುವುದರಿಂದ ಬಳಕೆದಾರರಾಗಿರುವ ಹಿಂದು ಳಿದ ರಾಜ್ಯಗಳಿಗೆ ಲಾಭವಾಗಲಿದೆ ಎಂದು ಭಾವಿಸಲಾಗಿತ್ತು. ಜಿಎಸ್‌ಟಿ ಎಲ್ಲರಿಗೂ ಲಾಭದಾಯಕವಾಗಲಿದೆ ಎಂದು ಒತ್ತಿ ಹೇಳಲಾಗಿತ್ತು.

ಜಿಎಸ್‌ಟಿಗೆ ಐದು ವರ್ಷಗಳು ಪೂರ್ಣಗೊಂಡ ಈ ಸಂದರ್ಭ ದಲ್ಲಿ ಸರಕಾರಿ ಅಧಿಕಾರಿಗಳು ಅದರ ವಿವಿಧ ಲಾಭಗಳ ಮೌಲ್ಯಮಾಪನ ನಡೆಸಿದ್ದಾರೆ, ಆದರೆ ಕೆಲವು ಸಮಸ್ಯೆಗಳಿರುವುದನ್ನು ಒಪ್ಪಿಕೊಂಡಿದ್ದಾರೆ. 

ಅವುಗಳನ್ನು ಶೀಘ್ರವೇ ಬಗೆಹರಿಸಬಹುದು ಎಂದು ಅವರು ಭಾವಿಸಿದ್ದಾರೆ. ಜಿಎಸ್‌ಟಿಯಲ್ಲಿ ಮೂಲಭೂತ ನ್ಯೂನತೆಗಳಿರುವು ದರಿಂದ ಸ್ವಲ್ಪ ಮಟ್ಟಿಗಿನ ತಿದ್ದುಪಡಿಯಿಂದ ಲಾಭವಿಲ್ಲ,ಹೀಗಾಗಿ ಅದನ್ನು ಸಂಪೂರ್ಣವಾಗಿ ಪರಿಷ್ಕರಿಸಬೇಕು ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ಹಲವಾರು ರಾಜ್ಯಗಳು ಕೆಲವು ಸಮಯದಿಂದ ತಮ್ಮ ಕಳವಳಗಳನ್ನು ವ್ಯಕ್ತಪಡಿಸುತ್ತಿವೆ. ಇತ್ತೀಚಿನ ಜಿಎಸ್‌ಟಿ ಮಂಡಳಿ ಸಭೆಯಲ್ಲಿಯೂ ರಾಜ್ಯಗಳು ತಮ್ಮ ಕಳವಳಗಳನ್ನು ಪ್ರಸ್ತಾಪಿಸಿದ್ದವು.

ಜಿಎಸ್‌ಟಿಯನ್ನು ಜಾರಿಗೊಳಿಸುವ ಮುನ್ನ ರಾಜ್ಯಗಳು ಅದನ್ನು ಒಪ್ಪಿಕೊಳ್ಳಲು ಹಿಂಜರಿದಿದ್ದವು. ರಾಜ್ಯಗಳನ್ನು ಸಮಾಧಾನಿಸಲು ಅವುಗಳ ಪ್ರಮುಖ ಆದಾಯ ಮೂಲಗಳಾಗಿರುವ ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರಿಸಲಾಗಿತ್ತು. ಜಿಎಸ್‌ಟಿಯಿಂದಾಗಿ ರಾಜ್ಯಗಳಿಗೆ ಆಗುವ ಆದಾಯ ನಷ್ಟವನ್ನು ತುಂಬಿಕೊಡುವುದಾಗಿ ಕೇಂದ್ರವು ಭರವಸೆ ನೀಡಿತ್ತು. ಮೂರನೆಯದಾಗಿ ಜಿಎಸ್‌ಟಿಗೆ ಸಂಬಂಧಿಸಿದ ವಿಷಯ ಗಳನ್ನು ನಿರ್ಧರಿಸುವ ಜಿಎಸ್‌ಟಿ ಮಂಡಳಿಯಲ್ಲಿ ಕೇಂದ್ರದ ಜೊತೆ ರಾಜ್ಯಗಳಿಗೂ ಪ್ರಾತಿನಿಧ್ಯವನ್ನು ಕಲ್ಪಿಸಲಾಗಿತ್ತು. ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಒಮ್ಮತದ ಕೊರತೆಯ ಸಂದರ್ಭಗಳಲ್ಲಿ ಮತದಾನಕ್ಕೆ ಅವಕಾಶವಿದ್ದು,ಕೇಂದ್ರವು ಮೂರನೇ ಒಂದರಷ್ಟು ಮತ್ತು ರಾಜ್ಯಗಳು ಒಟ್ಟಾಗಿ ಮೂರನೇ ಎರಡರಷ್ಟು ಮತಗಳನ್ನು ಹೊಂದಿವೆ.

ಜಿಎಸ್‌ಟಿ ಸಭೆಯಲ್ಲಿ ಯಾವುದೇ ನಿರ್ಣಯವನ್ನು ಅಂಗೀಕರಿಸಲು ಶೇ.75ರಷ್ಟು ಮತಗಳ ಅಗತ್ಯವಿರುವುದರಿಂದ ಕೇಂದ್ರ ಸರಕಾರವು ವೀಟೊ ಅಧಿಕಾರವನ್ನು ಹೊಂದಿದೆ. ಅಲ್ಲದೆ ಅದು ತನ್ನ ಪರವಾಗಿ ಮತ ಚಲಾಯಿಸುವಂತೆ ಸಣ್ಣ ರಾಜ್ಯಗಳ ಮೇಲೆ ಒತ್ತಡ ಹೇರಬ ಹುದಾಗಿದೆ ಮತ್ತು ಕೇಂದ್ರದಲ್ಲಿಯ ಹಾಲಿ ಸರಕಾರವು ಹೆಚ್ಚಿನ ರಾಜ್ಯಗಳಲ್ಲಿ ತನ್ನದೇ ಪಕ್ಷದ ಸರಕಾರಗಳನ್ನು ಹೊಂದಿರುವುದರಿಂದ ಅದು ತನ್ನ ಅಜೆಂಡಾಕ್ಕೆ ಹೆಚ್ಚಿನ ಒತ್ತು ನೀಡಲು ಸಾಧ್ಯವಿದೆ. ಹೀಗಾಗಿ ಒಕ್ಕೂಟ ವ್ಯವಸ್ಥೆಯನ್ನು ತಾಂತ್ರಿಕವಾಗಿ ಕಾಯ್ದುಕೊಳ್ಳಲಾಗಿದೆ ಯಾದರೂ ವಾಸ್ತವದಲ್ಲಿ ಅದನ್ನು ದುರ್ಬಲಗೊಳಿಸಲಾಗಿದೆ. ಜಿಎಸ್‌ಟಿ ಮಂಡಳಿಯ ಆದೇಶಗಳಿಗೆ ಬದ್ಧತೆಯು ಕಡ್ಡಾಯವಲ್ಲ ಎಂಬ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪು ಒಕ್ಕೂಟ ವ್ಯವಸ್ಥೆಯನ್ನು  ಬಲಗೊಳಿಸಬಹುದು.

ಇನ್‌ಪುಟ್ ಕ್ರೆಡಿಟ್‌ಗೆ ಅವಕಾಶ, ಇ-ವೇ ಬಿಲ್‌ಗಳು ಮತ್ತು ಜಿಎಸ್‌ಟಿ ಜಾಲ ತೆರಿಗೆ ಪಾಲನೆಯನ್ನು ಹಾಗೂ ತೆರಿಗೆ ಸಂಗ್ರಹವನ್ನು ಹೆಚ್ಚಿಸಲು ನೆರವಾಗಬೇಕಿದ್ದವು. ಆರಂಭದ ವರ್ಷಗಳಲ್ಲಿ ಮಾಸಿಕ ತೆರಿಗೆ ಸಂಗ್ರಹಗಳು ಒಂದು ಲ.ಕೋ.ರೂ.ಗಿಂತ ಕಡಿಮೆಯೇ ಇದ್ದವು. ಆದರೆ ಈಗ ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ ಎಂಟು ತಿಂಗಳುಗಳಿಂದ ಮಾಸಿಕ ತೆರಿಗೆ ಸಂಗ್ರಹವು 1.3 ಲ.ಕೋ.ರೂ.ಗಿಂತ ಹೆಚ್ಚೇ ಇದೆ ಮತ್ತು 2002 ಎಪ್ರಿಲ್‌ನಲ್ಲಿ 1,64,540 ಕೋ.ರೂ.ಗಳ ದಾಖಲೆಯ ತೆರಿಗೆ ಸಂಗ್ರಹವಾಗಿತ್ತು.

ಈಗಲೂ ಆರ್ಥಿಕತೆಯು 2019ರಲ್ಲಿಯ ಕೋವಿಡ್ ಪೂರ್ವ ಸ್ಥಿತಿಯಲ್ಲಿದೆಯಾದರೂ ತೆರಿಗೆ ಸಂಗ್ರಹದಲ್ಲಿ ಏರಿಕೆಯು ಜಿಎಸ್‌ಟಿ ಯಶಸ್ಸನ್ನು ಪ್ರತಿಫಲಿಸುತ್ತಿದೆಯೇ? 
ಜಿಡಿಪಿ ಬೆಳವಣಿಗೆ ದರವು ಏರುವ ಬದಲು 2017-18ರ ನಾಲ್ಕನೇ ತ್ರೈಮಾಸಿಕದಲ್ಲಿದ್ದ ಶೇ.8ರಿಂದ 2019-20ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.3.1ಕ್ಕೆ ಕುಸಿದಿದೆ. ಹಾಗೆಂದು ಈ ಸಂಪೂರ್ಣ ಕುಸಿತಕ್ಕೆ ಜಿಎಸ್‌ಟಿ ಯನ್ನೇ ಹೊಣೆಯಾಗಿಸುವಂತಿಲ್ಲ, ಆದರೆ ಅದು ಜಿಎಸ್‌ಟಿಯ ಶೇ.31 ರಷ್ಟಿರುವ ಅಸಂಘಟಿತ ಕೃಷಿಯೇತರ ವಲಯಕ್ಕೆಹಾನಿಯನ್ನುಂಟು ಮಾಡುವ ಮೂಲಕ ತನ್ನ ಕೊಡುಗೆಯನ್ನು ನೀಡಿದೆ. ಜಿಎಸ್‌ಟಿ ಗಿಂತ ಎಂಟು ತಿಂಗಳು ಮೊದಲು ಜಾರಿಗೊಳಿಸಲಾಗಿದ್ದ ನೋಟು ನಿಷೇಧ ಕ್ರಮದಿಂದ ಈ ಕ್ಷೇತ್ರಕ್ಕೆ ಮೊದಲ ಹೊಡೆತ ಬಿದ್ದಿತ್ತು.

ಜಿಎಸ್‌ಟಿಯು ಅಸಂಘಟಿತ ಕ್ಷೇತ್ರಕ್ಕೆ ವಿನಾಯಿತಿ ನೀಡಿತ್ತು, ಆದಾಗ್ಯೂ ಅದಕ್ಕೆ ಹಾನಿಯನ್ನುಂಟು ಮಾಡಿದೆ. ಅದು ಇನ್‌ಪುಟ್ ಕ್ರೆಡಿಟ್‌ನ್ನು ಪಡೆಯುವುದಿಲ್ಲ ಅಥವಾ ನೀಡುವುದೂ ಇಲ್ಲ, ಹೀಗಾಗಿ ಸಂಘಟಿತ ಕ್ಷೇತ್ರಕ್ಕೆ ಹೋಲಿಸಿದರೆ ಅದರ ವೆಚ್ಚ ಮತ್ತು ಮಾರಾಟ ಬೆಲೆಗಳಲ್ಲಿ ಏರಿಕೆಯುಂಟಾಗಿದೆ ಮತ್ತು ಬೇಡಿಕೆಯು ಅಸಂಘಟಿತ ಕ್ಷೇತ್ರದಿಂದ ಸಂಘಟಿತ ಕ್ಷೇತ್ರಕ್ಕೆ ತಿರುಗಿದೆ. ಪರಿಣಾಮವಾಗಿ ಅಸಮಾನತೆಗಳು ಹೆಚ್ಚಾಗಿವೆ,ಬೇಡಿಕೆಯು ಕಡಿಮೆಯಾಗಿದೆ ಮತ್ತು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ.

ಶೇ.95ರಷ್ಟು ಜಿಎಸ್‌ಟಿ ಸಂಘಟಿತ ಕ್ಷೇತ್ರದಿಂದ ಸಂಗ್ರಹವಾ ಗುತ್ತಿದೆ. ಹೀಗಾಗಿ ಅಸಂಘಟಿತ ಕ್ಷೇತ್ರವನ್ನು ಬಲಿಗೊಟ್ಟು ಈ ಕ್ಷೇತ್ರವು ಬೆಳೆದಿದೆ ಮತ್ತು ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆಯಾಗಿದೆ.
ಜಿಎಸ್‌ಟಿ ಸಂಗ್ರಹದಲ್ಲಿಯ ಭಾಗಶಃ ಏರಿಕೆಗೆ ಅನುಸರಣೆ ಕಾರಣವಾಗಿದ್ದರೆ ಅದು ಸಂಘಟಿತ ಕ್ಷೇತ್ರದಲ್ಲಿಯ ತೆರಿಗೆ ವಂಚನೆಯ ವ್ಯಾಪ್ತಿಯನ್ನೂ ಸೂಚಿಸುತ್ತದೆ. ಬಹುದರಗಳು ಮತ್ತು ಸಂಕೀರ್ಣ ನಿಯಮಗಳಿಂದಾಗಿ ಕಪ್ಪು ಆರ್ಥಿಕತೆಯನ್ನು ನಿಯಂತ್ರಿಸಲು ಜಿಎಸ್‌ಟಿಗೆ ಸಾಧ್ಯವಾಗಿಲ್ಲ.

ಅಧಿಕೃತ ಘೋಷಣೆಗಳಲ್ಲಿ ಸಂಕೀರ್ಣತೆಗಳು ಮತ್ತು ಸ್ಪಷ್ಟತೆಯ ಅಭಾವದಿಂದಾಗಿ ಉದ್ಯಮಿಗಳು ಮತ್ತು ಚಾರ್ಟರ್ಡ್ ಅಕೌಂಟಂಟ್ ಗಳು ಸಮಸ್ಯೆಗಳ ಬಗ್ಗೆ ದೂರಿಕೊಳ್ಳುತ್ತಿದ್ದಾರೆ. ಜಿಎಸ್‌ಟಿಯ ಭಾಗ ವಾಗಲು ಕಂಪ್ಯೂಟರೀಕರಣ ಅಗತ್ಯವಾಗಿರುವುದರಿಂದ ವಿಶೇಷವಾಗಿ ಅಸಂಘಟಿತ ಕ್ಷೇತ್ರಕ್ಕೆ ಅನುಸರಣಾ ವೆಚ್ಚಗಳು ಹೊರೆಯಾಗಿವೆ. ಪರಿಣಾಮಕಾರಿಯಾಗಿ ಅಸಂಘಟಿತ ಕ್ಷೇತ್ರವು ಅದನ್ನು ಜಿಎಸ್‌ಟಿ ಯಿಂದ ಹೊರಗಿಡಬೇಕೇ ಅಥವಾ ಜಿಎಸ್‌ಟಿ ವ್ಯಾಪ್ತಿಯಲ್ಲಿ ತರಬೇಕೇ ಎಂಬ ಸವಾಲನ್ನು ಎದುರಿಸುತ್ತಿದೆ.

ಉತ್ತಮ ಸ್ಥಿತಿಯಲ್ಲಿರುವ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಅಭಿವೃದ್ಧಿಗೊಂಡಿರುವ ರಾಜ್ಯಗಳು ಪ್ರಮಾಣಾನುಗುಣವಾಗಿ ದೊಡ್ಡ ಅಸಂಘಟಿತ ವಲಯವನ್ನು ಹೊಂದಿವೆ ಮತ್ತು ಈ ಕ್ಷೇತ್ರವು ಕ್ಷೀಣಿಸಿ ರುವುದರಿಂದ ಈ ರಾಜ್ಯಗಳು ಹೆಚ್ಚಿನ ಸಂಕಷ್ಟಗಳನ್ನು ಅನುಭವಿಸಿವೆ. ಹೀಗಾಗಿ ಬಳಕೆದಾರ ರಾಜ್ಯಗಳಿಗೆ ಹೆಚ್ಚು ಲಾಭ ವಾಗುತ್ತದೆ ಎಂದು ಪರಿಗಣಿಸಲಾಗಿತ್ತಾದರೂ ಅಂತರರಾಜ್ಯ ಅಸಮಾನತೆಗಳು ಹೆಚ್ಚಿವೆ.

ಜಿಎಸ್‌ಟಿಯ ಪರಿಷ್ಕರಣೆ ಅಗತ್ಯವಾಗಿದೆ ಮತ್ತು ಅದರ ಸುಧಾರಣೆಯ ದಿಕ್ಕು ಸ್ಪಷ್ಟವಾಗಿದೆ. ಜಿಎಸ್‌ಟಿ ಅಂತಿಮ ಮಾರಾಟದ ಹಂತದಲ್ಲಿಯ ತೆರಿಗೆಯಾಗಿದೆ. ಹೀಗಾಗಿ ಉತ್ಪಾದನೆ ಮತ್ತು ವಿತರಣೆಯ ಪ್ರತಿ ಹಂತದ ಬದಲು ಅಂತಿಮ ಮಾರಾಟದ ಹಂತದಲ್ಲಿ ಎಂಆರ್‌ಪಿಯ ಮೇಲೆ ಜಿಎಸ್‌ಟಿಯನ್ನೇಕೆ ವಿಧಿಸಬಾರದು? ಇದು ಸರಳತೆಯನ್ನು ತರುತ್ತದೆ, ಇನ್‌ಪುಟ್ ಕ್ರೆಡಿಟ್, ಇ-ವೇ ಬಿಲ್ ಗಳು, ರಿವರ್ಸ್ ಚಾರ್ಜ್, ನೂರಾರು ಫಾರ್ಮ್‌ಗಳನ್ನು ತುಂಬುವುದು, ಇನ್ವರ್ಟೆಡ್ ಡ್ಯೂಟಿ ಸ್ಟ್ರಕ್ಚರ್ ಇತ್ಯಾದಿ ಗಳಿಂದಾಗಿ ಉದ್ಭವಿಸುವ ಸಮಸ್ಯೆಗಳನ್ನು ನಿವಾರಿಸುತ್ತದೆ.

ಪ್ರಸ್ತುತ ರಚನಾತ್ಮಕವಾಗಿ ದೋಷಪೂರ್ಣವಾಗಿರುವ ಜಿಎಸ್‌ಟಿಯ ಪ್ರತಿಪಾದಕರು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್, ತುಂಬಬೇಕಾದ ಹಲವಾರು ಫಾರ್ಮ್‌ಗಳು ಮತ್ತು ಇ-ವೇ ಬಿಲ್‌ಗಳನ್ನು ತೆಗೆದು 
ಹಾಕಿದರೆ ಕಪ್ಪು ಆದಾಯ ಸೃಷ್ಟಿಯು ಹೆಚ್ಚುತ್ತದೆ ಎಂದು ವಾದಿಸುತ್ತಿ ದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಸರಳೀಕೃತ ವ್ಯವಸ್ಥೆಯು ಇನ್‌ಸ್ಪೆಕ್ಟರ್ ರಾಜ್ ಅನ್ನು ಕಡಿಮೆ ಮಾಡುತ್ತದೆ,ವಂಚನೆಯನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗಿಸುತ್ತದೆ ಮತ್ತು ತನ್ಮೂಲಕ ಕಪ್ಪು ಆದಾಯ ಸೃಷ್ಟಿಯು ಕಡಿಮೆಯಾಗುತ್ತದೆ. ಜಿಎಸ್‌ಟಿಯ ಶೇ.95ರಷ್ಟು ಪಾಲು ಶೇ.5ರಷ್ಟು ಘಟಕಗಳಿಂದ ಸಂಗ್ರಹವಾಗು ವುದರಿಂದ ಕಪ್ಪು ಆದಾಯ ಸೃಷ್ಟಿಯ ಮೇಲೆ ನಿಗಾಯಿರಿಸುವುದು ಮತ್ತು ನಿಯಂತ್ರಿಸುವುದು ಸುಲಭವಾಗುತ್ತದೆ.

ಹಲವಾರು ಇತರ ದೇಶಗಳಲ್ಲಿ ಜಿಎಸ್‌ಟಿ ಜಾರಿಯಲ್ಲಿದೆ, ಹೀಗಾಗಿ ಭಾರತವೂ ಜಿಎಸ್‌ಟಿಯನ್ನು ಹೊಂದಿರಬೇಕು ಎಂಬ ವಾದವು ತಪ್ಪಾಗಿದೆ. ಭಾರತದ ಆರ್ಥಿಕತೆಯು ಇತರ ದೊಡ್ಡ ಆರ್ಥಿಕತೆಗಳಿ ಗಿಂತ ಭಿನ್ನವಾಗಿದೆ ಮತ್ತು ತನ್ನದೇ ಆದ ಸಮಸ್ಯೆಗಳನ್ನು ಹೊಂದಿದೆ. ಪ್ರಸಕ್ತ ಜಿಎಸ್‌ಟಿಯ ಭಾಗಶಃ ರೂಪವು ಈ ಸಮಸ್ಯೆಗಳನ್ನು ಬಗೆಹರಿಸುವ ಬದಲು ಅವುಗಳನ್ನು ಉಲ್ಬಣಿಸುತ್ತಿದೆ. ನಾವು ಗಡಿಯಾರವನ್ನು ಹಿಂದಕ್ಕೆ ತಿರುಗಿಸುವಂತಿಲ್ಲ,ಆದರೆ ಐದು ವರ್ಷ ಗಳ ಕಾಲ ಜಿಎಸ್‌ಟಿಯನ್ನು ನಿರ್ವಹಿಸುವಾಗ ಅದರ ರಚನಾತ್ಮಕ ಪರಿಷ್ಕರಣೆಯು ಅಗತ್ಯವಾಗಿದೆ ಎನ್ನುವುದು ಸ್ಪಷ್ಟವಾಗಿದೆ.

ಕೃಪೆ: thewire.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top