-

ದೇಶ ವಿಭಜನೆಗೆ ನೈಜ ಕಾರಣವೇನು?

-

ವಾಸ್ತವವಾಗಿ ದೇಶ ವಿಭಜನೆಗೆ ಕಾರಣ ಇಲ್ಲಿ ತಾಂಡವವಾಡುತ್ತಿರುವ ಸಾಮಾಜಿಕ ಅನ್ಯಾಯ. ಈ ಕುರಿತು ‘ಮುಂಗಾರು’ ಪತ್ರಿಕೆಯ ಸ್ಥಾಪಕರೂ ಸಂಪಾದಕರೂ ಆಗಿದ್ದ ವಡ್ಡರ್ಸೆ ರಘುರಾಮಶೆಟ್ಟರು ದಿನಾಂಕ 5.3.1989ರಂದು ಪತ್ರಿಕೆಗೆ ಬರೆದಿರುವ ಸಂಪಾದಕೀಯವೇ ಸ್ಪಷ್ಟಪಡಿಸುತ್ತದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ರಾಜ್ಯ ಸರಕಾರ ಆ. 14ರಂದು ಪ್ರಕಟಿಸಿರುವ ಜಾಹೀರಾತಿನಲ್ಲಿ ನೆಹರೂ ಭಾವಚಿತ್ರಕ್ಕೆ ಕೊಕ್ ಕೊಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ‘‘ಜಾಹೀರಾತಿನಲ್ಲಿ ನೆಹರೂ ಅವರ ಭಾವಚಿತ್ರವೂ ಇದೆ’’ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಇದೇ ದಿನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು ‘‘ನೆಹರೂ ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿಯೇ ಜಾಹೀರಾತಿನಲ್ಲಿ ಕೈ ಬಿಡಲಾಗಿದೆ’’ ಎಂದು ನಿಜವನ್ನೇ ಹೇಳಿದ್ದಾರೆ. ಯಾಕೆಂದರೆ ನೆಹರೂ ಅವರು ಗಾಂಧೀಜಿಯ ಮಾತು ಕೇಳದೇ ದೇಶ ವಿಭಜನಗೆ ಕಾರಣವಾದರು ಅದಕ್ಕಾಗಿ ಕೈ ಬಿಡಲಾಗಿದೆ ಎಂದೂ ಸಮರ್ಥಿಸಿಕೊಂಡಿದ್ದಾರೆ.

ಹಾಗಾದರೆ ನಾವು ಯಾರ ಮಾತನ್ನು ನಂಬಬೇಕು? ಮುಖ್ಯಮಂತ್ರಿಯವರ ಮಾತನ್ನೋ ಅಥವಾ ಬಿಜೆಪಿ ಕಾರ್ಯದರ್ಶಿಯವರ ಮಾತನ್ನೋ? ಆದರೆ ಸರಕಾರದ ಜಾಹೀರಾತಿನಲ್ಲಿ ನೆಹರೂ ಅವರ ಭಾವಚಿತ್ರ ಮಾತ್ರ ಇಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದ್ದರಿಂದ ಬೊಮ್ಮಾಯಿ ಅವರದು ಜಾಣ ಸಮರ್ಥನೆಯಾಗಿದೆ. ಇದು ಅವರ ಘನತೆಗೆ ತಕ್ಕುದಲ್ಲ.

ಇನ್ನು ಎರಡನೆಯದಾಗಿ ಎನ್. ರವಿ ಕುಮಾರ್ ಎತ್ತಿರುವ ಐತಿಹಾಸಿಕ ಪ್ರಶ್ನೆ ಎಂದರೆ ‘‘ನೆಹರೂ ಅವರು ಗಾಂಧೀಜೀಯ ಮಾತು ಕೇಳದೆ ದೇಶ ವಿಭಜನೆಗೆ ಕಾರಣರಾದರು’’ ಎಂಬುದು. ಆದರೆ ಇದು ಶುದ್ಧಾಂಗವಾಗಿ ಸುಳ್ಳು. ‘ನವಭಾರತದ ಶಿಲ್ಪಿ’ ಎಂದು ಖ್ಯಾತನಾಮರಾಗಿರುವ ದೇಶದ ಪ್ರಥಮ ಪ್ರಧಾನಿ ನೆಹರೂ ಅವರನ್ನು ಇತಿಹಾಸದ ಪುಟಗಳಿಂದ ಅಳಿಸಿ ಹಾಕಿದರೇನು? ಜನಮನದಲ್ಲಿರುವ ಅವರ ಮೂರ್ತಿಯನ್ನು ಅಳಿಸಿ ಹಾಕಲು ಸಾಧ್ಯವೆ? ಇದೆಲ್ಲ ರಾಜಕೀಯದಲ್ಲಿ ಸಾಮಾನ್ಯ. ಆದರೂ ದೇಶ ವಿಭಜನೆಗೆ ಕಾರಣ ಬೇರೆಯೇ ಇದೆ. ವಾಸ್ತವವಾಗಿ ದೇಶ ವಿಭಜನೆಗೆ ಕಾರಣ ಇಲ್ಲಿ ತಾಂಡವವಾಡುತ್ತಿರುವ ಸಾಮಾಜಿಕ ಅನ್ಯಾಯ. ಈ ಕುರಿತು ‘ಮುಂಗಾರು’ ಪತ್ರಿಕೆಯ ಸ್ಥಾಪಕರೂ ಸಂಪಾದಕರೂ ಆಗಿದ್ದ ವಡ್ಡರ್ಸೆ ರಘುರಾಮಶೆಟ್ಟರು ದಿನಾಂಕ 5.3.1989ರಂದು ಪತ್ರಿಕೆಗೆ ಬರೆದಿರುವ ಸಂಪಾದಕೀಯವೇ ಸ್ಪಷ್ಟಪಡಿಸುತ್ತದೆ. ಅದರ ಪೂರ್ಣಪಾಠ ಹೀಗಿದೆ:

ವಾಸ್ತವವನ್ನು ಅಂಗೀಕರಿಸಲು ನಿರಾಕರಿಸುತ್ತಿರುವ ಭಾರತೀಯ ಮನಸ್ಸು ಮೊದಲಿನಿಂದಲೂ ಈ ದೇಶಕ್ಕೆ ಅಪಾರ ಹಾನಿ ಮಾಡಿದೆ. ಸ್ವಾತಂತ್ರ್ಯ ಕಾಲದಲ್ಲಿ ಈ ದೇಶದ ಒಡಕಿಗೆ ಕಾರಣವಾದುದು ಈ ಭಾರತೀಯ ಮನಸ್ಸಿನ ದ್ವಂದ್ವ; ಪಾಕಿಸ್ತಾನದ ರಚನೆಗೆ ಕಾರಣವಾದುದು ಭಾರತೀಯರ ಇದೇ ಮನೋಧರ್ಮ. ದೇಶದ ಇತ್ತೀಚಿನ ಇತಿಹಾಸವನ್ನು ನಾವು ತೆರೆದ ಮನಸ್ಸಿನಿಂದ ಓದಿದರೆ ನಮಗಿದು ಅರ್ಥವಾಗುತ್ತದೆ.

1930ರ ದಶಕದಲ್ಲಿ ವಿಶೇಷ ಜಿಜ್ಞಾಸೆಯ ವಿಷಯವಾಗಿ ಎದ್ದು ಬಂದ ಕೋಮು ಪ್ರಾತಿನಿಧ್ಯದ ವಿಚಾರಕ್ಕೆ ಭಾರತೀಯರು ತೋರಿಸಿದ ಅಸಹನೆಯೇ ಪಾಕಿಸ್ತಾನದ ಕಲ್ಪನೆಗೆ ಒಂದು ಪ್ರೇರಕ ಶಕ್ತಿಯಾಯಿತು. ಆಗಿನ ಅವಿಭಜಿತ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 25ರಷ್ಟಿತ್ತು. ಆದರೆ ಆಡಳಿತ ಯಂತ್ರದಲ್ಲಿ ಮತ್ತು ಸಾರ್ವಜನಿಕ ಜೀವನದಲ್ಲಿ ಮುಸ್ಲಿಮರಿಗೆ ಶೇಖಡಾ 5ರಷ್ಟೂ ಪ್ರಾತಿನಿಧ್ಯವಿರಲಿಲ್ಲ. ಮುಹಮ್ಮದ್ ಅಲಿ ಜಿನ್ನಾ ರವರು 1931ರಲ್ಲಿ ಈ ಪ್ರಶ್ನೆಯನ್ನೆತ್ತಿ ದೇಶದ ಆಡಳಿತದ ಎಲ್ಲ ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಅವರ ಸಂಖ್ಯೆಗನುಸರಿಸಿ ಶೇ. 25ರಷ್ಟು ಪ್ರಾತಿನಿಧ್ಯ ಸಿಗಬೇಕೆಂಬ ಬೇಡಿಕೆಯನ್ನು ಮುಂದಿಟ್ಟರು. ಮಹಾತ್ಮಾ ಗಾಂಧಿಯವರು ಸಹಿತ ಭಾರತದ ಎಲ್ಲ ಮುಖಂಡರೂ ಇದನ್ನು ತೀವ್ರವಾಗಿ ವಿರೋಧಿಸಿದರು.

ಜನಸಂಖ್ಯೆಯ ಆಧಾರದಲ್ಲಿ ಮುಸ್ಲಿಮರಿಗೆ ಆಡಳಿತದಲ್ಲಿ ಪ್ರಾತಿನಿಧ್ಯ ಬೇಕೆಂದು ಕೇಳುವ ಬದಲು ‘‘ನೀವೇ ಸ್ವತಂತ್ರ ಭಾರತದ ಪ್ರಧಾನಿಯಾಗಿ ನಿಮಗೆ ಬೇಕಾದವರನ್ನು ಸೇರಿಸಿಕೊಂಡು ಮಂತ್ರಿಮಂಡಲ ರಚಿಸಿ’’ ಎಂದು ಮಹಾತ್ಮಾ ಗಾಂಧಿ ಜಿನ್ನಾರನ್ನು ಆಗ ವಿನಂತಿಸಿಕೊಂಡಿದ್ದರು.

 ಮಹಾತ್ಮಾ ಗಾಂಧಿಯವರ ಈ ಕೊಡುಗೆಗೆ ಮುಹಮ್ಮದ್ ಅಲಿ ಜಿನ್ನಾ ಕೊಟ್ಟ ಉತ್ತರ ಬಹಳ ಮಾರ್ಮಿಕವಾದುದು. ನೀವು ಹೇಳಿದಂತೆ ನಾನೇ ಸ್ವತಂತ್ರ ಭಾರತದ ಪ್ರಧಾನಿಯಾಗಿ ಹೆಚ್ಚು ಮುಸ್ಲಿಮರನ್ನೇ ಸೇರಿಸಿಕೊಂಡು ಸಂಪುಟ ರಚಿಸಿದರೂ ಆಡಳಿತ ಯಂತ್ರದಲ್ಲಿ ಮುಸ್ಲಿಮರಿಗೆ ಯೋಗ್ಯ ಪ್ರಾತಿನಿಧ್ಯ ಕೊಡಲು ಸಾಧ್ಯವಾಗದು. ಆಡಳಿತ ಯಂತ್ರ ಹಿಂದೂ ಮೇಲ್ಜಾತಿಯ ಜನರ ಸ್ವಾಮ್ಯದಲ್ಲೇ ಉಳಿಯುತ್ತದೆ. ಆಡಳಿತದಲ್ಲಿ ಮುಸ್ಲಿಮರಿಗೆ ಅವರ ಸಂಖ್ಯೆಯ ಆಧಾರದಲ್ಲಿ ಪ್ರಾತಿನಿಧ್ಯದ ಮೀಸಲಾತಿಯೊಂದೇ ಈ ದೇಶದಲ್ಲಿ ಮುಸ್ಲಿಮರಿಗೆ ಸಾಮಾಜಿಕ ನ್ಯಾಯ ಒದಗಿಸಲು ಇರುವ ಮಾರ್ಗ ಎಂದಿದ್ದರು ಜಿನ್ನಾ.

ಜಿನ್ನಾರವರು ಅಂದು ಮುಂದಿಟ್ಟಿದ್ದ ಮುಸ್ಲಿಮರಿಗೆ ಮೀಸಲಾತಿಯ ಬೇಡಿಕೆಯ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಹಿಂದೂಗಳು ಒಪ್ಪಿಕೊಂಡಿದ್ದರೆ ಪಾಕಿಸ್ತಾನದ ನಿರ್ಮಾಣದ ಬೇಡಿಕೆ ಮುಂದೆ ಬರುತ್ತಿರಲಿಲ್ಲ. 1935ರಲ್ಲಿ ಬ್ರಿಟಿಷ್ ಸರಕಾರ ನೌಕರಿಯಲ್ಲಿ ಮುಸ್ಲಿಮರಿಗೆ ಶೇಕಡಾ 25ರಷ್ಟು ಸ್ಥಾನಗಳನ್ನು ಮೀಸಲಿರಿಸುವ ಆಜ್ಞೆ ಹೊರಡಿಸಿದಾಗ ಭಾರತದ ಹಿಂದುಗಳು ತೋರಿಸಿದ ಅಸಹನೆಯೇ ಪಾಕಿಸ್ತಾನದ ಬೇಡಿಕೆಯನ್ನು ಹುಟ್ಟುಹಾಕಿತೆಂಬುದು ಐತಿಹಾಸಿಕವಾದ ಸತ್ಯ.

ಭಾರತ ಹಲವು ಜಾತಿ-ಜನಾಂಗಗಳ ನೆಲೆ. ಆ ಪ್ರತಿಯೊಂದು ಜಾತಿ- ಮತಗಳಿಗೂ ಅವರದೇ ಆದ ಆಶೋತ್ತರಗಳಿರುವುದು ಸಹಜ. ಪರಧರ್ಮವನ್ನು ಪರವಿಚಾರವನ್ನು ಸಹನೆ ಯಿಂದ ಕಾಣುವುದೇ ‘ಕಸವರ’ (ಚಿನ್ನ) ಎಂದ ನಮ್ಮ ಕವಿರಾಜಮಾರ್ಗಕಾರ. ಈ ‘ರಾಜಧರ್ಮ’ ಇವತ್ತಿಗೂ ಆದರ್ಶವಾಗಿದೆ. ಆದರೆ ಇತ್ತೀಚೆಗೆ ಮಾರ್ಗಕಾರನ ಈ ಬಂಗಾರದಂಥ ಮಾತನ್ನು ಮರೆತು ಒಂದು ಜಾತಿ, ಒಂದು ಧರ್ಮ, ಒಂದು ಭಾಷೆ, ಒಂದು ರಾಷ್ಟ್ರ ಮುಂತಾದ ಮಾತುಗಳನ್ನು ಮುಂದೆ ನೂಕಿ ಬಹುತ್ವ ಬಾರತದ ಭಾವೈಕ್ಯತೆಗೆ ಭಂಗ ಬರುವಂತಾಗುತ್ತಿದೆ. ಈ ನೆಲೆಯಲ್ಲಿ ಪಂಪಭಾರತದ ಒಂದು ಮಾತು ನೆನಪಾಗುತ್ತದೆ: ಭೀಷ್ಮರಿಗೆ ‘ವೀರಪಟ್ಟ’ವನ್ನು ಕಟ್ಟಿದ ಸಂದರ್ಭದಲ್ಲಿ ಕರ್ಣ ಸಿಡಿದೆದ್ದು ‘‘ನನ್ನಂಥ ಯುವಕನಿಗೆ ವೀರ ಪಟ್ಟವನ್ನು ಕಟ್ಟುವುದನ್ನು ಬಿಟ್ಟು ಈ ಮುಪ್ಪಿನ ಮುದುಕನಿಗೆ ವೀರಪಟ್ಟವನ್ನು ಕಟ್ಟಿ ಪಗೆವಾಡಿ(ವೈರಿ ಸಮೂಹ)ಯಲ್ಲಿ ನಗಿಸಿಕೊಂಡರೆ ಬಂದುದೇನು?’’ ಎನ್ನುತ್ತಾನೆ. ಇಡೀ ಸಭೆಯಲ್ಲಿ ಕರ್ಣನ ಪರ-ವಿರೋಧದ ದನಿಯೇಳುತ್ತದೆ. ಆಗ ಸ್ವತಃ ಭೀಷ್ಮರೇ ಎದ್ದುನಿಂತು ‘‘ಕರ್ಣ, ಸೂಳ್ ಪಡೆಯಲ್ ಅಪ್ಪುದು ಕಾಣ ಮಹಾರಣರಂಗದೊಳ್’’ ಎಂದು ಎಲ್ಲರನ್ನು ಸುಮ್ಮನಿರಿಸುತ್ತಾರೆ. ಇದು ರಾಜಕೀಯದಲ್ಲಿ ಸದಾ ಇದ್ದದ್ದೇ. ಸ್ವಾತಂತ್ರ್ಯಾನಂತರ ನೆಹರೂ ದೀರ್ಘಕಾಲ ಪ್ರಧಾನಿಯಾಗಿದ್ದರು. ಅವರ ಟೀಕಾಕಾರರು ‘‘ನೆಹರೂ ನಿವೃತ್ತರಾಗುವುದಿಲ್ಲ’’ ಎಂದದ್ದುಂಟು. ಆದರೆ ಅವರು ಅಧಿಕಾರದಲ್ಲಿದ್ದಾಗಲೇ ನಿಧನರಾದರು. ಸಾವು ಬಿಟ್ಟಿದ್ದು ಯಾರಿಗೆ? ನಂತರ ಅವರ ಮಗಳು ಇಂದಿರಾಗಾಂಧಿ ಅಧಿಕಾರಕ್ಕೆ ಬಂದು ದೀರ್ಘಾವಧಿ ಆಳಿದರು. ಆಗ ಅವರ ವಂದಿಮಾಗಧರು; ‘India is Indira, Indira is India’ಎಂದು ಹೊಗಳಿದರು.

ಆದರೆ ಅವರು ದುರಾದೃಷ್ಟವಶಾತ್ ಹಂತಕರ ಗುಂಡೇಟಿಗೆ ಪಕ್ಕಾದರು. ಕಾಲ ನಿಲ್ಲುವುದಿಲ್ಲ. ಕೋಟೆ ಕಟ್ಟಿ ಆಳಿದವರೆಲ್ಲ ಏನಾದರು? ಸದ್ಯ ಸಂಘಪರಿವಾರಿಗಳು ‘Modi is India, India is Modi’ಎಂಬ ಉಮೇದಿನಲ್ಲಿದ್ದಾರೆ. ಆದರೆ ಚಕ್ರಾರಪಂಕ್ತಿಯಂತೆ ಕಾಲ ಮುಂದೆ ಸರಿಯುತ್ತದೆ. ಮುಂದೆ ಇನ್ನಾರಿಗಾದರೂ ಸೂಳ್‌ಪಡೆಯಲ್ ಅಪ್ಪುದು ಈ ರಾಜಕೀಯದ ಮಹಾಯುದ್ಧರಂಗದಲ್ಲಿ. ಆದರೆ ಪ್ರಜೆಗಳಾದ ನಾವು ಪರ ವಿಚಾರವನ್ನು ಪರಧರ್ಮವನ್ನು ಸೈರಣೆಯಿಂದ ಕಂಡು, ಸತ್ಯ, ಧರ್ಮ, ಸಾಮಾಜಿಕ ನ್ಯಾಯ, ನೈತಿಕತೆ ಮತ್ತು ಪ್ರಾಮಾಣಿಕತೆಯಿಂದ ಬಾಳು ನಡೆಸಿದರೆ ಸಾಕು. ಆಗ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top