-

ರೈಲುಗಳ ವೇಗಕ್ಕೆ ಹೊಂದಿಕೊಳ್ಳುವ ಹಳಿಗಳು ನಿರ್ಮಾಣವಾಗಲಿ

-

ಕೇಂದ್ರ ಸರಕಾರದ ಭಾರತೀಯ ರೈಲ್ವೆಯು ಪದೇಪದೇ ತಪ್ಪಾದ ಮಾಹಿತಿಯನ್ನು ಅದೂ ದೃಶ್ಯ ಹಾಗೂ ಮುದ್ರಣ ಮಾಧ್ಯಮದ ಮೂಲಕ ಸಾಮಾನ್ಯರಿಗೆ ನೀಡುವುದು ಸರಿಯಲ್ಲ.

ಭಾರತದಲ್ಲಿ ಪ್ಯಾಸೆಂಜರ್, ಎಕ್ಸ್‌ಪ್ರೆಸ್, ಸೂಪರ್ ಫಾಸ್ಟ್, ಹಮ್‌ಸಫರ್, ದೀನ್ ದಯಾಳ್, ರಾಜಧಾನಿ, ತುರಂತ್, ವಂದೇ ಭಾರತ್, ಗತಿಮಾನ್ ಹೆಸರಿನ ರೈಲುಗಳಿಗೆ ಇರುವ ವೇಗವು ಬೇರೆ ಬೇರೆಯಾಗಿದೆ ಎಂದು ಬಿಂಬಿಸಲಾಗಿದೆ. ಆದರೆ ಮೂಲತಃ ಭಾರತದಲ್ಲಿರುವ ಪ್ರಸಕ್ತ ‘ವಾಷರ್-ಲಾಕ್’ ರೈಲು ಹಳಿಗಳಲ್ಲಿ ಪ್ರತೀ ಗಂಟೆಗೆ 110 ಕಿ.ಮೀ.ಗಿಂತ ವೇಗವಾಗಿ ಹೋಗಲು ಸಾಧ್ಯವೇ ಇಲ್ಲ. ಆದರೂ ವಂದೇ ಭಾರತ್ ಗಂಟೆಗೆ 130 ಕಿ.ಮೀ. ಚಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬಿಂಬಿಸಲಾಗಿದೆ. ಇಡೀ ಭಾರತದ ಯಾವುದೇ ರೈಲು ಹಳಿಯಲ್ಲಿ ಗಂಟೆಗೆ 110 ಕಿ.ಮೀ.ಗಿಂತ ವೇಗವಾಗಿ ಚಲಿಸಲು ಆಗದೇ ಇರುವಾಗ; ಹಳೆಯ ಹಳಿಗಳ ಮೇಲೆ ಹೊಸ ಹೆಸರಿನ ರೈಲನ್ನು ಜಾಸ್ತಿ ವೇಗದಲ್ಲಿ ಓಡಿಸಲು ಸಾಧ್ಯವೇ ಇಲ್ಲ ಎಂಬ ಸತ್ಯವನ್ನು ಜನತೆಗೆ ತಿಳಿಸುವುದು ಒಳಿತಲ್ಲವೇ?

ಹಳಿ ಹಾಸುವಿನಲ್ಲಿ 2 ವಿಧಗಳಿವೆ. ‘ವಾಷರ್ ಲಾಕ್’ ಹಳಿ ಹಾಗೂ ‘ನಟ್-ಬೋಲ್ಟ್ ಟೈಟ್’ ಹಳಿ. ಭಾರತದಲ್ಲಿರುವ ಎಲ್ಲಾ ಹಳಿಗಳು ವಾಷರ್ ಲಾಕ್ ಹಳಿಗಳು. ಈ ಹಳಿಗಳು 90ಟನ್ ಭಾರವನ್ನು ಹೊರಬಲ್ಲವು. ರೈಲುಗಳು ಇಂತಹ ಹಳಿಗಳಲ್ಲಿ ವೇಗವಾಗಿ ಚಲಿಸುವಾಗ ಅದರ ಲಾಕ್ ಸಡಿಲವಾಗಿ ಕಳಚಿ ಬೀಳುತ್ತವೆ. ಇದೇ ಕಾರಣಕ್ಕಾಗಿ ಗ್ಯಾಂಗ್‌ಮನ್‌ಗಳನ್ನು ನೇಮಿಸಿದ್ದು, ಅವರು ಜಲ್ಲಿಕಲ್ಲುಗಳ ಮೇಲೆ ಬಿದ್ದ ವಾಷರ್‌ಗಳನ್ನು ಯಥಾಸ್ಥಾನದಲ್ಲಿರಿಸಿ, ಅದರ ಮೇಲೆ ಅಂಕುಡೊಂಕಾಗಿರುವ ಕಬ್ಬಿಣದ ಲಾಕ್ ಇಟ್ಟು ಸುತ್ತಿಗೆಯಿಂದ ಬಡಿದು ಸ್ವಸ್ಥಾನದಲ್ಲಿರು ವಂತೆ ನೋಡಿಕೊಳ್ಳುತ್ತಾರೆ. ಇವರು ಪ್ರತೀ ದಿನ ತಲಾ 16 ಕಿ.ಮೀ. ದೂರ ಹಳಿಗಳ ಮಧ್ಯೆ ಸುತ್ತಿಗೆ ಹಿಡಿದು ನಡೆದುಕೊಂಡು ಹೋಗುವುದನ್ನು ಗಮನಿಸಿರಬಹುದು.

ಗಟ್ಟಿಯಾದ ಮಣ್ಣಿನ ನೆಲದ ಮೇಲೆ ಜಲ್ಲಿ ಕಲ್ಲಿನ ತುಂಡುಗಳನ್ನು ಹಾಕಿ ಅದರ ಮೇಲೆ 8 ಬೋಲ್ಟ್ ಇರುವ ಕಾಂಕ್ರಿಟ್ ಸ್ಲೀಪರ್ ಗಳನ್ನು ಲಂಬವಾಗಿ ಇರಿಸಲಾಗುತ್ತದೆ. ಹಳಿಗಳನ್ನು ಸ್ಲೀಪರ್‌ಗಳ ಮೇಲಿಟ್ಟು ಅದರಲ್ಲಿರುವ ಬೋಲ್ಟ್‌ಗಳಿಗೆ 8 ನಟ್ಟುಗಳನ್ನು ಬಿಗಿಯಾಗಿ ಬೆಸೆಯುತ್ತಾರೆ. ಇಂತಹ ಹಳಿಗಳ ಮೇಲೆ ರೈಲು ಗಂಟೆಗೆ 450ರಿಂದ 600 ಕಿ.ಮೀ. ವೇಗವಾಗಿ ಚಲಿಸಬಲ್ಲದು. ಪಾಶ್ಚಾತ್ಯ ಹಾಗೂ ಮುಂದುವರಿದ ಎಲ್ಲಾ ದೇಶಗಳಲ್ಲಿ ‘ನಟ್-ಬೋಲ್ಟ್ ಟೈಟ್’ ಹಳಿಗಳಿರುವುದರಿಂದ ಆ ದೇಶಗಳಲ್ಲಿ ರೈಲು ತೀರಾ ವೇಗವಾಗಿ ಚಲಿಸುತ್ತದೆ.

ಚೀನಾದಲ್ಲಿ ಗಂಟೆಗೆ 460 ಕಿ.ಮೀ., ಜಪಾನ್‌ನಲ್ಲಿ 360 ಕಿ.ಮೀ., ಜರ್ಮನಿಯಲ್ಲಿ 300 ಕಿ.ಮೀ., ಫ್ರಾನ್ಸ್ 200 ಕಿ.ಮೀ., ಯುರೋಪ್ 198 ಕಿ.ಮೀ., ಇಂಗ್ಲೆಂಡ್ 140 ಕಿ.ಮೀ.ವೇಗದಲ್ಲಿ ರೈಲುಗಳು ಓಡುತ್ತಿವೆ. ಈ ಎಲ್ಲಾ ದೇಶಗಳಲ್ಲಿ ನಟ್-ಬೋಲ್ಟ್ ಟೈಟ್ ಹಳಿಗಳೇ ಇವೆ. ಭಾರತದಲ್ಲಿ ಈಗಿರುವ ರೈಲುಗಳಲ್ಲಿ ಗತಿಮಾನ್ ಎಕ್ಸ್‌ಪ್ರೆಸ್ ಗಂಟೆಗೆ 160 ಕಿ.ಮೀ.ವೇಗದಲ್ಲಿ ಹೋಗಬಹುದಂತೆ. ಆದರೆ ಭಾರತದ ಹಳಿಗಳಲ್ಲಿ ಗಂಟೆಗೆ 110 ಕಿ.ಮೀ.ಗಿಂತ ವೇಗವಾಗಿ ಹೋಗಲು ‘ಸಶಕ್ತವಾದ ಹಳಿ’ಗಳಿಲ್ಲ. ಉದಾಹರಣೆಗೆ ಉತ್ತರಪ್ರದೇಶದ ಝಾನ್ಸಿಯಿಂದ ದಿಲ್ಲಿಗೆ ಹೋಗುವ ಗತಿಮಾನ್ ಎಕ್ಸ್‌ಪ್ರೆಸ್(ರೈಲು ಸಂಖ್ಯೆ 12049) ಗಂಟೆ 3:05ಕ್ಕೆ ಹೊರಟು 7:30ಕ್ಕೆ ತಲುಪುತ್ತದೆ. ಕ್ರಮಿಸುವ ದೂರ ಜುಜುಬಿ 372 ಕಿ.ಮೀ. ಮಾತ್ರ. ಅದನ್ನು ಕ್ರಮಿಸಲು ಬರೋಬ್ಬರಿ 4ಗಂಟೆ 25ನಿಮಿಷ ತೆಗೆದುಕೊಳ್ಳುತ್ತದೆ. ಅಂದರೆ ವೇಗ ಗಂಟೆಗೆ 84.22 ಕಿ.ಮೀ. ಮಾತ್ರ. ಆದರೂ ಗತಿಮಾನ್ ಎಕ್ಸ್ ಪ್ರೆಸ್ ಪ್ರತೀ ಗಂಟೆಗೆ 160 ಕಿ.ಮೀ. ಎಂದು ತಪ್ಪಾಗಿ ಜನರನ್ನು ದಾರಿತಪ್ಪಿಸುವುದು ಯಾಕೆ?

 ನಮ್ಮೂರಿನ ಮತ್ಸ್ಯಗಂಧ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 12620) ಮಂಗಳೂರು ಸೆಂಟ್ರಲ್‌ನಿಂದ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ (895ಕಿ.ಮೀ.) ತಲುಪಲು 18 ಗಂಟೆ ತೆಗೆದುಕೊಳ್ಳುತ್ತದೆ. ಅಂದರೆ ವೇಗ ಗಂಟೆಗೆ 49.72ಮಾತ್ರ!.

2008ರಲ್ಲಿ ಈ ಮೇಲಿನ ಎಲ್ಲಾ ವಿಷಯಗಳನ್ನು ಕೇಂದ್ರ ಸರಕಾರದ ಭಾರತೀಯ ರೈಲ್ವೆಗೆ ಮುಂಬೈ ರೈಲ್ವೆ ಯಾತ್ರಿ ಸಂಘವು ತಿಳಿಸಿ, ವೇಗವನ್ನು ಈ ಕೆಳಗಿನ ರೀತಿಯಲ್ಲಿ ಹೆಚ್ಚಿಸಲು ಕೋರಲಾಗಿತ್ತು. ಎಪ್ರಿಲ್10ರಿಂದ ಜೂನ್ 10ರ ಬೇಸಿಗೆ ರಜಾಕಾಲ, ದಸರಾ, ದೀಪಾವಳಿ ಹಾಗೂ ಡಿಸೆಂಬರ್ 22ರಿಂದ ಜನವರಿ 2ರ ಮಧ್ಯದಲ್ಲಿ ಕೊಂಕಣ ರಹದಾರಿಯಲ್ಲಿ ಕರ್ನಾಟಕದದಲ್ಲಿ ಕಡಿಮೆ ನಿಲುಗಡೆ ಕೊಟ್ಟು ಕೇವಲ 9 ಗಂಟೆಯೊಳಗೆ ಮುಂಬೈಯ ವಸಾಯ್ ತಲುಪಿಸಲು ವಿನಂತಿಸಲಾಗಿತ್ತು. ಡಿಸೇಲ್ ತುಂಬಿಸಲು ರೈಲು ಮಂಗಳೂರು ಜಂಕ್ಷನ್, ಮಡಗಾಂವ್, ರತ್ನಗಿರಿ, ಪನ್ವೇಲ್‌ನಲ್ಲಿ ನಿಲ್ಲಿಸಲೇಬೇಕಿತ್ತು. ಆದುದರಿಂದ ಮೇಲೆ ತಿಳಿಸಿದ ರಜಾಕಾಲದಲ್ಲಿ ಮಂಗಳೂರಿನಿಂದ ಹೊರಟು ಕೆಲವು ಕಡೆಗಳಲ್ಲಿ ಮಾತ್ರ ನಿಲುಗಡೆ ನೀಡಿ ಆನಂತರ ಡಿಸೇಲ್ ತುಂಬುವ ನಿಲ್ದಾಣಗಳಲ್ಲಿ ನಿಲ್ಲಿಸಿ, ಆನಂತರ ಮುಂಬೈನ ವಸಾಯ್ ರೋಡ್, ಮೀರಾರೋಡ್, ಬೊರಿವಿಲಿ, ಅಂಧೇರಿ ಮತ್ತು ಬಾಂದ್ರಾ ಟರ್ಮಿನಸ್ ತನಕ ಹೋಗಲು ವಿನಂತಿಸಿದ್ದೆವು. ಪ್ರತೀ ರೈಲು ಒಂದು ನಿಲ್ದಾಣದಲ್ಲಿ ನಿಲ್ಲಲು 8ರಿಂದ 10 ಸಾವಿರ ರೂ. ಖರ್ಚಾಗುತ್ತದೆ ಎಂದು ರೈಲ್ವೆ ಇಲಾಖೆ ಮಾಧ್ಯಮಗಳಿಗೆ ತಿಳಿಸಿತ್ತು. ಆದುದರಿಂದ ಮಂಗಳೂರು ಮುಂಬೈ ಮಧ್ಯೆ ಕೇವಲ 8 ನಿಲ್ದಾಣಗಳಲ್ಲಿ ನಿಲುಗಡೆ ನೀಡಿದರೆ ದಿನವೊಂದಕ್ಕೆ ಲಕ್ಷಾಂತರ ರೂ. ಉಳಿಸಬಹುದು. ಉದಾಹರಣೆಗೆ ಮಹಾರಾಷ್ಟ್ರ ಕನ್ನಡಿಗರ ಮತ್ಸ್ಯಗಂಧ ರೈಲನ್ನೇ ತೆಗೆದುಕೊಂಡರೆ ಇದು ಕ್ರಮಿಸುವ 895 ಕಿ.ಮೀ.ನೊಳಗೆ ಇಪ್ಪತ್ತು ನಿಲುಗಡೆ ನೀಡಿದ್ದಾರೆ. ಪ್ರತೀ ನಿಲುಗಡೆಗೆ ರೂ. 10,000ರಂತೆ 2ಲಕ್ಷ ರೂ. ನಷ್ಟವಾಗುತ್ತಿದೆ. ಆದ್ದರಿಂದ ಕೊಂಕಣ ರೈಲನ್ನು ವಿದ್ಯುದೀಕರಣ ಮಾಡುವ ಬದಲು ಮಂಗಳೂರಿನಿಂದ 321ಕಿ.ಮೀ. ದೂರದ ಮಡ್ಗಾಂವ್ ನಿಲ್ದಾಣದ ತನಕ ರೈಲುಗಳು ವೇಗವಾಗಿ ಚಲಿಸುವ ಹಾಗೆ ನಟ್-ಬೋಲ್ಟ್ ಟೈಟ್ ರೀತಿಯ ಹಳಿಗಳನ್ನು ಹಾಕಲು ರೈಲು ಭವನಕ್ಕೆ ವಿನಂತಿಸಿದ್ದೆವು. ಅದನ್ನು ಹಾಕಿದ ನಂತರ ಗಂಟೆಗೆ 110 ಕಿ.ಮೀ. ವೇಗದಲ್ಲಿ ಬಂದರೆ ಕೇವಲ 3ಗಂಟೆಯೊಳಗೆ ಮಂಗಳೂರು ಮಡ್ಗಾಂವ್‌ನ ಮಧ್ಯದ ದೂರವನ್ನು ಕ್ರಮಿಸಬಹುದು. ಪ್ರಸಕ್ತ ಇದೇ ದೂರವನ್ನು ಕ್ರಮಿಸಲು ಮತ್ಸ್ಯಗಂಧ ಎಕ್ಸ್‌ಪ್ರೆಸ್ 6 ಗಂಟೆ ತೆಗೆದುಕೊಳ್ಳುತ್ತದೆ. ಇತ್ತೀಚೆಗೆ ‘ವಂದೇ ಭಾರತ್’ ರೈಲು ವೇಗದಲ್ಲಿ ಬುಲೆಟ್ ಟ್ರೈನ್‌ನ ದಾಖಲೆ ಮುರಿದಿದೆ ಎಂದು ಸೆಪ್ಟಂಬರ್ 10ರ ಮುದ್ರಣ ಮಾಧ್ಯಮದಲ್ಲಿ ವರದಿಯಾಗಿತ್ತು. ಅಹಮದಾಬಾದ್-ಮುಂಬೈ ನಡುವೆ 9.9.2022ರಂದು 52ಸೆಕೆಂಡ್‌ಗಳಲ್ಲಿ 100 ಕಿ.ಮೀ. ವೇಗ ಪಡೆದಿತ್ತು ಎನ್ನಲಾಗಿದೆ. ಇವು ಗಂಟೆಗೆ 160 ಕಿ.ಮೀ. ವೇಗದಲ್ಲಿ ಹೋಗಬಹುದಂತೆ. ಹಾಗಾದರೆ 895 ಕಿ.ಮೀ.ದೂರದ ಮುಂಬೈಯನ್ನು ಅದು 5.59 ಗಂಟೆಗಳೊಳಗೆ ತಲುಪಬೇಕು. ಆದರೆ ಹಳಿ ಬದಲಾಯಿಸದೆ ಇದು ಕನಸಿನ ಮಾತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top