-

ವಾಣಿಜ್ಯ ನಗರಿಯಲ್ಲಿ ಅರಳಿದ ಕಲೆ

-

ನಗರೀಕರಣಕ್ಕೂ, ಆಧುನಿಕತೆಗೂ ನಂಟು ಇದ್ದದ್ದೇ! ಅದಕ್ಕೆ ಪ್ರತಿಕ್ರಿಯೆ ಯಾಗಿ, ಪ್ರತಿಭಟನೆ ಯಾಗಿ, ಪೂರಕವಾಗಿ, ಪರ್ಯಾಯ ವಾಗಿ ಕೊನೆಗೆ ಸಾಮರಸ್ಯದ ರೂಪವಾಗಿ ಅನಾದಿಕಾಲದಿಂದಲೂ ಸಾಹಿತ್ಯ ಮತ್ತು ಕಲೆ ತನ್ನ ದಿಕ್ಕನ್ನು ಬದಲಾಯಿಸುತ್ತಾ ರೂಪಾಂತರಗೊಳ್ಳುತ್ತಲೇ ಬಂದಿದೆ. ಲಾಸ್ ಏಂಜಲೀಸ್‌ನ ಆರ್ಟ್ ಗ್ಯಾಲರಿಯ ಹೊರಗೆ ನಿಂತು ಹರಿದು ಬರುತ್ತಿರುವ ಕಾರುಗಳನ್ನು ನೋಡುವಾಗ ನನಗೆ ನೆನಪಾದದ್ದು ನವ್ಯ ಸಾಹಿತ್ಯದ ಪ್ರಾತಿನಿಧಿಕವೆನ್ನಬಹುದಾದ ಕಥೆಗಳು.

ಲಾಸ್ ಏಂಜಲೀಸ್‌ನ ಬ್ರೆಂಟ್ ವುಡ್ ಪ್ರದೇಶದಲ್ಲಿರುವ ಗೆಟ್ಟಿಆರ್ಟ್‌ಗ್ಯಾಲರಿಯೊಳಗೆ ಹೊಕ್ಕಾಗ ಅಲ್ಲಿ ತೆರೆದುಕೊಂಡದ್ದೇ ಇನ್ನೊಂದು ಲೋಕ. ಎಂಟನೇ ಶತಮಾನದಿಂದ ಹಿಡಿದು ನಗರಗಳ ಹುಟ್ಟಿಗೆ ಆಧುನಿಕತೆಗೆ ಕಾರಣವಾದ ಈಗಿನ ವರೆಗಿನ ಅನೇಕ ರೀತಿಯ ಗ್ರೀಕ್ ಶಿಲ್ಪಗಳು, ಪುನರುತ್ಥಾನ ಕಾಲದ ಯುರೋಪಿಯನ್ ಚಿತ್ರಕಲೆಗಳು, ರೇಖಾ ಚಿತ್ರಗಳು, ಹಸ್ತಪ್ರತಿಗಳು, ಮುದ್ರಣ ಯಂತ್ರದ ಆವಿಷ್ಕಾರದ ಪ್ರತೀಕವಾಗಿ ಹೊಸದಾಗಿ ಮುದ್ರಣಕ್ಕೆ ಒಳಗಾದ ಬೈಬಲ್ ಪ್ರತಿಗಳು, ಫೋಟೊಗ್ರಫಿಯ ಆರಂಭಕಾಲದಿಂದ ಇಲ್ಲಿಯವರೆಗೆ ಸಂಗ್ರಹಿಸಿದ ಜಗದ್ವಿಖ್ಯಾತ ಫೋಟೊಗಳು, ಆಲಂಕಾರಿಕ ಕಲಾರೂಪಗಳು.

ಕಳೆದು ಹೋದ ಕ್ಲಾಸಿಕ್ ಕಲಾಕೃತಿಗಳನ್ನು, ಪ್ರಾಚೀನ ಗ್ರಂಥಗಳನ್ನು ಮುದ್ರಿಸುವುದರ ಮೂಲಕ, ಅನುವಾದ ಮಾಡುವುದರ ಮೂಲಕ ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದ ಒಂದು ಕ್ರಾಂತಿಯ ಸ್ವರೂಪವೇ ಆ ಎರಡು ಮಹಡಿಗಳ ಬೃಹತ್ ಕೊಠಡಿಗಳಲ್ಲಿ ಚಲ್ಲವರಿದಿದ್ದವು. ಪ್ರದರ್ಶನಕ್ಕಿಟ್ಟ ಚಿತ್ರಗಳು ಮತ್ತು ಇತರ ಪ್ರತಿಕೃತಿಗಳು ಅಂದಿನ ದಿನಗಳ ನೆನಪಿನ ಘಮಲುನ್ನು ಕೋಣೆಗಳ ತುಂಬಾ ಪಸರಿಸಿದ್ದವು. ಕೋಣೆಯ ಹೊರಗೆ 22ನೇ ಶತಮಾನದ ಅತ್ಯಾಧುನಿಕತೆ ದೌಡಾಯಿಸುತ್ತಿತ್ತು.

ಎಲ್ಲಾ ಕೋಣೆಗಳಲ್ಲೂ ಸುಸಜ್ಜಿತ ಕಾವಲುಗಾರರು. ಫ್ಲ್ಯಾಷ್ ಬರುವ ಫೋಟೊಗಳನ್ನು ತೆಗೆಯುವ ಹಾಗಿಲ್ಲ. ಎಲ್ಲ ಕಡೆ ಶಾಂತಿಯಿಂದ ಸಾಗುವ ಪ್ರೇಕ್ಷಕರು. ನಮ್ಮ ಮುಂಬೈನ ಜಹಾಂಗೀರ್ ಆರ್ಟ್ ಗ್ಯಾಲರಿಯ ನೆನಪು ಮರುಕಳಿಸಿತು. ಇದು ಅದರ ಕಲ್ಪನೆಗೂ ಮೀರಿದಷ್ಟು ದೊಡ್ಡದಾಗಿತ್ತು (24 ಎಕರೆ ವಿಸ್ತೀರ್ಣ). ಚಿತ್ರಗಳನ್ನು ನೋಡಿ ಅವುಗಳ ವಿವರಣೆಗಳನ್ನು ಓದುವಷ್ಟರಲ್ಲಿ ಕಾಲುಗಳು ದಣಿದವು. ಕೇವಲ ಎರಡು ಮಹಡಿಯ ಕೋಣೆಗಳನ್ನು ನೋಡಲು ಎರಡು ಮೂರು ತಾಸು. ಹೀಗಾಗಿ ಶಿಲ್ಪಕಲೆಗೆ ಸಂಬಂಧಿಸಿದಂತಹ ಕಟ್ಟಡಕ್ಕೆ ಹೋಗಲು ಸಾಧ್ಯವಾಗಲೇ ಇಲ್ಲ. ಈ ಗ್ಯಾಲರಿಯದ್ದೇ ಆದ ವಿಶಿಷ್ಟ ಉದ್ಯಾನವೂ ಇದೆ. ಪೂರ್ತಿ ನೋಡಲು ಎರಡು ದಿನಗಳಾದರೂ ಬೇಕು. ಲಾಸ್‌ಏಂಜಲೀಸ್ ನ ‘ಯುನಿವರ್ಸಲ್ ಸ್ಟೂಡಿಯೋ’ ( ಡಿಸ್ನಿ ವರ್ಲ್ಡ್) ಇಲ್ಲ ‘ಗೆಟ್ಟಿ ಸೆಂಟರ್’ (ಆರ್ಟ್ ಗ್ಯಾಲರಿ ) ಇವುಗಳಲ್ಲಿ ಒಂದನ್ನು ನೋಡುವಷ್ಟು ಕಾಲಾವಕಾಶ ಮಾತ್ರ ನಮಗಿತ್ತು. ನಾವು ಗೆಟ್ಟಿಯನ್ನೇ ಆರಿಸಿಕೊಂಡೆವು. ಗ್ಯಾಲರಿಯ ಆವರಣ ಹೊಕ್ಕ ತಕ್ಷಣ ಕಣ್ಣಿಗೆ ಬಿದ್ದುದು ಅನೇಕ ಪ್ರಾಚೀನ ಗ್ರೀಕ್ ನಗ್ನ ಹಾಗೂ ಆಧುನಿಕ ಶಿಲ್ಪಗಳು.

ಪ್ರತಿಯೊಂದು ಕೋಣೆಗಳಲ್ಲೂ ಮಧ್ಯಕಾಲೀನ ಯುರೋಪಿನ ಪುನರುತ್ಥಾನ ಯುಗದ ಕಲಾವಿದರ ಅನೂಹ್ಯ ಚಿತ್ರಗಳು. ಮೈಕೆಲ್ ಎಂಜಲೊ, ವ್ಯಾನ್ ಗೊ, ರೆಂಬ್ರಾಂಟ್, ಇತ್ಯಾದಿ ಪ್ರಸಿದ್ಧ ಯುಗ ನಿರ್ಮಾಪಕ ಕಲಾವಿದರ ಚಿತ್ರಗಳು. ಬಹುತೇಕ ಕ್ರಿಸ್ತ ಹುಟ್ಟಿದ ದಿನದಿಂದ ಹಿಡಿದು, ಅವನ ದೀಕ್ಷೆ, ಅವನನ್ನು ಎಳೆದುಕೊಂಡು ಹೋಗುತ್ತಿರುವ, ಮುಳ್ಳಿನ ಕಿರೀಟವನ್ನು ತೊಡಿಸುತ್ತಿರುವ, ಕ್ರೂಸಿಫಿಕೇಷನ್, ಅವನ ಕಣ್ಣಿನಲ್ಲಿನ ಅಪಾರ ಕರುಣೆ, ಮೇರಿ ಮ್ಯಾಗ್ಡಲಿನ, ಅವಳ ಕೈಯಲ್ಲಿ ಮಗು, ರೋಮ್ ಸಾಮ್ರಾಜ್ಯದ ಕಾಲದಲ್ಲಿ ಅಲ್ಲಿನ ನಿರಂಕುಶ ಪ್ರಭುತ್ವದ ಅಡಿಯಲ್ಲಿ ಸಿಕ್ಕಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣು, ಕಣ್ಣೀರು ಗರೆಯುತ್ತ, ಎದೆಗೆ ಚೂರಿ ಹಾಕಿಕೊಂಡು ತನ್ನ ಪ್ರತಿಭಟನೆಯನ್ನು ದಾಖಲಿಸಿದ ಅಪೂರ್ವ ಭಾವಪೂರ್ಣ ಚಿತ್ರ. ಅದರ ಪರಿಣಾಮವಾಗಿ, ಹುಟ್ಟಿದ ಚಳವಳಿಯಿಂದ ತನ್ನ ಪ್ರಭುತ್ವವನ್ನು ಕಳೆದುಕೊಂಡ ಅನನ್ಯ ಕ್ಷಣಗಳು.

ನಮ್ಮ ಕಂಸನನ್ನು ಹೋಲುವ ರಾಜ ‘ಮಗು ತನ್ನನ್ನು ಕೊಲ್ಲುತ್ತದೆ’ ಎಂಬ ಭವಿಷ್ಯದ ವಾಣಿಯನ್ನು ಕೇಳಿ ಅವಳನ್ನು ಕೊಲ್ಲ ಹೊರಡುವನು. ಇಂತಹ ಅಪೂರ್ವ ಚಿತ್ರಗಳನ್ನು ಹೊಚ್ಚ ಹೊಸದಾಗಿ ಕಾಣುವಂತೆ ರಕ್ಷಿಸ ಲಾಗಿದೆ. ಇದು ಅವರ ಅಭಿರುಚಿ ಮತ್ತು ಅದನ್ನು ಶಿಸ್ತಿನಿಂದ ನಿರಂತರ ವಾಗಿ ಕಾಪಾಡಿಕೊಂಡು ಬರುವ ಅವರ ಆಸ್ಥೆಯನ್ನು ವ್ಯಕ್ತಪಡಿಸುತ್ತದೆ.

ಹೀಗೆ ಅನೇಕ ಕಾಲಮಾನಗಳಿಗೆ ಸೇರಿದ ಶಿಲ್ಪಕಲೆಗಳು, ಯುರೋಪಿಯನ್ ಆಲಂಕಾರಿಕ ಕಲೆಗಳು, ವಿಶೇಷ ವಿದ್ಯುತ್ ಬೆಳಕನ್ನು ಹೊಂದಿದ ಹಸ್ತಪ್ರತಿಗಳು,ಸುಭದ್ರ ಚೌಕಟ್ಟುಗಳುಳ್ಳ ಬೃಹತ್ ಗಾತ್ರದ ಫ್ರೆಂಚ್ ಆಲಂಕಾರಿಕ ಕಲೆಗಳು, ಹತ್ತೊಂಬತ್ತನೇ ಶತಮಾನದ ಚಿತ್ರಕಲೆ, ರೇಖಾಚಿತ್ರ ಮತ್ತು ಛಾಯಾಚಿತ್ರಕ್ಕೆ ಸಂಬಂಧಿಸಿದ ಪ್ರದರ್ಶನ ಗಳು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಎಂಬ ನಾಲ್ಕು ದಿಕ್ಕುಗಳಲ್ಲಿ ಹರಡಿಕೊಂಡಿವೆ. ಅನೇಕ ಕ್ಲಾಸಿಕ್ ಚಿತ್ರಕಲೆಯನ್ನು ಸಮಕಾಲೀನರು ಮರುಸೃಷ್ಟಿ ಮಾಡುವ ಸವಾಲುಗಳನ್ನೂ ಬೇಕಾದರೆ ಸ್ವೀಕರಿಸಬಹುದು. ಅದಕ್ಕಾಗಿ ಇಲ್ಲಿ ಕಲಾವಿದರಿಗೆ ಅವಕಾಶವಿದೆ.

ಜೆ ಪಾಲ್ ಗೆಟ್ಟಿ (1892-1976) ಎನ್ನುವ ಒಬ್ಬ ಶ್ರೀಮಂತ ಉದ್ಯಮ ಪರಂಪರೆಗೆ ಸೇರಿದ ಕಲಾರಾಧಕ. ಇಟಾಲಿಯನ್ ಪುನರುತ್ಥಾನ, ಡಚ್ ಮತ್ತು ಫ್ಲೆಮಿಷ್ ಬ್ರೊಕ್ ಕೃತಿಗಳಲ್ಲಿ ತೀವ್ರವಾದ ಆಸಕ್ತಿಯನ್ನು ಹೊಂದಿದ ಗೆಟ್ಟಿ ಆ ಪರಂಪರೆಯ ಪ್ರಖ್ಯಾತ ಕಲಾಕಾರರ ಮೂಲ ಕಲಾಕೃತಿಗಳನ್ನು ಸಂಗ್ರಹಿಸುವಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಶ್ರಮಿಸಿದ. ಇಟಲಿಯ ಕಲಾವಿದರುಗಳಾದ Masaccio TitianParmigianino Canaletto Lucas Cranach Nicholas Poussin - 1401-1428, -1488-1576, - 1503 -1540, -1697-1768, ಜರ್ಮನಿಯ 1472-1553, ಫ್ರೆಂಚ ಕಲಾವಿದರುಗಳಾದ( (ಬ್ರೋಕ್ ಶೈಲಿ) 1594-166, Fragonard 1732-1806, Manet 1832-183, Edgar Degas Renoir 1834-1883, 1841-1919, ಇಂಗ್ಲೆಂಡಿನ ರೊಮ್ಯಾಂಟಿಕ್ ಕಲಾವಿದ J.M.W. Turner 1775-1851, ಗ್ರೀಕ್ ಕಲಾವಿದ El Greco 1542-1614, ಡಚ್ ಕಲಾವಿದರುಗಳಾದ Vincent VanGogh 1853-1890, ರೆಂಬ್ರ್ಯಾಂಟ್ 1606-69 ಹೀಗೆ ಅವನು ಆಸ್ಥೆಯಿಂದ ಒಟ್ಟು ಮಾಡಿದ ಚಿತ್ರಗಳ ಹಾಗೂ ಚಿತ್ರಕಲಾಕಾರರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

(—J. Paul Getty, The Joys of Collecting, 1965) ಒಬ್ಬ ನಿಜವಾದ ಕಲಾಪ್ರೇಮಿಯು ಕಲಾಕೃತಿಗಳನ್ನು ಕೇವಲ ತನಗಾಗಿ ಮಾತ್ರ ಸಂಗ್ರಹಿಸುವುದಿಲ್ಲ. ತಾನು ಮಾತ್ರ ಅನುಭವಿಸಬೇಕು, ಸಂತೋಷಪಡಬೇಕು ಎಂಬ ಸ್ವಾರ್ಥಪರತೆಯಿಂದ, ಲಾಲಸೆಯಿಂದ ಅವನು ಚಿತ್ರಕಲೆಗಳನ್ನಾಗಲೀ, ಶಿಲ್ಪವನ್ನಾಗಲೀ, ಯಾವುದೇ ಪುರಾತನ ವಸ್ತುಗಳನ್ನಾಗಲೀ ಒಟ್ಟುಮಾಡುವುದಿಲ್ಲ. ಒಂದು ಕಲಾಕೃತಿಯ ಸೌಂದರ್ಯವನ್ನು ಮೆಚ್ಚುವುದರ ಜೊತೆಗೆ, ತನ್ನ ಸಂತೋಷವನ್ನು ಇತರರೊಡನೆ ಹಂಚಿಕೊಳ್ಳಲು ಕಾತರನಾಗಿರುತ್ತಾನೆ ಎಂಬ ಅವನ ಮಾತುಗಳಿಗೆ ಗೆಟ್ಟಿ ಗ್ಯಾಲರಿ ಒಂದು ಜೀವಂತ ಸಾಕ್ಷಿಯಾಗಿದೆ.

ನೂರಕ್ಕಿಂತಲೂ ಹೆಚ್ಚು ಮಹಾನ್ ಕಲಾಕೃತಿಗಳ ಸಮೀಕ್ಷೆಗಳು, ವಿವರಗಳು, ಬಣ್ಣ ಬಣ್ಣದ ರೋಚಕ ಚಿತ್ರಣಗಳು ಈ ಕಲಾಕೃತಿಗಳ ಐತಿಹಾಸಿಕ ಸಂಗತಿಗಳ ಕಡೆಗೆ ಗಮನ ಸೆಳೆಯುವುದಲ್ಲದೇ ಅವುಗಳ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮಹತ್ವವನ್ನೂ ಸಾರುತ್ತವೆ. ಪಾಶ್ಚಾತ್ಯ ಕಲೆಯ ಪುರಾತನ ಲೋಕಕ್ಕೆ ಇದೊಂದು ಅಭೂತಪೂರ್ವ ಯಾತ್ರೆ ಇದ್ದಂತೆ ಎಂದು ಕಲಾಪ್ರೇಮಿಗಳು ಬಣ್ಣಿಸುತ್ತಾರೆ.

ಮನುಷ್ಯ ಸಮಾಜವನ್ನು ಸುಸಂಸ್ಕೃತಗೊಳಿಸುವಲ್ಲಿ, ನಾಗರಿಕವನ್ನಾಗಿ ಮಾಡುವಲ್ಲಿ ಕಲೆಯ ಪ್ರಭಾವ ಅನನ್ಯವಾದದ್ದು ಎಂದು ನಂಬಿದವನು ಗೆಟ್ಟಿ. ಅವನ ಅಪೂರ್ವ ಕಲಾಕೃತಿಗಳ ಸಂಗ್ರಹಗಳೇ ಲಾಸ್ ಏಂಜಲೀಸ್‌ನ ಬ್ರೆಂಟ್ ವುಡ್‌ನಲ್ಲಿರುವ ‘ಗೆಟ್ಟಿ ಸೆಂಟರ್’ ಎಂಬ ಕಲಾಕೇಂದ್ರಕ್ಕೆ ನಾಂದಿ ಹಾಡಿದವು. ಇದು ಸಾರ್ವಜನಿಕರಿಗೆ ತೆರೆದದ್ದು 1997ರಲ್ಲಿ. ಪ್ರತೀ ವರ್ಷ 1.8 ಬಿಲಿಯ ಜನರು ಇಲ್ಲಿಗೆ ಭೇಟಿ ನೀಡುತ್ತಾರೆಂದು ವರದಿಯಾಗಿದೆ ಮತ್ತು ಮಾಲಿಬು ಎಂಬ ಕಣಿವೆ ಪ್ರದೇಶದಲ್ಲಿರುವ ‘ಗೆಟ್ಟಿ ವಿಲ್ಲಾ’ ಪ್ರಾಚೀನ ಗ್ರೀಕ್, ರೋಮ್ ಕಲೆಗಳನ್ನು ಅಭ್ಯಾಸ ಮಾಡುವ ಶಿಕ್ಷಣ ಸಂಸ್ಥೆ ಹಾಗೂ ಸಂಶೋಧನೆ ಕೇಂದ್ರವೂ ಆಗಿದೆ.

ಲಾಸ್ ಏಂಜಲೀಸ್‌ನ ಆರ್ಟ್ ಗ್ಯಾಲರಿಯಲ್ಲಿ ಲೇಖಕಿ ಗಿರಿಜಾ ಶಾಸ್ತ್ರಿ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top