-

ಸರ್ವಧರ್ಮ ಸಮನ್ವಯದ ಕಲಾಪ್ರದರ್ಶನ

-

ಮನುಷ್ಯ ಸದಾ ಸೌಂದರ್ಯ, ಸಾಮರಸ್ಯ ಹಾಗೂ ಸ್ವಯಂ ಅಭಿವ್ಯಕ್ತಿಗಾಗಿ ತುಯ್ದಿಡುತ್ತಲೇ ಇರುತ್ತಾನೆ. ಅವನು ಸ್ವತಃ ಒಂದು ನಿರ್ದಿಷ್ಟ ಕಲ್ಪನೆಯ ಧಾರಕನಾಗಬಹುದು. ಜೊತೆಗೆ, ಅವನು ಚಿತ್ರವೊಂದರ ಕಥಾವಸ್ತುವಿನಲ್ಲಿ ಆಲೋಚನೆಯನ್ನು ಗುಣಿಸಬಹುದು. ಚಿತ್ರಕಲೆಯಲ್ಲಿ ರೇಖೆ, ಆಕಾರ, ಬಣ್ಣಗಳ ಬೆಸುಗೆಯನ್ನು ಮೂರ್ತ ಅಥವಾ ಅಮೂರ್ತವಾಗಿ ಮೂಡಿಸುವುದರೊಂದಿಗೆ ಕಲಾವಿದನ ಕಲಾ ನೈಪುಣ್ಯ ಮಾರ್ದನಿಗೊಳ್ಳುತ್ತದೆ. ಒಂದು ರೀತಿಯಲ್ಲಿ ಚಿತ್ರವು ಮನದ ಭಾವನೆಗಳ ಮತ್ತು ಮನಸ್ಥಿತಿಯ ಪ್ರತಿಫಲನವಾಗಿದ್ದು ಒತ್ತಡ, ಸಮಯ, ವಿಸ್ತಾರತೆ, ಏಕಾಗ್ರತೆ, ಅನುಭವ, ಜ್ಞಾನ, ಆನಂದ, ಮಗ್ನತೆಯ ಸಾಕ್ಷಿಯಾಗಿ ಬಹುದೊಡ್ಡ ಪಾತ್ರವನ್ನು ನಿರ್ವಹಿಸುತ್ತದೆ.

 ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಅಪರೂಪವಾದ ವಿಶಿಷ್ಟ ಚಿತ್ರಕಲಾ ಪ್ರದರ್ಶನವೊಂದು ಮಣಿಪಾಲದ ಹರೀಶ್ ಸಾಗರವರ ‘ತ್ರಿವರ್ಣ ಆರ್ಟ್ ಗ್ಯಾಲರಿ’ಯಲ್ಲಿ ನಡೆಯಿತು. ಸ್ಪಿರಿಟ್ ಆಫ್ ಸ್ಪಿರಿಚ್ಯುಯಾಲಿಟಿ (Spirit of Spirituality) ಸರ್ವ ಧರ್ಮ ಸಮನ್ವಯದ ಕಲಾಪ್ರದರ್ಶನವು ಜನಮನ ಸೂರೆಗೊಂಡಿತು. ಈ ಚಿತ್ರಕಲಾ ಪ್ರದರ್ಶನವು ತ್ರಿವರ್ಣ ಆರ್ಟ್ ಗ್ಯಾಲರಿಯ 21ನೇ ಕಲಾ ಪ್ರದರ್ಶನವಾಗಿದೆ. ಇದರಲ್ಲಿ ಒಟ್ಟು 21 ಮಂದಿ ಕಲಾವಿದರು 21 ಕಲಾಕೃತಿಯನ್ನು ಪ್ರದರ್ಶಿಸಿದ್ದು ಈ ಕಾರ್ಯಕ್ರಮದ ವೈಶಿಷ್ಟ್ಯತೆಯಾಗಿತ್ತು. ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲರೂ ಬೇರೆ ಬೇರೆ ವೃತ್ತಿಯಲ್ಲಿರುವ ಹವ್ಯಾಸಿ ಕಲಾವಿದರು. 19 ವರ್ಷದಿಂದ 75 ವರ್ಷ ವಯೋಮಾನದ ಕಲಾವಿದರ ಕಲಾಕೃತಿಗಳೂ ಇಲ್ಲಿದ್ದವು. ಎಲ್ಲರೂ ತಮ್ಮದೇ ಅನುಭವದ ಹಿನ್ನೆಲೆಯಲ್ಲಿ ಕಲಾಕೃತಿಗಳನ್ನು ಚಿತ್ರಿಸಿದ್ದರು.

 ಈ ಪ್ರದರ್ಶನವು ಸರ್ವ ಧರ್ಮ ಸಮನ್ವಯದ ಪರಿಕಲ್ಪನೆಯನ್ನು ಸಾಕಾರಗೊಳಿಸಿರುವುದು ಮತ್ತೊಂದು ವೈಶಿಷ್ಟ್ಯವಾಗಿದೆ. ಕಾರ್ಯಕ್ರಮದ ಉದ್ಘಾಟನೆಯೂ ಅತ್ಯಂತ ವಿಶಿಷ್ಟವಾಗಿದ್ದು, ಐದು ಧರ್ಮಗಳ ಧಾರ್ಮಿಕ ಚಿಂತಕರು ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ಚಿತ್ರಕಲಾ ಪ್ರದರ್ಶನದಲ್ಲಿ ವಿದ್ಯಾರ್ಥಿ ಕಲಾವಿದರಾದ ಅಂಬಿಕಾ ಶೆಟ್ಟಿಯವರ ಸೂರ್ಯ ನಮಸ್ಕಾರದ ‘ಅರ್ಘ್ಯ’, ಅನೂಷಾ ಆಚಾರ್ಯರ ‘ಮೌನಂ’, ಕೆರೋಲಿನ್ ಡಿ’ಸೋಜಾರ ‘ಪ್ರಾರ್ಥನೆ’, ಗಣೇಶ್ ಶೆಟ್ಟಿಯವರ ‘ಕಾರ್ಣಿಕ’, ಮೈತ್ರೀ ಷಾರವರ ‘ದಿ ಫೈತ್’, ಚೇತನಾ ಗಣೇಶರ ‘ಅನುಗ್ರಹ’, ಡಾ. ದೀಪಕ್ ಮಲ್ಯರವರ ಮನಸ್ಸಿನ ಸುಪ್ತಪ್ರಜ್ಞೆಯ ‘ಸೋಲ್ ರೆಸಾನಾನ್ಸ್’, ಫರಾ ಶೇಖ್‌ರವರ ‘ಸಪ್ಲಿಕೇಶನ್’, ನಿರ್ಮಲ ಶೆಟ್ಟಿಯವರ ‘ಯೋಗ’, ಡಾ. ಜಿ.ಎಸ್.ಕೆ. ಭಟ್‌ರವರ ‘ಹರಕೆ’, ಪ್ರಜ್ಞಾ ಎನ್. ಹೊಳ್ಳರ ‘ಹೊಸ ಮುಂಜಾನೆ’, ಪ್ರಸಾದ್ ಆಚಾರ್ಯರ ‘ಔಟ್ ಆಫ್ ಫ್ರೇಮ್’, ಸಂತೋಷ್ ಭಟ್‌ರವರ ‘ಧ್ಯಾನ’, ಶ್ವೇತಾರವರ ‘ಹೋಮ’, ಉಜ್ವಲ್‌ರವರ ‘ಪ್ರಕೃತಿ ಪೂಜೆ’, ವಿಧು ಶಂಕರ್ ಬಾಬುರವರ ‘ದೃಷ್ಟಿ’, ಯಶಾ ಜಿ. ರವರ ‘ಏಕಾಗ್ರತೆ’, ಪ್ರಜ್ಞಾ ಭಟ್ ರಚಿಸಿದ ‘ಗಾಯನ’, ಸುಚಿತಾ ವಿನೋದರವರ ‘ಅಭಿಷೇಕ’, ಡಾ. ಸುಮೀತ್ ಕೌರ್ ದಿಲ್‌ರವರ ‘ಡಿವೈನ್ ಲೈಟ್’, ಸುಶ್ಮಾ ಪೂಜಾರಿಯವರ ‘ಕೃತಜ್ಞತೆ’, ಹೀಗೆ 13 ಅಕ್ರಲಿಕ್ ಮತ್ತು 8 ಚಾರ್ಕೋಲ್ ಮಾಧ್ಯಮದಿಂದ ರಚಿತ ಒಟ್ಟು 21 ಅತ್ಯಮೂಲ್ಯವಾದ ಕೃತಿಗಳು ಇಲ್ಲಿದ್ದವು. ಇವೆಲ್ಲವು ಬಣ್ಣ, ರೇಖೆ, ಆಕಾರ, ಸಂಯೋಜನೆ, ಚಿಂತನೆಯಲ್ಲಿ ರಚಿಸಲ್ಪಟ್ಟ ಕಲಾಕೃತಿಗಳು. ನಾವೀನ್ಯತೆಯ ಚಿಂತನೆಯೊಂದಿಗೆ, ಅಧ್ಯಾತ್ಮದ ಸ್ಪರ್ಶ ದಲ್ಲಿ ತ್ರಿವರ್ಣ ಕಲಾಕೇಂದ್ರವು ಒಂದು ಅತ್ಯಪೂರ್ವ ಕಲಾಪ್ರದರ್ಶನವನ್ನು ನೀಡಿ ಜನಸಾಮಾನ್ಯರಿಗೆ ಕಲಾಸ್ವಾದಕ್ಕೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top