-

ವಿಶ್ವವಿದ್ಯಾನಿಲಯದಲ್ಲಿ ಅವ್ಯವಹಾರ: ವಿಚಾರಣೆ ಸಮಿತಿಗಳಿಂದ ಸಿಂಡಿಕೇಟ್ ಸದಸ್ಯರಿಗೆ ಕೊಕ್

-

ಬೆಂಗಳೂರು, ನ.26: ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯಲ್ಲಿ ದುಂದುವೆಚ್ಚ, ಹಣದ ದುರ್ಬಳಕೆ, ಅಧಿಕಾರ ಮತ್ತು ಹಣದ ದುರುಪಯೋಗ ಸೇರಿದಂತೆ ಇನ್ನಿತರ ಅವ್ಯವಹಾರಗಳ ಕುರಿತು ನೇಮಕವಾಗಿರುವ ವಿಚಾರಣೆ ಸಮಿತಿಗಳಿಂದ ಸಿಂಡಿಕೇಟ್ ಸದಸ್ಯರಿಗೆ ರಾಜ್ಯ ಬಿಜೆಪಿ ಸರಕಾರವು ಕೊಕ್ ನೀಡಿದೆ.

ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ನೇಮಕ ಸಂಬಂಧ ಶೋಧನಾ ಸಮಿತಿ ಸದಸ್ಯರಿಗೆ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಖರೀದಿಸಿದ್ದ 10 ಸೂಟ್‌ಕೇಸ್, ಸಮಿತಿ ಸದಸ್ಯರಿಗೆ ಊಟೋಪಚಾರಕ್ಕೆ ಮಾಡಿದ್ದ ಖರ್ಚು ಮತ್ತು ನ್ಯಾಕ್ ಪರಿಶೀಲನೆ ಸಮಿತಿಗೆ 2 ಕೋಟಿ ರೂ. ವೆಚ್ಚ ಮಾಡಿದ್ದನ್ನು ಸಿಂಡಿಕೇಟ್ ಸದಸ್ಯರ ಉಪ ಸಮಿತಿಯು ಬಯಲಿಗೆಳೆದಿತ್ತು. ಅಲ್ಲದೆ ಈ ರೀತಿ ಮಾಡಿರುವ ವೆಚ್ಚವು ವಿಶ್ವವಿದ್ಯಾನಿಲಯಕ್ಕೆ ಆರ್ಥಿಕ ಹೊರೆಗೆ ಕಾರಣವಾಗುತ್ತದೆ ಎಂದು ವರದಿಯನ್ನೂ ಸರಕಾರಕ್ಕೆ ನೀಡಿ ದೂರು ಸಲ್ಲಿಸಿದ್ದರು.

ಸ್ಥಳೀಯ ವಿಚಾರಣೆ ಸಮಿತಿಗಳಿಗೆ ಸಿಂಡಿಕೇಟ್ ಸದಸ್ಯರನ್ನು ಅಧ್ಯಕ್ಷ ಮತ್ತು ಸದಸ್ಯರನ್ನಾಗಿ ನೇಮಿಸುವು ದರಿಂದ ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂಬ ಕಾರಣವನ್ನು ಮುಂದೊಡ್ಡಿರುವ ಉನ್ನತ ಶಿಕ್ಷಣ ಇಲಾಖೆಯು ಹೊರಡಿಸಿರುವ ಸುತ್ತೋಲೆಯು ಪರೋಕ್ಷವಾಗಿ ವಿಶ್ವವಿದ್ಯಾನಿಲಯಗಳಲ್ಲಿ ಅಕ್ರಮ ಅವ್ಯವಹಾರಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ.

‘ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್ ಸದಸ್ಯರನ್ನು ಸ್ಥಳೀಯ ವಿಚಾರಣೆ ಸಮಿತಿಗಳಿಗೆ ಸದಸ್ಯ, ಅಧ್ಯಕ್ಷರನ್ನಾಗಿ ನೇಮಕ ಮಾಡಿದಾಗ ಸಮಿತಿ ಸದಸ್ಯರಾಗಿ ಕಾಲೇಜುಗಳ ಪರಿವೀಕ್ಷಣೆ ನಡೆಸಿದ ಸದಸ್ಯರೇ ಮುಂದೆ ಸಮಿತಿ ವರದಿಯ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳುವುದು ನೈಸರ್ಗಿಕ ನ್ಯಾಯತತ್ವದ ಉಲ್ಲಂಘನೆಯಾಗುವ ಸಾಧ್ಯತೆ ಇರುತ್ತದೆ. ನಿಷ್ಪಕ್ಷ ಹಾಗೂ ಪಾರದರ್ಶಕವಾಗಿರಲು ಸಾಧ್ಯವಾಗುವುದಿಲ್ಲ. ಇದು ಹಿತಾಸಕ್ತಿ ಸಂಘರ್ಷಕ್ಕೂ ಕಾರಣವಾಗುತ್ತದೆ’ ಎಂದು ಉನ್ನತ ಶಿಕ್ಷಣ ಇಲಾಖೆಯು ಅಭಿಪ್ರಾಯಪಟ್ಟಿದೆ.

ಹೀಗಾಗಿ ಸ್ಥಳೀಯ ವಿಚಾರಣೆ ಸಮಿತಿಗಳಿಗೆ ಸಿಂಡಿಕೇಟ್ ಸದಸ್ಯರ ಬದಲಿಗೆ ವಿಷಯ ತಜ್ಞರು ಮತ್ತು ಶಿಕ್ಷಣ ತಜ್ಞರನ್ನು ನೇಮಿಸಲು ಕುಲಪತಿಗಳಿಗೆ ಸೂಚಿಸಿದೆ. ‘ಸಾಮಾಜಿಕ ಮತ್ತು ನೈಸರ್ಗಿಕ ನ್ಯಾಯದ ಪರಿಪಾಲನೆಯೊಂದಿಗೆ ಶೈಕ್ಷಣಿಕ ಹಿರಿಮೆಯನ್ನು ಸಾಧಿಸಲು ಹಾಗೂ ಶಿಕ್ಷಣ ಗುಣಮಟ್ಟವನ್ನು ವೃದ್ಧಿಸಲು ಅವಶ್ಯಕವಾದ ನ್ಯಾಯೋಚಿತ, ಪಾರದರ್ಶಕ ಹಾಗೂ ನಿಷ್ಪಕ್ಷ ಸಂಯೋಜನೆ ಪ್ರಕ್ರಿಯೆ ರೂಪಿಸಬೇಕಾದಲ್ಲಿ ಸ್ಥಳೀಯ ವಿಚಾರಣೆ ಸಮಿತಿಗಳಿಗೆ ವಿಷಯ ಪಾರಂಗತರನ್ನು ಹಾಗೂ ಶೈಕ್ಷಣಿಕ ತಜ್ಞರನ್ನು ನೇಮಿಸುವ ಅವಶ್ಯಕತೆ ಇದೆ’ ಎಂದೂ ಸೂಚನಾ ಪತ್ರದಲ್ಲಿ ಉಲ್ಲೇಖಿಸಿದೆ.

ದಾವಣಗೆರೆ ಸೇರಿದಂತೆ ರಾಜ್ಯದ ಪ್ರತಿ ವಿಶ್ವವಿದ್ಯಾನಿಲಯದಲ್ಲಿಯೂ ವಿವಿಧ ರೀತಿಯ ಅಕ್ರಮ, ಹಣ ದುರುಪಯೋಗ, ದುರ್ಬಳಕೆ, ಅವ್ಯವಹಾರ ಕುರಿತು ಲೋಕಾಯುಕ್ತ, ರಾಜ್ಯಪಾಲರಿಗೂ ಹಲವು ದೂರು ಗಳು ಸಲ್ಲಿಕೆಯಾಗುತ್ತಿವೆ. ಅಲ್ಲದೇ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ನೀಡಿರುವ ವರದಿಗಳಲ್ಲೂ ಹಲವು ನ್ಯೂನತೆ, ಲೋಪಗಳು ಬಹಿರಂಗಗೊಂಡಿವೆ.

ಇಂತಹ ವರದಿಗಳ ಮೇಲೆ ಕ್ರಮ ಕೈಗೊಳ್ಳಲು ಸಿಂಡಿಕೇಟ್ ಸದಸ್ಯರು ಸಭೆಗಳಲ್ಲಿ ಚರ್ಚೆ ನಡೆಸುತ್ತಿದ್ದರು. ಹಾಗೆಯೇ ಇದಕ್ಕಾಗಿ ವಿಚಾರಣೆ ಸಮಿತಿಗಳನ್ನೂ ಕುಲಪತಿಗಳು ನೇಮಿಸುತ್ತಿದ್ದರು. ಆದರೀಗ ಸರಕಾರವು ಸಿಂಡಿಕೇಟ್ ಸದಸ್ಯರನ್ನು ವಿಚಾರಣೆ ಸಮಿತಿಗಳಿಂದ ಕೈಬಿಟ್ಟಿರುವುದಕ್ಕೆ ಹಲವು ಸಿಂಡಿಕೇಟ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಎಲ್ಲ ವಿವಿಗಳ ಕುಲಪತಿಗಳಿಗೆ ಸುತ್ತೋಲೆ

ಈ ವರದಿ ನೀಡಿದ ಕೆಲವೇ ದಿನಗಳಲ್ಲೇ ರಾಜ್ಯ ಬಿಜೆಪಿ ಸರಕಾರವು ವಿಚಾರಣೆ ಸಮಿತಿಗಳಿಂದಲೇ ಸಿಂಡಿಕೇಟ್ ಸದಸ್ಯರನ್ನು ಕೈಬಿಟ್ಟಿದೆ. ಈ ಸಂಬಂಧ ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಕುಲಪತಿಗಳಿಗೆ 2022ರ ನವೆಂಬರ್ 24ರಂದು ಸುತ್ತೋಲೆ ಹೊರಡಿಸಿದೆ. ಇದರ ಪ್ರತಿಯು ''the-file.in''ಗೆ ಲಭ್ಯವಾಗಿದೆ.

‘ಎಲ್ಲ ರೀತಿಯ ಅಕ್ರಮಗಳನ್ನು ಮುಚ್ಚಿ ಹಾಕಲಾಗುತ್ತದೆ’

ವಿಶ್ವವಿದ್ಯಾನಿಲಯಗಳಲ್ಲಿ ಅಕ್ರಮ, ಅವ್ಯವಹಾರ, ಹಣದ ದುರ್ಬಳಕೆ, ದುರುಪಯೋಗಪಡಿಸಿಕೊಂಡಿರುವ ಕುರಿತು ಸಿಂಡಿಕೇಟ್ ಸದಸ್ಯರ ತನಿಖೆ ನಡೆಸಿ ವರದಿ ನೀಡುತ್ತಿದ್ದರು. ಆದರೀಗ ವಿಚಾರಣೆ ಸಮಿತಿಯಲ್ಲಿ ಸಿಂಡಿಕೇಟ್ ಸದಸ್ಯರನ್ನು ಕೈ ಬಿಟ್ಟು ವಿಶ್ವವಿದ್ಯಾ ನಿಲಯದ ಪ್ರಾಧ್ಯಾಪಕರು, ವಿಷಯ ತಜ್ಞರನ್ನು ನೇಮಿಸಿದರೆ ತನಿಖೆಯು ನಿಷ್ಪಕ್ಷವಾಗಿ ನಡೆಯುವುದಿಲ್ಲ. ಬದಲಿಗೆ ಅವರ ಹಂತದಲ್ಲಿಯೇ ಎಲ್ಲಾ ರೀತಿಯ ಅಕ್ರಮಗಳನ್ನು ಮುಚ್ಚಿ ಹಾಕಲಾಗುತ್ತದೆ ಎಂದು ವಿಶ್ವ ವಿದ್ಯಾನಿಲಯವೊಂದರ ಪ್ರಾಧ್ಯಾಪಕರೊಬ್ಬರು ಆರೋಪಿಸಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top