ಬೀದರ್ | ಜನರಲ್ ಡ್ಯೂಟಿ ಅಸಿಸ್ಟೆಂಟ್ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ

ಬೀದರ್ : ಭಾರತ್ ಕೆರಿಯರ್ ಕನೆಕ್ಟ್ ಸೊಲೂಶನ್ಸ್ ಸಹಯೋಗದಲ್ಲಿ ಅಪೋಲೊ ಮೆಡ್ ಸ್ಕಿಲ್ಸ್ ಸಂಸ್ಥೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಭ್ಯರ್ಥಿಗಳಿಗೆ ಆರು ತಿಂಗಳ ಕಾಲ ಬೆಂಗಳೂರಿನಲ್ಲಿ ಉಚಿತವಾಗಿ ಜನರಲ್ ಡ್ಯೂಟಿ ಅಸಿಸ್ಟೆಂಟ್ (ಜಿಡಿಎ) ತರಬೇತಿಯನ್ನು ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಭಾರತ್ ಕೆರಿಯರ್ ಕನೆಕ್ಟ್ ಸೊಲ್ಯೂಶನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ತರಬೇತಿ ಪಡೆಯಲು 18 ರಿಂದ 30 ವರ್ಷದ ವಯಸ್ಸಿನವರಾಗಿರಬೇಕು. ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ತರಬೇತಿಯ ನಂತರ ಆಸ್ಪತ್ರೆ ಹಾಗೂ ಆರೈಕೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೆಲಸಗಳನ್ನೊಳಗೊಂಡ ಆಸ್ಪತ್ರೆ, ವೃದ್ದಾಶ್ರಮ ಹಾಗೂ ಹಿರಿಯ ಆರೈಕೆ ಕೇಂದ್ರಗಳಲ್ಲಿ ಉದ್ಯೋಗಾವಕಾಶ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಮಖ್ಯೆ: 95356 02888, 63629 02311 ಹಾಗೂ 63629 02335 ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.
Next Story





