ಬೀದರ್ | ಆನಂದವಾಡಿ-ನೀಡೆಬನ ಮಧ್ಯ ಇರುವ ಸೇತುವೆ ಮುಳುಗಡೆ : ಸಂಪರ್ಕ ಕಡಿತ

ಬೀದರ್ : ಸತತವಾಗಿ ಸುರಿಯುತ್ತಿರುವ ಮಳೆಯಿಂದ ಭಾಲ್ಕಿ ತಾಲೂಕಿನ ಆನಂದವಾಡಿ-ನೀಡೆಬನ ಗ್ರಾಮಗಳ ಮಧ್ಯ ಇರುವ ಕಾರಂಜಾ ನದಿಯ ಸೇತುವೆ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ.
ಸೇತುವೆ ತುಂಬಿ ಮೇಲಿನಿಂದ ನೀರು ಹರಿಯುತ್ತಿರುವುದರಿಂದ ನೀಡೆಬನ್, ಕೋರುರ್, ಕೊಟಗೀರಾ, ಗೊರಚಿಂಚೊಳಿ ಗ್ರಾಮಗಳಿಗೆ ಹೋಗುವ ರಸ್ತೆ ಬಂದ್ ಆಗಿ, ಸಂಪರ್ಕ ಕಡಿತಗೊಂಡಿದೆ.
ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ರೈತರು ಕಷ್ಟ ಪಟ್ಟು ಬೆಳೆದ ಬೆಳೆ ಸಂಪೂರ್ಣ ಹಾಳಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ರೈತನ ಪರಿಸ್ಥಿತಿಯಾಗಿದೆ.
ಹೆಸರು, ಉದ್ದು , ಸೋಯಾ, ತೋಗರಿ ಬೇಳೆ ನೆಲಕಚ್ಚಿದು ರೈತರು ಸಂಕಷ್ಟದಲ್ಲಿ ದಿನ ದೂಡುವಂತೆ ಮಾಡಿದೆ. ಇದ್ದರಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ ಕೂಡಲೆ ರಾಜ್ಯ ಸರಕಾರ ಇತ್ತ ಗಮನ ಹರಿಸಿ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ಒದಗಿಸಬೇಕು. ಹಾಗೆಯೇ ವಿಮಾ ಮೊತ್ತ ಜಮಾ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಯುವ ಕ್ರಾಂತಿ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ್ ಭೂರೆ ಅವರು ಆಗ್ರಹಿಸಿದ್ದಾರೆ.
Next Story





