ಬೀದರ್ | ಸೈಬರ್ ವಂಚನೆ ಆರೋಪ : ಪ್ರಕರಣ ದಾಖಲು

ಬೀದರ್ : ಕಂಪನಿಯಲ್ಲಿ 14 ಲಕ್ಷ ರೂ. ಪ್ಯಾಕೇಜ್ ಮೇಲೆ ಹೈಯರಿಂಗ್ ಮಾಡಿಕೊಳ್ಳಲಾಗುವುದು ಎಂದು ಪರ್ಮನೆಂಟ್ ಹೈಯರಿಂಗ್ ಡಾಟೆಕ್ ಎಂಬ ಹೆಸರಿನ ನಕಲಿ ಕಂಪನಿಯಿಂದ ಯುವತಿಯೊರ್ವಳಿಗೆ ಸುಮಾರು 58 ಸಾವಿರ ರೂ. ವಂಚನೆ ಮಾಡಿದ ಘಟನೆ ಬಸವಕಲ್ಯಾಣದಲ್ಲಿ ನಡೆದಿದೆ.
ಈ ಘಟನೆ ಬಗ್ಗೆ ಸೋನಿಕಾ ಎನ್ನುವ ಇಂಜಿನಿಯರ್ ಯುವತಿಯು ದೂರು ನೀಡಿದ್ದು, ಪರ್ಮನೆಂಟ್ ಹೈಯರಿಂಗ್ ಡಾಟೆಕ್ ಎಂಬ ಹೆಸರಿನಿಂದ ಕಂಪನಿಯಿಂದ ಕರೆ ಬಂದಿದ್ದು, ಕಂಪನಿಯಲ್ಲಿ 14 ಲಕ್ಷ ರೂ. ಪ್ಯಾಕೇಜ್ ಮೇಲೆ ಹೈಯರಿಂಗ್ ಮಾಡಿಕೊಳ್ಳಲಾಗುತ್ತಿದೆ. 3,200 ರೂ. ರಿಜಿಸ್ಟ್ರೇಷನ್ ಫೀಸ್ ಆಗಿರುತ್ತದೆ ಎಂದು ತಿಳಿಸಿದಾಗ, ಅವರು ನೀಡಿರುವ ಯುಪಿಐ ಐಡಿಗೆ ಹಣ ಸಂದಾಯ ಮಾಡಿರುತ್ತೇನೆ. ಅದಾದ ನಂತರ ಅವರು ಶೆಡ್ಯೂಲ್ ಫೀಸ್ 7,500 ರೂ., ಜಾಬ್ ವೆರಿಫಿಕೇಷನ್ ಸಂಬಂಧ 13,500 ರೂ., ಫಸ್ಟ್ ರೌಂಡ್ ಇಂಟರ್ವ್ಯೂ ಫೀಸ್ 14, 999 ರೂ. ಮತ್ತು ಸೆಕೆಂಡ್ ರೌಂಡ್ ಇಂಟರ್ವ್ಯೂ ಫೀಸ್ 19,500 ಎಂದು ನನ್ನ ಹತ್ತಿರ ಹಣ ಪಡೆದಿದ್ದಾರೆ. ಹೀಗೆ ಒಟ್ಟು 58, 699 ರೂ. ವಂಚಿಸಿದ್ದಾರೆ ಎಂದು ಅವರು ಆರೋಪಿಸಿ ದೂರು ನೀಡಿದ್ದಾರೆ.
ನಂತರ ಈ ಬಗ್ಗೆ ನನ್ನ ಸ್ನೇಹಿತರ ಜೊತೆಗೆ ಚರ್ಚಿಸಿದಾಗ ಆ ಹೆಸರಿನ ಯಾವುದೇ ಕಂಪನಿ ಇಲ್ಲ ಎಂದು ನಾನು ಮೋಸ ಹೋಗಿದ್ದು ಗೊತ್ತಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.





