ಬೀದರ್ | ಮನೆ ಬೀಗ ಮುರಿದು ಕಳ್ಳತನ : ಪ್ರಕರಣ ದಾಖಲು

ಬೀದರ್ : ಮನೆ ಬೀಗ ಮುರಿದು ಸುಮಾರು 1 ಲಕ್ಷ 48 ಸಾವಿರ ರೂ. ಮತ್ತು 24 ತೊಲೆ ಬೆಳ್ಳಿ ಚೈನ್ ಕಳ್ಳತನವಾದ ಘಟನೆ ರವಿವಾರ ಹುಮನಾಬಾದ್ ಪಟ್ಟಣದ ಗಾಂಧಿನಗರ್ ಬಡಾವಣೆಯಲ್ಲಿ ನಡೆದಿದೆ.
ಈ ಕುರಿತು ಕಮಲಾಪುರದ ಪಟ್ಟವಾದ ತಾಂಡಾದ ನಿವಾಸಿ ಗೋಪಾಲ್ ಅವರು ದೂರು ನೀಡಿದ್ದು, ನಾನು ಕುಟುಂಬ ಸಹಿತ ಸುಮಾರು 5 ವರ್ಷಗಳಿಂದ ಹುಮನಾಬಾದ್‌ನ ಗಾಂಧಿನಗರ ಬಡಾವಣೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದೇವೆ. ಎರಡು ದಿವಸದ ಹಿಂದೆ ನಮ್ಮ ತಂದೆಯವರು ನಮ್ಮ ಹೊಲದಲ್ಲಿ ಬೆಳೆದ ತೊಗರಿ ಮಾರಾಟ ಮಾಡಿ, ಅದರಿಂದ ಬಂದ 1 ಲಕ್ಷ 48 ಸಾವಿರ ನನಗೆ ಕೊಟ್ಟು ಹೋಗಿದ್ದರು. ಶನಿವಾರ ಕಾರ್ಯಕ್ರಮವೊಂದಕ್ಕೆ ಕುಟುಂಬ ಸಹಿತ ನಮ್ಮ ಊರಿಗೆ ಹೋದಾಗ ನಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಸಂಭಂಧಿಸಿದಂತೆ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
Next Story





