ಬೀದರ್ | ಮನೆಯ ಬೀಗ ಮುರಿದು ಚಿನ್ನಾಭರಣ ಕಳವು : ಪ್ರಕರಣ ದಾಖಲು

ಬೀದರ್ : ಮನೆಯ ಬೀಗ ಮುರಿದು ಮನೆಯಲ್ಲಿದ್ದ ಆಭರಣ, ನಗದು ಸೇರಿದಂತೆ ಒಟ್ಟು 2 ಲಕ್ಷ 48 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಔರಾದ್ ತಾಲೂಕಿನ ಸಾವರಗಾಂವ್ ಗ್ರಾಮದಲ್ಲಿ ನಡೆದಿದೆ.
ಸವರಾಗಾಂವ್ ಗ್ರಾಮದ ನಿವಾಸಿ ವೆಂಕಟ್ ಹನುಚೆ (55) ಅವರ ಮನೆಯಲ್ಲಿ ಕಳ್ಳತನವಾಗಿದೆ.
ಬುಧವಾರ ಹೊಲಕ್ಕೆ ಕೆಲಸಕ್ಕೆ ಹೋದಾಗ ಮನೆಯ ಬೀಗ ಮುರಿದು ಸುಮಾರು 1 ಲಕ್ಷ 50 ಸಾವಿರ ರೂ. ಬೆಲೆ ಬಾಳುವ 15 ತೊಲೆ ಚಿನ್ನದ ಆಭರಣ, 80 ಸಾವಿರ ನಗದು ಹಣ ಮತ್ತು 18 ಸಾವಿರ ರೂ. ಬೆಲೆ ಬಾಳುವ 18 ತೊಲೆ ಬೆಳ್ಳಿ ಆಭರಣ ಸೇರಿ ಒಟ್ಟು 2 ಲಕ್ಷ 48 ಸಾವಿರ ಬೆಲೆ ಬಾಳುವ ಆಭರಣ, ನಗದು ಕಳ್ಳತನವಾಗಿದೆ ಎಂದು ವೆಂಕಟ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಹೊಕ್ರಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
Next Story





