ಬೀದರ್ | ವಿದ್ಯಾರ್ಥಿಗಳು ರಜಾ ದಿನಗಳಲ್ಲಿ ಪಂಚಾಯತ್‌ನಲ್ಲಿರುವ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು : ಪಿಡಿಓ ಮಾಯಾದೇವಿ

ಬೀದರ್ : ವಿದ್ಯಾರ್ಥಿಗಳು ರಜೆ ದಿನಗಳಲ್ಲಿ ಪಂಚಾಯತ್‌ನಲ್ಲಿರುವ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಯಾದೇವಿ ಅವರು ತಿಳಿಸಿದರು.
ಇಂದು ಬೀದರ್ ತಾಲೂಕಿನ ಖಾಜಾಪುರ್ ಗ್ರಾಮ ಪಂಚಾಯತ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಗ್ರಂಥಾಲಯದ ಮುಖ್ಯ ಉದ್ದೇಶವೇನೆಂದರೆ ಇಂದಿನ ಕಾಲದಲ್ಲಿ ಪ್ರತಿಯೊಬ್ಬರ ಹತ್ತಿರ ಮೊಬೈಲ್ ಇರುತ್ತವೆ. ಆದರೆ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪುಸ್ತಕ ಓದಬೇಕು ಎನ್ನುವ ಉದ್ದೇಶವಾಗಿದೆ ಎಂದರು.
ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚಾಗುತ್ತದೆ. ಮೊಬೈಲ್ ಇತಿ ಮಿತಿಯಾಗಿ ಬಳಸಬೇಕು. ಇಲ್ಲಿ ಹಲವಾರು ವಿಧದ ಪುಸ್ತಕಗಳಿದ್ದು, ಅವುಗಳ ಸದುಪಯೋಗವನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಪಡೆಯಬೇಕು ಎಂದು ತಿಳಿಸಿದರು.
ಗ್ರಾಮ ಲೆಕ್ಕಾಧಿಕಾರಿ ಲಕ್ಷೀ ರೆಡ್ಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನರಸಮ್ಮ, ಅರ್ಜುನ್, ಅನಿಲಕುಮಾರ್ ಮೇತ್ರಿ, ಗ್ರಾಮ ಪಂಚಾಯತ್ ಸದಸ್ಯರಾದ ತುಳಜಮ್ಮಾ, ಎಸ್ ಡಿ ಎಮ್ ಸಿ ಅಧ್ಯಕ್ಷ ರವೀಂದ್ರ, ಮುಖ್ಯ ಶಿಕ್ಷಕಿ ಅನುರಾಧ, ಸುಂದರ್ ಹಲಗೆ, ಬಸವರಾಜ್, ಇಮ್ಯಾನುವೆಲ್, ಪ್ರಕಾಶ್, ಮಾಣಿಕ್ ಹಾಗೂ ಶಿವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







