ಬೀದರ್ | ಜಿಲ್ಲೆಯಲ್ಲಿ ಬಿಜೆಪಿಯವರ ಸಮರ್ಥನೆ ನಮಗೆ ಬೇಕಾಗಿಲ್ಲ : ಸಚಿವ ಈಶ್ವರ್ ಖಂಡ್ರೆ

ಬೀದರ್ : ಜಿಲ್ಲೆಯಲ್ಲಿ ಯಾವ ಬಿಜೆಪಿಯವರ ಸಮರ್ಥನೆ ನಮಗೆ ಬೇಕಾಗಿಲ್ಲ. ಜಿಲ್ಲೆಯ ಲಕ್ಷಾಂತರ ಜನರ ಆಶೀರ್ವಾದ ಮತ್ತು ಕಾಂಗ್ರೆಸ್ ನಾಯಕರ ಬೆಂಬಲದಿಂದ ಸಾಗರ್ ಖಂಡ್ರೆ ಸಂಸದರಾಗಿದ್ದಾರೆ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದರು.
ಇಂದು ನಗರದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೀದರ್ ಜಿಲ್ಲೆಯ ಜನ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಮರ್ಥರಾಗಿದ್ದಾರೆ. ಇವರೆಲ್ಲರೂ ಬೆಂಬಲ ನೀಡಿದ್ದಾರೆ. ಜನರ ಆಶೀರ್ವಾದ ಇದೆ. ಹಾಗಾಗಿಯೇ ಸಾಗರ್ ಖಂಡ್ರೆ ಅವರು 1 ಲಕ್ಷ 28 ಸಾವಿರ ಮತಗಳಿಂದ ಗೆದ್ದಿದ್ದಾರೆ ಎಂದರು.
Next Story





