ಓ ಮೆಣಸೇ

23rd November, 2020
ನೀವು (ಗಡಿ ರಕ್ಷಣಾ ಸೇನೆ) ನಮ್ಮ ಗಡಿಗಳನ್ನು ರಕ್ಷಿಸುತ್ತಿರುವ ಕಾರಣ ನಾವು ರಾತ್ರಿ ನಿಶ್ಚಿಂತೆಯಿಂದ ನಿದ್ರಿಸುತ್ತಿದ್ದೇವೆ - ನರೇಂದ್ರ ಮೋದಿ, ಪ್ರಧಾನಿ ನೀವು ನಿದ್ರಿಸುತ್ತಿರುವ ಕಾರಣದಿಂದಲೇ ಚೀನಾ ಸೇನೆ ಗಡಿಗೆ...
16th November, 2020
ಅಮೆರಿಕ -ಭಾರತ ನಿಕಟ ಸ್ನೇಹಬಂಧ ಇರಿಸಿಕೊಂಡರಷ್ಟೇ ಜಗತ್ತು ಸುರಕ್ಷಿತವಾಗಿರಲಿದೆ - ಜೋ ಬೈಡನ್, ಅಮೆರಿಕ ಅಧ್ಯಕ್ಷ ಆ ಜಗತ್ತಿನಲ್ಲಿ ಭಾರತದ ಸುರಕ್ಷತೆಯೂ ಸೇರಿಕೊಂಡಿದೆಯೇ?
9th November, 2020
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಉಳಿಸುವ ಜವಾಬ್ದಾರಿ ಮತದಾರರ ಮೇಲಿದೆ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ ಅಪ್ಪ-ಮಕ್ಕಳಿಂದ ಪ್ರಾದೇಶಿಕ ಪಕ್ಷವನ್ನು ಉಳಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎನ್ನುವುದು ನಿಜ.
2nd November, 2020
ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಕಾಂಗ್ರೆಸ್ ನಾಯಕರು ಬಡಿದಾಟ ಮಾಡುತ್ತಲೇ ಇರುತ್ತಾರೆ -ಶೋಭಾ ಕರಂದ್ಲಾಜೆ, ಸಂಸದೆ ಜನಸಾಮಾನ್ಯರನ್ನು ಬಡಿದಾಡಿಸುವ ನಿಮ್ಮ ರಾಜಕಾರಣಕ್ಕಿಂತ ವಾಸಿ.
19th October, 2020
ಜೀವಗಳನ್ನು ಅಪಾಯಕ್ಕೊಡ್ಡಿ ಹಬ್ಬ ಆಚರಿಸಬೇಕೆಂದು ಯಾವ ಧರ್ಮವೂ ಹೇಳಿಲ್ಲ -ಡಾ.ಹರ್ಷವರ್ಧನ್, ಕೇಂದ್ರ ಸಚಿವ ಜೀವಗಳನ್ನು ಬಲಿಕೊಟ್ಟು ಧರ್ಮವನ್ನು ಉಳಿಸಿ ಎಂದು ಹೇಳಿದೆಯೇ?
5th October, 2020
    ಜಸ್ವಂತ್ ಸಿಂಗ್ ಶ್ರದ್ಧೆಯಿಂದ ದೇಶ ಸೇವೆ ಮಾಡಿದವರು - ನರೇಂದ್ರ ಮೋದಿ, ಪ್ರಧಾನಿ ಆ ಕಾರಣದಿಂದ ಅವರನ್ನು ನೀವು ದೂರ ಇಟ್ಟಿರಬೇಕು. ಶಿವಸೇನೆ ಜೊತೆ ಮತ್ತೆ ಕೈ ಜೋಡಿಸುವುದಿಲ್ಲ - ದೇವೇಂದ್ರ ಫಡ್ನ್ನವೀಸ್, ಬಿಜೆಪಿ...
28th September, 2020
ಕರ್ನಾಟಕವನ್ನು ಸುಗ್ರೀವಾಜ್ಞೆ ರಾಜ್ಯವನ್ನಾಗಿ ಪರಿವರ್ತಿಸಲಾಗುತ್ತಿದೆ- ಎಚ್.ಎಸ್. ದೊರೆಸ್ವಾಮಿ, ಸ್ವಾತಂತ್ರ ಹೋರಾಟಗಾರ ವಾಲಿ, ಸುಗ್ರೀವರೆಲ್ಲ ಸೇರಿ ರಾಜ್ಯವನ್ನು ಕಿಷ್ಕಿಂದೆ ಮಾಡಲು ಹೊರಟಂತಿದೆ.
21st September, 2020
ಯಾರ ಬಗ್ಗೆಯಾದರೂ ತಪ್ಪಾಗಿ ನಡೆದುಕೊಂಡಿದ್ದರೆ ನೇಣು ಹಾಕಿಕೊಳ್ಳಲು ತಯಾರಿದ್ದೇನೆ - ವಿ.ಸೋಮಣ್ಣ, ಸಚಿವ ಯಾರ ಬಗ್ಗೆ ನೇಣು ಹಾಕಿಕೊಳ್ಳುವಂತಹ ತಪ್ಪು ಮಾಡಿದ್ದೀರಿ ಎನ್ನುವುದನ್ನು ನ್ಯಾಯಾಲಯದ ಮುಂದೆ ಹೇಳಿಕೊಳ್ಳಿ....
7th September, 2020
ಕೊಳಗೇರಿ ಮುಕ್ತ ಕರ್ನಾಟಕ ನಮ್ಮ ಸರಕಾರದ ಕನಸಾಗಿದೆ  -ವಿ. ಸೋಮಣ್ಣ , ಸಚಿವ  ಬಿಜೆಪಿ ಪಕ್ಷದಿಂದಲೇ ಅದು ಆರಂಭವಾಗಲಿ.
31st August, 2020
ಸರಕಾರದ ಆದೇಶದಂತೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕು -ಟಿ.ಎಸ್. ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮೊದಲು ವೈದ್ಯರಿಗೆ ಜನ ಸಾಮಾನ್ಯರಿಗೆ...
24th August, 2020
ಒಂದಲ್ಲ ಒಂದು ದಿನ ಭಾರತ ವಿಶ್ವದ ಮೂರನೇ ಅತ್ಯಂತ ದೊಡ್ಡ ಅರ್ಥ ವ್ಯವಸ್ಥೆಯಾಗಲಿದೆ - ಎಸ್.ಜೈಶಂಕರ್, ಕೇಂದ್ರ ಸಚಿವ ಅದಾಗದಂತೆ ತಡೆಯಲು ಪ್ರಧಾನಿಯವರು ಗರಿಷ್ಠ ಪ್ರಯತ್ನ ನಡೆಸುತ್ತಿದ್ದಾರೆ.
10th August, 2020
ಯಡಿಯೂರಪ್ಪ ಸರಕಾರ ಒಂದು ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಕೋವಿಡ್ ಮುಚ್ಚಿ ಹಾಕಿದೆ - ಎಚ್.ವಿಶ್ವನಾಥ್, ವಿ.ಪ.ಸದಸ್ಯ ನೀವು ಅಗೆದು ತೆಗೆಯಿರಿ. ಕೊರೋನ ವೈರಸ್ ಆರಂಭದಲ್ಲಿ ಎಷ್ಟಿತ್ತೋ ಈಗಲೂ ಅಷ್ಟೇ...
27th July, 2020
ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಗಿದ ಅಧ್ಯಾಯ. - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಹೊಸ ಪುಸ್ತಕ ಕೊಂಡು ಹೊಸ ಅಧ್ಯಾಯ ಪ್ರಾರಂಭಿಸುವ ಯೋಚನೆ ಇದೆಯೆ?
13th July, 2020
‘ಆತ್ಮ ನಿರ್ಭರ ಭಾರತ’ವೆಂದರೆ ಜಗತ್ತಿಗೆ ನಾವು ಬಾಗಿಲುಗಳನ್ನು ಮುಚ್ಚಿದ್ದೇವೆ ಎಂದರ್ಥವಲ್ಲ. ಇಲ್ಲಿ ಹೂಡಿಕೆ ಮಾಡಲು ಎಲ್ಲ ಜಾಗತಿಕ ಕಂಪೆನಿಗಳನ್ನು ಸ್ವಾಗತಿಸುತ್ತೇವೆ - ನರೇಂದ್ರ ಮೋದಿ, ಪ್ರಧಾನ ಮಂತ್ರಿ
22nd June, 2020
ಕೊರೋನ ನಿಯಂತ್ರಣದಲ್ಲಿ ಪ್ರಧಾನಿ ಮೋದಿ ವಿಶ್ವವೇ ಮೆಚ್ಚುವ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ - ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ ಚೀನಾ ಕೂಡ ಭೇಷ್ ಎಂದಿದೆ. 
14th June, 2020
ಮೋದಿ ನೇತೃತ್ವದ ಕೇಂದ್ರ ಸರಕಾರ ನುಡಿದಂತೆ ನಡೆಯುತ್ತಿದೆ  - ಅಮಿತ್‌ಶಾ, ಕೇಂದ್ರ ಸಚಿವ ಬಹುಶಃ ಆರೆಸ್ಸೆಸ್ ನುಡಿದಂತೆ ನಡೆಯುತ್ತಿರಬೇಕು.
7th June, 2020
ಬಿಜೆಪಿಯಲ್ಲಿ ಲಕ್ಷ್ಮಣ ರೇಖೆ ದಾಟುವವರು ಯಾರೂ ಇಲ್ಲ - ಡಾ.ಅಶ್ವತ್ಥ್ಥನಾರಾಯಣ, ಉಪಮುಖ್ಯಮಂತ್ರಿ  ಹಾಗಾದರೆ ಎಲ್ಲರೂ ಲಕ ್ಷಣ ರೇಖೆಯ ಹೊರಗೇ ಇರಬೇಕು. ಭಾರತದ ಅಂತರ್‌ರಾಷ್ಟ್ರೀಯ ಗಡಿ ನರೇಂದ್ರ ಮೋದಿ ನಾಯಕತ್ವದಲ್ಲಿ...
17th May, 2020
  ಕೊರೋನ ಹೋರಾಟದಲ್ಲಿ ಕೊನೆಯ ಗೆಲುವು ಮನುಕುಲದ್ದಾಗಬೇಕು  - ರಮೇಶ್ ಜಾರಕಿಹೊಳಿ, ಸಚಿವ  ಮನುಕುಲದೊಳಗೆ ವಲಸೆ ಕಾರ್ಮಿಕರು ಬರುತ್ತಾರೆಯೇ?
26th April, 2020
ಕೊರೋನ ವಿರುದ್ಧದ ಹೋರಾಟವು ತಮ್ಮ ಜೀವಿತಾವಧಿಯಲ್ಲೇ ಅತಿ ದೊಡ್ಡ ಅದೃಶ್ಯ ಯುದ್ಧವಾಗಿದೆ - ರಾಜನಾಥ್‌ಸಿಂಗ್, ಕೇಂದ್ರ ಸಚಿವ  ಗಡಿಯಲ್ಲಿ ನಡೆದ ಸಜಿಕರ್ಲ್ ಸ್ಟ್ರೈಕ್‌ಗಳ ಗತಿಯೇನು?
19th April, 2020
 ಬಡವರಿಗೆ ವಿತರಿಸುತ್ತಿರುವ ಆಹಾರ ಚೀಲಗಳ ಮೇಲೆ ಶಿಷ್ಟಾಚಾರದ ಭಾಗವಾಗಿ ನನ್ನ ಭಾವಚಿತ್ರ ಬಳಸಿದ್ದಾರೆ -ಅರವಿಂದ ಲಿಂಬಾವಳಿ, ಶಾಸಕ ಕೊರೋನ ಕುರಿತಂತೆ ಜಾಗೃತಿ ಮೂಡಿಸಲು ವೈರಸ್ ಚಿತ್ರ ಸಿಕ್ಕಿರಲಿಲ್ಲ ಎಂದು ಕಾಣುತ್ತದೆ.
12th April, 2020
ಯಾರೇ ದುರಾಲೋಚನೆ ಮಾಡಿದರೂ (ಕೊರೋನ ಬಗ್ಗೆ) ನಮ್ಮ ರಾಮ, ಈಶ್ವರ ಭಗವಂತ ನಮ್ಮನ್ನು ಕಾಪಾಡುತ್ತಾರೆ - ಸೋಮಶೇಖರರೆಡ್ಡಿ, ಶಾಸಕ ನಿಮ್ಮಿಂದ ಜನರನ್ನು ಭಗವಂತ ಕಾಪಾಡಬೇಕಾದ ಸ್ಥಿತಿ ಬಂದಿದೆ.
5th April, 2020
ಹಸಿವಿನ ಭಯ ಮರಣಕ್ಕಿಂತಲೂ ಭೀಕರವಾದುದು -ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಹಸಿವಿನಿಂದ ಬದುಕುವ ಕಲೆಯನ್ನು ಕಲಿಸಿ ಕೊಡುವ ಯೋಜನೆ ಇದೆಯೇ? --------------------------------------
29th March, 2020
ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗಾಗಿ ನಾನು ಇದೇ ಮೊದಲ ಬಾರಿಗೆ ದಿನ ಪೂರ್ತಿ ಮನೆಯಲ್ಲೇ ಇದ್ದು ಮಕ್ಕಳ ಜೊತೆ ಸಮಯ ಕಳೆದೆ - ನಳಿನ್ ಕುಮಾರ್ ಕಟೀಲು , ಸಂಸದ 
22nd March, 2020
ಹಿಂದೂ ಧರ್ಮಕ್ಕಾಗಿಯೇ ನಾನು ನನ್ನ ಜೀವನವನ್ನು ಮುಡಿಪಾಗಿರಿಸಿದ್ದೇನೆ - ಸಾಧ್ವಿ ಪ್ರಜ್ಞಾಸಿಂಗ್‌ಟಾಗೋರ್, ಸಂಸದೆ ವಿವೇಕಾನಂದರ ಹಿಂದೂ ಧರ್ಮವನ್ನು ನಾಶಗೊಳಿಸುವುದಕ್ಕಾಗಿ ಬದುಕನ್ನು ಮುಡಿಪಾಗಿಟ್ಟಿರಬೇಕು...
15th March, 2020
ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯೇ ಸರಕಾರದ ಗುರಿ - ಸ್ಮತಿ ಇರಾನಿ, ಕೇಂದ್ರ ಸಚಿವೆ. ಎಲ್ಲರೂ ಎಂದರೆ ಅಮೆರಿಕ, ಅನಿಲ್ ಅಂಬಾನಿ, ಅದಾನಿಗಳಿರಬೇಕು.
9th March, 2020
ಮುಖ್ಯಮಂತ್ರಿ ಯಡಿಯೂರಪ್ಪರಿಗೆ ವಯಸ್ಸಾಗಿರಬಹುದು, ಆದರೆ ಅವರಿನ್ನೂ ಯುವಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ - ಬಿ.ವೈ. ವಿಜಯೇಂದ್ರ, ಬಿಜೆಪಿ ಯುವನಾಯಕ. ► ಅವರಿಗೆ ವಯಸ್ಸಾಗಿದೆ ಎನ್ನುವುದನ್ನು ಪದೇ ಪದೇ...
2nd March, 2020
=*ಆಂಗ್ಲ ಭಾಷಾ ವ್ಯಾಮೋಹದಿಂದ ನಮ್ಮ ಸಂಸ್ಕೃತಿ, ಸಂಸ್ಕಾರ, ನಮ್ಮತನ ಮರೆಯಾಗುವ ಅಪಾಯವಿದೆ - ಶೋಭಾ ಕರಂದ್ಲಾಜೆ, ಸಂಸದೆ. ವ್ಯಾಮೋಹಕ್ಕಿಂತ ಮೋಹವೇ ಕೆಲವೊಮ್ಮೆ ಹೆಚ್ಚು ಲಾಭದಾಯಕ. ---------------------
23rd February, 2020
 ನಾನು ಬಿಎಸ್‌ವೈ ಸರಕಾರದ ಬಗ್ಗೆ ಮೃದು ಧೋರಣೆ ಹೊಂದಿಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ   ಹಿಂದುತ್ವದ ಬಗ್ಗೆ ಮಾತ್ರ ಮೃದು ಧೋರಣೆ ಅಂತೀರಾ? ---------------------
17th February, 2020
ಜೆಡಿಎಸ್‌ನವರು ಎಂದೂ ಭಾರತ್ ಮಾತಾ ಕೀ ಜೈ ಎಂದು ಹೇಳಿಲ್ಲ -ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ. ನೀವೊಮ್ಮೆ ಜೋರಾಗಿ ಪಂಪ್‌ವೆಲ್ ಮಾತಾ ಕೀ ಜೈ ಅನ್ನಿ ನೋಡೋಣ ?
9th February, 2020
ಸಿಎಎ ವಿರೋಧಿ ಪ್ರತಿಭಟನೆ ಆಕಸ್ಮಿಕ ಅಲ್ಲ, ವ್ಯವಸ್ಥಿತ - ನರೇಂದ್ರ ಮೋದಿ, ಪ್ರಧಾನಿ. ಹೌದು. ಅದಕ್ಕಾಗಿ ತಾವು ತುಂಬಾ ಶ್ರಮ ಪಟ್ಟಿದ್ದೀರಿ. --------------------- ರಾಷ್ಟ್ರ ಭಕ್ತಿ ಜಾಗೃತಗೊಳಿಸುವ ಶಕ್ತಿ...
Back to Top