ಓ ಮೆಣಸೇ

28th March, 2022
ಪೂರ್ವಗ್ರಹ ಪೀಡಿತ ಮನಸ್ಸುಗಳಿಗೆ ಕಾಶ್ಮೀರ ಪಂಡಿತರ ಸ್ಥಿತಿ ಅರ್ಥವಾಗುವುದಿಲ್ಲ - ಸಿ.ಟಿ.ರವಿ, ಶಾಸಕ ಆದ್ದರಿಂದ ಸತ್ಯ ಏನೆಂಬುದನ್ನು ಕಾಶ್ಮೀರ ಪಂಡಿತರೇ ಜಗತ್ತಿಗೆ ತಿಳಿಸುತ್ತಿದ್ದಾರೆ.
21st March, 2022
ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳದೆ, ಎರಡೂ ಪಕ್ಷಗಳ ವಿರುದ್ಧ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ -ದೇವೇಗೌಡ, ಮಾಜಿ ಪ್ರಧಾನಿ ಇದೇನು ಚೌಕಾಶಿಯ ಮೊದಲ ಹೆಜ್ಜೆಯೇ?
7th March, 2022
ಭಾಷೆ, ಸಂಸ್ಕೃತಿ, ನಡವಳಿಕೆ ಮತ್ತು ನಾಗರಿಕತೆ ಕೊಂಡಿಯಾಗಿ ಕೆಲಸ ಮಾಡಿದರೆ ಮಾತ್ರ ಸಮಾಜ ಚೆನ್ನಾಗಿ ನಡೆಯಲು ಸಾಧ್ಯ -ಸುನೀಲ್ ಕುಮಾರ್, ಸಚಿವ ಆದ್ದರಿಂದ ಸಮಾಜವನ್ನು ಛಿದ್ರಗೊಳಿಸುವುದರಲ್ಲೇ ಸಾರ್ಥಕ್ಯ ಕಾಣುವವರು...
28th February, 2022
ವಿಶ್ವ ಪ್ರಕ್ಷುಬ್ಧ ಸ್ಥಿತಿಯಲ್ಲಿದ್ದು ಈ ಸಂದರ್ಭದಲ್ಲಿ ಭಾರತಕ್ಕೆ ಕಠಿಣ ನಾಯಕನ ಅಗತ್ಯವಿದೆ -ನರೇಂದ್ರ ಮೋದಿ, ಪ್ರಧಾನಿ ಹೌದು. ದಯವಿಟ್ಟು ರಾಜೀನಾಮೆ ಕೊಟ್ಟು ಸಮರ್ಥನಾಯಕನಿಗೆ ಅವಕಾಶ ಮಾಡಿಕೊಡಿ. ಕುಂಕುಮ,ಬಳೆ ,...
14th February, 2022
ದೇವೇಗೌಡರ ಬುದ್ಧಿವಂತಿಕೆ ಏನೆಂದರೆ ಅವರು ನೀರಿಗಾಗಿ ಅಣೆಕಟ್ಟು ನಿರ್ಮಿಸಲು ಹೋಗುವುದಿಲ್ಲ, ಬದಲಿಗೆ ಸೋರುವ ನೀರಿಗೆ ಕೊಡ ಹಿಡಿದು ತುಂಬಿಸಿಕೊಳ್ಳುತ್ತಾರೆ -ಸಿ.ಎಂ.ಇಬ್ರಾಹೀಂ, ವಿ.ಪ. ಸದಸ್ಯ
7th February, 2022
ನಮ್ಮ ನಾಯಕರ ತ್ಯಾಗ ಬಲಿದಾನ ನಮ್ಮ ಶಕ್ತಿ-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ  ಅವರನ್ನೆಲ್ಲ ಜಾತ್ರೆಯಲ್ಲಿನ ಕೋಳಿ ಕುರಿಗಳ ಸ್ಥಾನದಲ್ಲಿ ನಿಲ್ಲಿಸಿ ಬಿಟ್ಟಿರಲ್ಲಾ !
17th January, 2022
 ನಳಿನ್ ಕುಮಾರ್ ಕಟೀಲು ಅವರ ಎಳಸುತನದ ಪ್ರಾಯದ ಬಗ್ಗೆ ನನಗೆ ಹೆಮ್ಮೆಯಿದೆ-ಕೋಟ ಶ್ರೀನಿವಾಸ ಪೂಜಾರಿ, ಸಚಿವ  ಅಷ್ಟು ವಯಸ್ಸಾದರೂ ಇನ್ನೂ ಅವರು ಬೆಳೆದಿಲ್ಲ ಎಂಬ ಹೆಮ್ಮೆಯೇ?
10th January, 2022
ಹೋರಾಟ ನನ್ನ ರಕ್ತದಲ್ಲೇ ಇದೆ -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಡಕಲಾಗಿರುವ ಕಾಂಗ್ರೆಸ್‌ಗೆ ತಿಂಗಳಿಗೆ ಒಮ್ಮೆಯಾದರೂ ರಕ್ತ ದಾನ ಮಾಡಿ.
3rd January, 2022
ಮೂರು ಕೃಷಿ ಕಾಯ್ದೆಗಳನ್ನು ಮತ್ತೆ ತರುವ ಉದ್ದೇಶ ಕೇಂದ್ರ ಸರಕಾರಕ್ಕೆ ಇಲ್ಲ -ನರೇಂದ್ರ ಸಿಂಗ್ ತೋಮರ್, ಕೇಂದ್ರ ಸಚಿವ ಬಹುಶಃ ಮೂರು ಕಾಯ್ದೆಗಳನ್ನು ವಿಲೀನಗೊಳಿಸಿ ಬೇರೆ ಹೆಸರನಲ್ಲಿ ಮತ್ತೆ ತರುವ ಉದ್ದೇಶವಿರಬೇಕು.
27th December, 2021
 ಸರ್ದಾರ್ ವಲ್ಲಭಬಾಯಿ ಪಟೇಲ್ ಇನ್ನಷ್ಟು ವರ್ಷ ಬದುಕಿದ್ದರೆ ಗೋವಾಕ್ಕೆ ಇನ್ನೂ ಬೇಗ ಪೋರ್ಚುಗೀಸರಿಂದ ವಿಮೋಚನೆ ಸಿಗುತ್ತಿತ್ತು - ನರೇಂದ್ರ ಮೋದಿ, ಪ್ರಧಾನಿ ಈಗ ಬದುಕಿದ್ದಿದ್ದರೆ ನಿಮ್ಮಿಂದ ದೇಶವನ್ನು ವಿಮೋಚನೆ...
13th December, 2021
ಬೇಡವೆಂದರೂ ದಿಲ್ಲಿಯಿಂದ ಒತ್ತಡ ಹಾಕಿ ಕಾಂಗ್ರೆಸ್‌ನವರು ನನ್ನನ್ನು ಮುಖ್ಯಮಂತ್ರಿ ಮಾಡಿ ಕಿರುಕುಳ ನೀಡಿದರು  -ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ    ನಾಡೆಲ್ಲಾ ಬೇಡ ಬೇಡವೆಂದರೂ ನೀವಿನ್ನೂ ರಾಜಕೀಯದಲ್ಲಿ...
6th December, 2021
ನನಗೆ ಅಧಿಕಾರ ಬೇಕಿಲ್ಲ. ನಾನಿರುವುದೇ ಜನರ ಸೇವೆಗಾಗಿ - ನರೇಂದ್ರ ಮೋದಿ, ಪ್ರಧಾನಿ    ತಕ್ಷಣ ರಾಜೀನಾಮೆ ಕೊಟ್ಟು, ಯಾರಾದರೂ ವಿದ್ಯಾವಂತರಿಗಾಗಿ ಹುದ್ದೆ ತರವುಗೊಳಿಸಿ, ಆ ಮೂಲಕ ನಿಮ್ಮ ಪ್ರಾಮಾಣಿಕತೆ ಸಾಬೀತು ಪಡಿಸಿ...
29th November, 2021
ದೇಶದ ಅನೇಕ ರಾಜಕೀಯ ಪಕ್ಷಗಳಿಗೆ ಸ್ವಹಿತಾಸಕ್ತಿಯೇ ಮುಖ್ಯ -ನರೇಂದ್ರ ಮೋದಿ, ಪ್ರಧಾನಿ ನಿಮಗೆ ಮಾತ್ರ ಅದಾನಿ ಮತ್ತು ಅಂಬಾನಿ ಹಿತಾಸಕ್ತಿ ಮುಖ್ಯ.
23rd November, 2021
ಹಿಂದಿಯು ಭಾರತದ ಸ್ಥಳೀಯ ಭಾಷೆಗಳ ಸ್ನೇಹಿತ.- ಅಮಿತ್ ಶಾ, ಕೇಂದ್ರ ಸಚಿವಈಸ್ಟ್ ಇಂಡಿಯಾ ಕಂಪೆನಿಯವರೂ ಅಷ್ಟೇ, ತಾವು ಭಾರತೀಯರ ಪರಮಾಪ್ತರೆಂದೇ ಹೇಳಿಕೊಳ್ಳುತ್ತಿದ್ದರು. ಮಹಾತ್ಮಾ ಗಾಂಧಿಯ ಹೆಸರಲ್ಲಿ ಕಾಂಗ್ರೆಸ್ ಅಂಗಡಿ...
15th November, 2021
8th November, 2021
ದೇಶವು ಆಂತರಿಕ ಮತ್ತು ಬಾಹ್ಯವಾಗಿ ಎದುರಾಗುವ ಯಾವುದೇ ಸವಾಲುಗಳನ್ನು ಹಿಮ್ಮೆಟ್ಟಿಸಲು ಸಮರ್ಥವಾಗಿದೆ - ನರೇಂದ್ರ ಮೋದಿ, ಪ್ರಧಾನಿ ಉಪ ಚುನಾವಣೆಯ ಫಲಿತಾಂಶದಲ್ಲಿ ಅದು ಸಾಬೀತಾಗಿದೆ.
1st November, 2021
ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಅಡ್ಡಿ ಉಂಟುಮಾಡಲು ಇನ್ನು ಯಾರಿಂದಲೂ ಸಾಧ್ಯವಿಲ್ಲ - ಅಮಿತ್ ಶಾ, ಕೇಂದ್ರ ಸಚಿವ ಹೌದು, ನಿಮ್ಮ್ಮಬ್ಬರಿಂದ ಮಾತ್ರ ಅದು ಸಾಧ್ಯವಾಗಿರುವುದು.
25th October, 2021
ದಲಿತರು ಹಾಗೂ ಅಲ್ಪಸಂಖ್ಯಾತರು ಕಾಂಗ್ರೆಸ್‌ನ ಫೌಂಡೇಶನ್- ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ ಆ ಫೌಂಡೇಶನ್ ಮೇಲೆ ತಾನೇ ಆರೆಸ್ಸೆಸ್ ನೋರು ರಾಮ ಮಂದಿರ ಕಟ್ಟುತ್ತಾ ಇರುವುದು.
27th September, 2021
*ನನ್ನ ಜನ್ಮದಿನದಂದು 2.5 ಕೋಟಿ ಲಸಿಕೆಗಳನ್ನು ನೀಡಿದ್ದನ್ನು ನೋಡಿ ಪಕ್ಷವೊಂದಕ್ಕೆ ಜ್ವರ ಬಂದು ಬಿಟ್ಟಿದೆ - ನರೇಂದ್ರ ಮೋದಿ, ಪ್ರಧಾನಿ ಇಷ್ಟೊಂದು ಅಗ್ಗದ ಮಾತನಾಡುವ ವ್ಯಕ್ತಿಯೊಬ್ಬರು ಪ್ರಧಾನಮಂತ್ರಿಯ ಸ್ಥಾನದಲ್ಲಿ...
20th September, 2021
ಇಬ್ಬರು ಮಾಡುತ್ತಿರುವ ಮಾರಾಟವನ್ನು ಇಬ್ಬರು ಖರೀದಿಸುತ್ತಿರುವ ಪರಿಸ್ಥಿತಿಗೆ ದೇಶವನ್ನು ತಂದು ನಿಲ್ಲಿಸಲಾಗಿದೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
13th September, 2021
\ಭಾರತೀಯ ಸಂಗೀತ ಪರಿಕರಗಳಾದ ತಬಲಾ, ತಾಳವಾದ್ಯ, ಪಿಟೀಲು, ತುತ್ತೂರಿ, ಕೊಳಲುಗಳ ಉಲಿಯನ್ನು ವಾಹನಗಳಿಗೆ ಹಾರನ್ ಆಗಿ ಅಳವಡಿಸಲು ನಿಯಮ ರೂಪಿಸಲಾಗುವುದು. -ನಿತಿನ್ ಗಡ್ಕರಿ, ಕೇಂದ್ರ ಸಚಿವ
6th September, 2021
ಬಿಜೆಪಿ ಬಗ್ಗೆ ನಾನು ಯಾವತ್ತೂ ಮೃದು ಧೋರಣೆ ತಳೆದಿಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಅವರು ಅನುಮತಿಸಿದರೆ ಅವರ ಪಾದ ತೊಳೆಯುವುದೇ ನಿಮ್ಮ ದೃಢ ಧೋರಣೆ ಎಂಬುದು ಗೊತ್ತಿದ್ದರೂ ಅವರು ಅವಕಾಶ...
30th August, 2021
ಮಾಜಿ ಪ್ರಧಾನಿಗಳಾದ ವಾಜಪೇಯಿ ಮತ್ತು ಜವಾಹರ ಲಾಲ್ ನೆಹರೂ ಆದರ್ಶ ನಾಯಕರು- ನಿತಿನ್ ಗಡ್ಕರಿ, ಕೇಂದ್ರ ಸಚಿವ ಅರ್ಧ ಸತ್ಯಗಳಿಗೆ ಖ್ಯಾತರಾಗಿರುವ ನಿಮ್ಮ ಮಾತಿನ ಯಾವ ಭಾಗವನ್ನು ನಂಬೋಣ?
23rd August, 2021
ಸಂಸತ್ತು ಪ್ರಜಾಪ್ರಭುತ್ವದ ದೇಗುಲ - ರಾಮನಾಥ್ ಕೋವಿಂದ್, ರಾಷ್ಟ್ರಪತಿ ಅದನ್ನು ಸದ್ಯ ಆಕ್ರಮಿಸಿರುವ ದುಷ್ಟಶಕ್ತಿಗಳ ಕೈಯಿಂದ ವಿಮೋಚಿಸುವ ಅಗತ್ಯವಿದೆ.
16th August, 2021
ನೂತನ ಗುಜರಿ ನೀತಿ ಆಟೊಮೊಬೈಲ್ ವಲಯಕ್ಕೆ ಹೊಸ ಅನನ್ಯತೆ ನೀಡಲಿದೆ - ನರೇಂದ್ರ ಮೋದಿ, ಪ್ರಧಾನಿ ಇಡೀ ವಲಯವನ್ನು ಗುಜರಿಗೆ ಹಾಕಲು ಈ ನೀತಿಯಿಂದ ಸುಲಭವಾಗಲಿದೆ.  
9th August, 2021
ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಜೆಡಿಎಸ್‌ಗೆ ಸಿಗುತ್ತೆ ಎನ್ನುವ ನಿರೀಕ್ಷೆ ಇದ್ದಿರಬೇಕು.
2nd August, 2021
ಕೊರೋನ ಸಂಕಷ್ಟ ಪರಿಸ್ಥಿತಿಯಿಂದ ಹೊರಬರಲು ಮಾನವ ಕುಲಕ್ಕೆ ಬುದ್ಧನ ಚಿಂತನೆಗಳು ದಾರಿ ದೀಪವಾಗಿವೆ -ನರೇಂದ್ರ ಮೋದಿ, ಪ್ರಧಾನಿಬೇರೆ ಕುಲಗಳಿಗೆ ಮಾತ್ರ ವ್ಯಾಕ್ಸಿನ್ ಉಪಯುಕ್ತವೇ?
18th July, 2021
ಜನಸಂಖ್ಯೆಯ ಹೆಚ್ಚಳವು ಅಭಿವೃದ್ಧಿಗೆ ಮಾರಕ-ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ ಜನರನ್ನೇ ನೀವು ಸಮಸ್ಯೆಗಳಾಗಿ ಕಾಣುವುದಾದರೆ ಕತ್ತೆಗಳ ಲೋಕದಲ್ಲಿ ಮುಖ್ಯಮಂತ್ರಿಯಾಗಬಹುದಿತ್ತು.
12th July, 2021
ನಮ್ಮಲ್ಲಿ ದುರಹಂಕಾರಿಗಳಿಗೆ ಕೋವಿಡ್ ಲಸಿಕೆ ಇಲ್ಲ - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವಎಲ್ಲ ಆಧುನಿಕ ಲಸಿಕೆಗಳನ್ನು ಮೀರಿದ ಅನೇಕ ಹಳೆಯ ರೋಗಗಳಿರುವ ಹಲವರು ಈಗಾಗಲೇ ನಿಮ್ಮಳಗಿದ್ದಾರಲ್ಲಾ!
5th July, 2021
ಶ್ರೀರಾಮ ಮಾಡಿದ ರೀತಿಯಲ್ಲಿಯೇ ಅಯೋಧ್ಯೆಯನ್ನು ಅಭಿವೃದ್ಧಿ ಪಡಿಸಲು ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿದ್ದೇನೆ - ನರೇಂದ್ರ ಮೋದಿ, ಪ್ರಧಾನಿಸದ್ಯ ಅಲ್ಲಿರುವ ರಾವಣ ಇನ್ನೊಬ್ಬ ರಾವಣನ ಮಾತನ್ನು ಕೇಳಿಸಿಕೊಳ್ಳುತ್ತಾನೆಯೇ?
Back to Top