ಝಲಕ್
4th March, 2019
ದೇಶವಿಡೀ ಯುದ್ಧದ ಕುರಿತಂತೆ ಮಾತನಾಡುತ್ತಿತ್ತು.
ವರದಿಗಾರನೊಬ್ಬ ಹಳ್ಳಿಯ ರೈತನನ್ನು ಕೇಳಿದ ‘‘ಪಾಕಿಸ್ತಾನದ ಬಗ್ಗೆ ನಿಮ್ಮ ಅಭಿಪ್ರಾಯ ಏನು?’’
‘‘ಅಲ್ಲಿ ರೈತರಿದ್ದಾರೆಯೇ?’’ ಕೇಳಿದ.
‘‘ಹೌದು’’ ಎಂದ ವರದಿಗಾರ.
‘‘...
14th January, 2019
ಒಂದು ಊರು. ಅಲ್ಲೊಬ್ಬ ದಯಾಮಯಿ ಧನಿಕನಿದ್ದ.
ಪ್ರತಿ ದಿನ ಊರಿನ ಬಡವರನ್ನು ಕರೆದು ನೂರಾರು ರೂಪಾಯಿ ಹಂಚುತ್ತಿದ್ದ. ಊರೆಲ್ಲ ಅವನನ್ನು ಕೊಂಡಾಡುತ್ತಿದ್ದರು.
ಆದರೆ ಒಂದೇ ಒಂದು ದಿನ ಸಂತ ಅವನಲ್ಲಿಗೆ ಕೈ ಚಾಚಲು ಹೋದವನಲ್ಲ.
12th January, 2019
‘‘ಅವಳು ಹೆಣ್ಣು. ದುರ್ಬಲಳು. ಅವಳ ಮೇಲೆ ಕೈ ಮಾಡಬಾರದು’’ ಶಿಷ್ಯನೊಬ್ಬ ಯಾರಿಗೋ ಹೇಳುತ್ತಿದ್ದ.
ಸಂತ ಬಂದು ತಿದ್ದಿದ ‘‘ಹೆಣ್ಣಿನ ಮೇಲೆ ಕೈ ಮಾಡಬಾರದು ಯಾಕೆಂದರೆ ನೀನೊಬ್ಬ ಗಂಡು’’
17th December, 2018
ಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು.
ನೂರಾರು ಜನರು ಸತ್ತರು.
ನೋಡಿದರೆ ಪ್ರಸಾದದಲ್ಲಿ ವಿಷ ಬೆರೆಸಲಾಗಿದೆ.
ಸಂತ ಕಣ್ಣೀರು ಸುರಿಸುತ್ತಾ ಹೇಳಿದ ‘‘ಧರ್ಮ ಅಮೃತವಿದ್ದಂತೆ. ಅತಿಯಾದರೆ ವಿಷ’’
10th December, 2018
ಮಂಗಳ ಗ್ರಹದಲ್ಲಿ ಮನುಷ್ಯರಿದ್ದಾರೆಯೇ? ಎಂದು ಭೂಮಿಯಲ್ಲಿ ವಿಜ್ಞಾನಿಗಳು ಶೋಧಿಸುವ ಹೊತ್ತು.
ಮಂಗಳ ಗ್ರಹದಿಂದ ಭೂಮಿಗೆ ಬಂದ ಜೀವಿಗಳು ‘‘ಭೂಮಿಯಲ್ಲಿ ಮನುಷ್ಯರು ಇಲ್ಲ’’ ಎಂಬ ವರದಿಯನ್ನು ಮಂಗಳಗ್ರಹದ ಮುಖ್ಯಸ್ಥರಿಗೆ...
4th December, 2018
ಆ ದೇಶದಲ್ಲಿ ಒಬ್ಬ ರಾಜನಿದ್ದ.
ತಾನು ಎಲ್ಲರಿಗಿಂತಲೂ ಶ್ರೇಷ್ಠ ರಾಜನಾಗಬೇಕು. ಅದಕ್ಕಾಗಿ ಚಿನ್ನದಿಂದ ಅತಿ ಭಾರವಾದ ಕಿರೀಟವೊಂದನ್ನು ಮಾಡಿಸಿದ.
ಅವನಷ್ಟೇ ತೂಕದ ಕಿರೀಟ ಧರಿಸಿ ಆಸ್ಥಾನಕ್ಕೆ ಬಂದ. ಎಲ್ಲರೂ ಕಿರೀಟವನ್ನು...
3rd December, 2018
‘‘ಆ ಪತ್ರಿಕೆ ತುಂಬಾ ಚೆನ್ನಾಗಿದೆ’’
‘’ಹೌದೆ?’’
‘‘ಹೌದು, 40 ಪುಟಗಳು...’’
‘‘ಮತ್ತೆ...’’
‘‘ಎಲ್ಲವೂ ಬಣ್ಣ ಬಣ್ಣದ ಪುಟ’’
‘‘ಮತ್ತೆ....’’
‘‘ಗುಣಮಟ್ಟದ ಕಾಗದ....’’
‘‘ಮತ್ತೆ....’’
31st October, 2018
‘‘ನಮ್ಮನ್ನು ಹಿಂಬಾಲಿಸುವ ನೆರಳನ್ನು ಕೊಲ್ಲಬಹುದೇ?’’ ಶಿಷ್ಯ ಕೇಳಿದ.
‘‘ಧಾರಾಳವಾಗಿ....’’ ಸಂತ ಉತ್ತರಿಸಿದ.
‘‘ಹೇಗೆ...?’’ ಶಿಷ್ಯ ಕೇಳಿದ.
‘‘ಹೀಗೆ...’’ ಎಂದ ಸಂತ ದೀಪವನ್ನು ಆರಿಸಿದ. ಎಲ್ಲವೂ ಕತ್ತಲಲ್ಲಿ.
25th October, 2018
‘‘ಅತಿದೊಡ್ಡ ದುರದೃಷ್ಟವಂತ ಯಾರು?’’ ಶಿಷ್ಯ ಕೇಳಿದ.
‘‘ಹಸಿವು, ನಿದ್ದೆಯಿಲ್ಲದ ಶ್ರೀಮಂತ’’ ಸಂತ ಹೇಳಿದ.
‘‘ಮನುಷ್ಯನನ್ನು ಸುಖವಾಗಿರಿಸುವ ಸಾಧನ ಯಾವುದು?’’
‘‘ಸಂತೃಪ್ತಿ’’.
ಸಂತನ ಮಾತಿಗೆ ಶಿಷ್ಯ
ಸಂತೃಪ್ತನಾದ...
10th October, 2018
‘‘ಗುರುಗಳೇ ಭೂಮಿ ಹುಟ್ಟಿದ್ದು ಯಾವಾಗ?’’ ಶಿಷ್ಯ ಕೇಳಿದ.
‘‘ನಾವು ಹುಟ್ಟಿದಾಗ’’ ಸಂತ ಉತ್ತರಿಸಿದ.
‘‘ಭೂಮಿ ಇಲ್ಲವಾಗುವುದು ಯಾವಾಗ?’’
‘‘ನಾವು ಇಲ್ಲವಾದಾಗ.... ’’
28th September, 2018
ಸೌದಿಯಿಂದ ಕೆಲಸ ಕಳೆದುಕೊಂಡು ಎರಡು ವರ್ಷಗಳ ಬಳಿಕ ಆತ ಮನೆಗೆ ಮರಳಿದ. ಎರಡು ವಾರ ಕಳೆದಿರಬಹುದು.
ಮಧ್ಯ ರಾತ್ರಿ ಮಂಚದಲ್ಲಿ ಪಕ್ಕದಲ್ಲಿ ಮಲಗಿದ್ದ ಪತ್ನಿ ಮೆಲ್ಲಗೆ ಪಿಸುಗುಟ್ಟಿ ಕೇಳಿದಳು ‘‘ವಾಪಸ್ ಹೋಗುವುದು ಯಾವಾಗ’’...
3rd September, 2018
ದೊಡ್ಡದೊಂದು ನೆರೆ ಬಂತು.
ಊರೆಲ್ಲ ಕೊಚ್ಚಿ ಹೋಯಿತು.
ಧರ್ಮ, ಜಾತಿ, ಮೇಲು, ಕೀಳು ಎಲ್ಲ ಒಂದಕ್ಕೊಂದು ಸೇರಿ, ಯಾರು ಏನು ಎನ್ನುವುದೇ ಗೊತ್ತಾಗದಾಯಿತು.
ಎಲ್ಲರ ಜಾತಿಯೂ ‘ನೆರೆ ಸಂತ್ರಸ್ತರು’ ಎಂದಾಯಿತು.
14th August, 2018
ಆ ಹಿರಿಯರ ಎರಡೂ ಕಣ್ಣುಗಳು ವಯಸ್ಸಿನ ಕಾರಣದಿಂದ ಕುರುಡಾದವು.
ಯಾರೋ ಕೇಳಿದರು ‘‘ನಿಮಗೆ ನೋಡುವುದಕ್ಕೆ ಸಾಧ್ಯವಾಗದೇ ಇರುವುದರಿಂದ ಬೇಜಾರಾಗುವುದಿಲ್ಲವೇ?’’
6th August, 2018
ಸಂತ ಆ ದಾರಿಯಲ್ಲಿ ನಡೆದು ಹೋಗುತ್ತಿದ್ದ.
ದಾರಿಯಲ್ಲಿ ಯಾರೋ ಗುರುತು ಹಿಡಿದು ಕೇಳಿದರು ‘‘ನೀವು, ಪವಾಡಪುರುಷರು ಎಂದು ಕೇಳಿದ್ದೇನೆ....ದಯವಿಟ್ಟು ನಮಗಾಗಿ ಒಂದು ಪವಾಡ ಮಾಡಿ....’’
30th July, 2018
ವಿಜ್ಞಾನ ತಂತ್ರಜ್ಞಾನವನ್ನು ಕೊಟ್ಟಿತು.
ಜ್ಯೋತಿಷಿಗಳು ಆ ತಂತ್ರಜ್ಞಾನವನ್ನೇ ಬಳಸಿಕೊಂಡು ಮೌಢ್ಯ ಬಿತ್ತತೊಡಗಿದರು.
ಅದನ್ನು ವಿರೋಧಿಸಿದ ವಿಜ್ಞಾನಿಗಳು ಸಂಸ್ಕೃತಿ ವಿರೋಧಿಗಳಾದರು.
23rd July, 2018
ಊರಿಗೊಬ್ಬ ಹೊಸ ಸ್ವಾಮೀಜಿ ಬಂದರು.
ಅವರು ಪ್ರಾರ್ಥಿಸಿದರೆ ಅದು ಈಡೇರುತ್ತದೆ ಎನ್ನುವುದು ಊರಿಡೀ ಹರಡಿತು.
ಊರಿನ ಜನರು ಸರದಿಯಲ್ಲಿ ನಿಲ್ಲ ತೊಡಗಿದರು.
ಒಬ್ಬ ಬಂದು ಸ್ವಾಮೀಜಿಯಲ್ಲಿ ಕೇಳಿಕೊಂಡ ‘‘ಸ್ವಾಮೀಜಿ ನನ್ನ...
15th July, 2018
‘‘ಮೊದಲೆಲ್ಲ ಬೆಳಗ್ಗೆ ಎದ್ದಾಗ ಹಕ್ಕಿಗಳ ಇಂಚರ ಕೇಳುತ್ತಿತ್ತು. ಆ ಇಂಚರಗಳೆಲ್ಲ ಎಲ್ಲಿ ಕಾಣೆಯಾಗಿವೆ?’’ ಆತ ಕೇಳಿದ.
‘‘ಅವೆಲ್ಲ ಮೊಬೈಲ್‌ಗಳ ರಿಂಗ್ ಟೋನ್‌ಗಳಾಗಿ ಬದಲಾಗಿವೆ’’ ಆತನ ಅಪ್ಪ ಉತ್ತರಿಸಿದ.
ಮಗು
13th July, 2018
‘‘ಅಯ್ಯೋ ಎಂಥಾ ಮಳೆ....ಎಂಥಾ ಮಳೆ....’’ ನಗರದ ಜನರು ಶಪಿಸುತ್ತಿದ್ದರು.
ಮುಳುಗಿದ ರಸ್ತೆಯಲ್ಲಿ ಅವರು ಚಡಡಿಸುತ್ತಿದ್ದರು.
8th July, 2018
ಮಧ್ಯಾಹ್ನದ ಹೊತ್ತು.
ಆಶ್ರಮದಲ್ಲಿ ಗುರುವಿನೊಂದಿಗೆ ಮಾತನಾಡುತ್ತಿದ್ದ ಶಿಷ್ಯ ಹೇಳಿದ ‘‘ಗುರುಗಳೇ, ಹೊರಗೆ ಸುಡು ಬಿಸಿಲು’’
‘‘ಅದು ಬಿಸಿಲಲ್ಲ, ಬೆಳಕು’’ ಸಂತ ತಿದ್ದಿದ.
‘‘ಆದರೆ ಸುಡುತ್ತಿದೆಯಲ್ಲ?’’ ಶಿಷ್ಯ ಕೇಳಿದ.
12th June, 2018
‘‘ನಾನು ನನ್ನ ಕನಸಿನಂತೆಯೇ ನನ್ನ ಮಗನನ್ನು ಬೆಳೆಸಿದೆ’’ ತಂದೆ ಸಾರ್ಥಕತೆಯಿಂದ ಹೇಳಿದ.
ಅದನ್ನು ಕೇಳಿದ ಸಂತ ನಿಟ್ಟುಸಿರಿಟ್ಟು ಹೇಳಿದ ‘‘ಹಾಗಾದರೆ ನಿಮ್ಮ ಮಗನ ಕನಸುಗಳನ್ನು ಕೊಂದು ಹಾಕಿದಿರೆಂದು ಅರ್ಥ’’
7th May, 2018
ಮಾಡದ ತಪ್ಪಿಗಾಗಿ ಒಬ್ಬ ಜೈಲಿಗೆ ಹೋದ.
ಸುಮಾರು ಒಂದು ವರ್ಷ ಜೈಲಿನಲ್ಲಿ ಕಳೆದು ಬಂದ.
ಇದೀಗ ಆತನನ್ನು ಕಂಡರೆ ಊರೇ ನಡುಗುತ್ತದೆ.
ಇರಿಯುತ್ತಾನೆ, ದೋಚುತ್ತಾನೆ. ಪೊಲೀಸರು ಮಾತ್ರ ಈವರೆಗೆ ಬಂಧಿಸಿಲ್ಲ.
6th May, 2018
ಆತ ಗುಜರಿ ಆಯುವವನು.
ಮನೆಯೊಂದರ ಯಜಮಾನ ಆತನನ್ನು ಕೂಗಿ ಮನೆಯಲ್ಲಿರುವ ಒಂದಿಷ್ಟು ಹಳೆ ಸಾಮಾನುಗಳನ್ನು ತೂಗಿ ಕೊಟ್ಟ. ಕಾಗದ ಪತ್ರಗಳನ್ನೆಲ್ಲ ತೂಗಿ ಅದರ ಬೆಲೆಯನ್ನು ಗುಜರಿ ಆಯುವವನು ಕೊಟ್ಟು ಬಿಟ್ಟ.
ಗುಜರಿ...
30th April, 2018
ಮರವೊಂದು ಕೊಡಲಿಯ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿತ್ತು.
ಸಂತ ಕೇಳಿದ ‘‘ಮರವೇ ಕೊಡಲಿ ಇರುವುದೇ ಮರವನ್ನು ಕತ್ತರಿಸಲು. ಮತ್ತೇಕೆ ನೀನು ಅದಕ್ಕೆ ಮತ ಹಾಕುತ್ತಿದ್ದೀಯ?’’
26th March, 2018
ಒಂದು ಅಕ್ಕಿ ಕಾಳು ಎಷ್ಟು ಭಾರವಿರಬಹುದು?
ಈ ಪ್ರಶ್ನೆಗೆ ಒಬ್ಬ ಮನುಷ್ಯ ‘‘ಅಯ್ಯೋ....ಅದರಲ್ಲಿ ಭಾರವೇನು ಬಂತು?’’ ಎಂದ.
ಇರುವೆ ಹೇಳಿತು ‘‘ಅಬ್ಬಬ್ಬಾ...ಒಂದು ಅಕ್ಕಿ ಕಾಳನ್ನು ಹೊರುವುದೆಂದರೆ ಆತ ಸಾಧಾರಣ...
21st March, 2018
ಅದೊಂದು ಊರು. ಆ ಊರಲ್ಲಿ ಗಂಡ-ಹೆಂಡತಿ. ಅವರಿಬ್ಬರು ತುಂಬಾ ಪ್ರೀತಿಸುತ್ತಿದ್ದರು. ಒಮ್ಮೆ ಅದೇನು ಕಾರಣವೋ ಇಬ್ಬರ ನಡುವೆ ಭೀಕರ ಜಗಳವಾಯಿತು. ಗಂಡ ಹೆಂಡತಿ ಬೇರೆ ಬೇರೆಯಾದರು. ಆ ಊರಿಗೆ ಚುನಾವಣೆ ಬಂತು. ಗಂಡ ಚುನಾವಣೆಗೆ...
17th March, 2018
ಸಂತನ ತಿಳುವಳಿಕೆಯನ್ನು ಪರೀಕ್ಷಿಸಲು ಶಿಷ್ಯನೊಬ್ಬ ಮುಷ್ಟಿಯೊಳಗೆ ಗುಬ್ಬಚ್ಚಿಯೊಂದನ್ನು ಬಚ್ಚಿಟ್ಟುಕೊಂಡು ಬಂದ.
ಆತ ಸಂತನಲ್ಲಿ ಕೇಳಿದ ‘‘ಗುಬ್ಬಚ್ಚಿ ಬದುಕಿದೆಯೇ, ಸತ್ತಿದೆಯೇ?’’