ಚಾಮರಾಜನಗರ: ಇಂಡಿಗನತ್ತ ಗ್ರಾಮದಲ್ಲಿ ಬಿರುಸಿನ ಮತದಾನ

ಚಾಮರಾಜನಗರ: ಮತಗಟ್ಟೆಯಲ್ಲಿ ಮತಯಂತ್ರ ಧ್ವಂಸ ಹಾಗೂ ಚುನಾವಣಾಧಿಕಾರಿಗಳ ಮೇಲೆ ಹಲ್ಲೆ ನಡೆದಿದ್ದ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಂಡಿಗನತ್ತ ಮೆಂದಾರೆ ಮತಗಟ್ಟೆಯಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.
ಏಪ್ರಿಲ್ 26 ರಂದು ಇಂಡಿಗನತ್ತ ಮೆಂದಾರೆ ಮತಗಟ್ಟೆ 146 ರಲ್ಲಿ ಮತಯಂತ್ರ ಧ್ವಂಸ ಹಾಗೂ ಗಲಾಟೆಯಿಂದಾಗಿ ಮತದಾನ ನಡೆಯದೆ ಮುಂದೂಡಿಕೆಯಾಗಿತ್ತು. ಮರು ಮತದಾನಕ್ಕೆ ಚುನಾವಣೆ ಆಯೋಗವು ಏಪ್ರಿಲ್ 29 ರಂದು ನಿಗದಿಪಡಿಸಿ, ಶಾಂತಿಯುತ ಮತದಾನಕ್ಕೆ ಹೆಚ್ಚಿನ ಪೊಲೀಸ್ ಬಂದೂಬಸ್ತ್ ವ್ಯವಸ್ಥೆ ಮಾಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು.
ಚುನಾವಣಾ ಆಯೋಗದ ನಿರ್ದೇಶನದಂತೆ ಸೋಮವಾರ ಇಂಡಿಗನತ್ತ ಮೆಂದಾರೆ ಮತಗಟ್ಟೆ 146 ರಲ್ಲಿ ಪೊಲೀಸ್ ಕಣ್ಗಾವಲಿನಲ್ಲಿ ಮರು ಮತದಾನ ನಡೆಯುತ್ತಿದೆ. ಗ್ರಾಮಸ್ಥರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡುತ್ತಿದ್ದಾರೆ.
Next Story





