ಕೊರಗಪ್ಪ ಸುವರ್ಣ
ಮಂಗಳೂರು: ನಗರದ ಕೋಡಿಕಲ್ ನಿವಾಸಿ, ಭಾರತೀಯ ಮಜ್ದೂರ್ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದ ಬೋಳೂರು ಕೊರಗಪ್ಪಸುವರ್ಣ (94) ಗುರುವಾರ ನಿಧನರಾಗಿದ್ದಾರೆ.
ಕೊರಗಪ್ಪ ಸುವರ್ಣ ನಗರದ ಉರ್ವದಲ್ಲಿದ್ದ ಮಿಜಾರು ಗೋವಿಂದ ಅಣ್ಣಪ್ಪಪೈ ಗೇರು ಬೀಜ ಕಾರ್ಖಾನೆಯ ಕ್ಯಾಂಟಿನ್ನಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದು ಅಲ್ಲಿಯ ಮಹಿಳಾ ಕಾರ್ಮಿಕರನ್ನು ಸಂಘಟಿಸಿ ರಾಷ್ಟ್ರೀಯ ವಿಚಾರಕ್ಕೆ ಒಳಪಟ್ಟ ಕಾರ್ಮಿಕ ಸಂಘವನ್ನು ಹುಟ್ಟು ಹಾಕಿದ್ದರು. ಈ ಕಾರ್ಮಿಕ ಸಂಘವು 1955ರಲ್ಲಿ ಭಾರತೀಯ ಮಜ್ದೂರ್ ಸಂಘಕ್ಕೆ ಸಂಯೋಜಿಸಲ್ಪಟ್ಟಿತು.
ಗೇರುಬೀಜ ಕಾರ್ಖಾನೆಯಿಂದ ಪ್ರಾರಂಭಗೊಂಡ ಅವರ ಹೋರಾಟ ಹೋಟೆಲ್, ಹೆಂಚು, ಪ್ರಿಂಟಿಂಗ್ ಪ್ರೆಸ್, ಸಿನೇಮಾ, ಕೈ ಮಗ್ಗ, ಕಾಫಿಕ್ಯೂರಿಂಗ್, ಬೀಡಿ ಮುಂತಾದ ಕೈಗಾರಿಕೆಗಳಲ್ಲಿ ಕಾರ್ಮಿಕರನ್ನು ಸಂಘಟಿಸುವವರೆಗೆ ಸಾಗಿತ್ತು.
*ಮೃತರ ನಿಧನಕ್ಕೆ ಬಿಎಂಎಸ್ ಸಂಘಟನೆಯ ಪ್ರಮುಖ ಕೆ.ವಿಶ್ವನಾಥ ಶೆಟ್ಟಿ, ಫರಂಗಿಪೇಟೆಯ ಸೇವಾಂಜಲಿ ಟ್ರಸ್ಟ್ನ ಆಡಳಿತ ಟ್ರಸ್ಟಿಯ ಕೃಷ್ಣ ಕುಮಾರ್ ಪೂಂಜಾ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.
Next Story