ಅಕ್ರಮ ಮೀನುಗಾರಿಕೆ ಆರೋಪ | ಶ್ರೀಲಂಕಾದಿಂದ 18 ಭಾರತೀಯ ಮೀನುಗಾರರ ಬಂಧನ
ಸಾಂದರ್ಭಿಕ ಚಿತ್ರ
ಕೋಲಂಬೊ : ಶ್ರೀಲಂಕಾದ ಜಲಪ್ರದೇಶದಲ್ಲಿ ಅಕ್ರಮ ಮೀನುಗಾರಿಕೆ ಆರೋಪದಲ್ಲಿ 18 ಭಾರತೀಯ ಮೀನುಗಾರನ್ನು ಬಂಧಿಸಿರುವ ಶ್ರೀಲಂಕಾ ನೌಕಾಪಡೆಯು ಅವರಿಂದ ಮೂರು ಮೀನುಗಾರಿಕೆ ದೋಣಿಗಳನ್ನು ವಶಪಡಿಸಿಕೊಂಡಿದೆ.
ಶನಿವಾರ ರಾತ್ರಿ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಉತ್ತರ ಸಮುದ್ರದ ಡೆಲ್ಫ್ಟ್ ದ್ವೀಪದ ಬಳಿ ಈ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮುಂದಿನ ಕಾನೂನು ಪ್ರಕ್ರಿಯೆಗಾಗಿ ಬಂಧಿತ ಮೀನುಗಾರರನ್ನು ಕಂಕೆಸಂತುರೈ ಮೀನುಗಾರಿಕೆ ಬಂದರಿಗೆ ಕರೆದೊಯ್ಯಲಾಗಿದೆ ಎಂದು ನೌಕಾಪಡೆ ವಕ್ತಾರ ಕ್ಯಾ.ಗಯಾನ್ ವಿಕ್ರಮಸೂರ್ಯ ತಿಳಿಸಿದರು.
ಈ ಘಟನೆಗೆ ಮುನ್ನ 2024ರಲ್ಲಿ 180ಕ್ಕೂ ಅಧಿಕ ಭಾರತೀಯ ಮೀನುಗಾರರನ್ನು ಬಂಧಿಸಿರುವ ಶ್ರೀಲಂಕಾ ಅವರ 25 ಮೀನುಗಾರಿಕೆ ದೋಣಿಗಳನ್ನು ವಶಪಡಿಸಿಕೊಂಡಿದೆ.
Next Story