ಬ್ರೆಝಿಲ್ನ ಕ್ರೈಸ್ತ ಸನ್ಯಾಸಿನಿಗೆ ವಿಶ್ವಸಂಸ್ಥೆಯ ನ್ಯಾನ್ಸೆನ್ ಪ್ರಶಸ್ತಿ

ಭಗಿನಿ ರೋಸಿಟಾ ಮಿಲೆಸಿ | PC :aljazeera
ವಿಶ್ವಸಂಸ್ಥೆ : ಕಳೆದ 40 ವರ್ಷಗಳಿಂದ ನಿರಾಶ್ರಿತರು ಮತ್ತು ವಲಸಿಗರಿಗೆ ಸಹಾಯ ಮಾಡಿದ ಬ್ರೆಝಿಲ್ನನ ಕ್ರೈಸ್ತ ಸನ್ಯಾಸಿನಿ ಭಗಿನಿ ರೋಸಿಟಾ ಮಿಲೆಸಿ ವಿಶ್ವಸಂಸ್ಥೆಯ ನ್ಯಾನ್ಸೆನ್ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.
ಆಂತರಿಕವಾಗಿ ಸ್ಥಳಾಂತರಗೊಂಡವರು ಹಾಗೂ ರಾಷ್ಟ್ರತ್ವ ಇಲ್ಲದ ಜನರ ರಕ್ಷಣೆಗಾಗಿ ಅಸಾಧಾರಣ ಕೆಲಸ ಮಾಡುವವರಿಗೆ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಹೈಕಮಿಷನ್ (ಯುಎನ್ಎಿಚ್ಸಿೆಆರ್) ಪ್ರತೀ ವರ್ಷ ಈ ಪುರಸ್ಕಾರ ನೀಡುತ್ತದೆ.
ವಿಶ್ವದಾದ್ಯಂತ ನಿರಾಶ್ರಿತರಿಗೆ ಸೇವೆ ಸಲ್ಲಿಸುವಲ್ಲಿ ಹೆಸರಾದ ಸ್ಕಲಾಬ್ರಿನಿ ಕ್ರೈಸ್ತ ಸನ್ಯಾಸಿನಿ ಸಂಘಟನೆಯ ಸದಸ್ಯೆಯಾದ 79 ವರ್ಷದ ರೋಸಿಟಾ ಮಿಲೆಸಿ ದಕ್ಷಿಣ ಬ್ರೆಝಿಲ್ ಮೂಲದವರಾಗಿದ್ದು 19ನೇ ವಯಸ್ಸಿಗೇ ಕ್ರೈಸ್ತ ಸನ್ಯಾಸಿನಿ ದೀಕ್ಷೆ ಪಡೆದವರು. ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತೆ ಮತ್ತು ಮಾನವ ಹಕ್ಕು ಕಾರ್ಯಕರ್ತೆಯಾಗಿ ಬ್ರೆಝಿಲ್ನ ಲ್ಲಿ 4 ದಶಕಗಳಿಂದ ವಿವಿಧ ರಾಷ್ಟ್ರೀಯತೆಯ ನಿರಾಶ್ರಿತರು ಮತ್ತು ವಲಸಿಗರ ಹಕ್ಕುಗಳು ಮತ್ತು ಘನತೆಯನ್ನು ಪ್ರತಿಪಾದಿಸಿದವರು. ನಾರ್ವೆಯ ಮಾನವತಾವಾದಿ, ವಿಜ್ಞಾನಿ, ಪರಿಶೋಧಕ ಮತ್ತು ರಾಜತಾಂತ್ರಿಕ ಫ್ರಿಡೋಫ್ ನ್ಯಾನ್ಸೆನ್ ಅವರ ಗೌರವಾರ್ಥ 1954ರಲ್ಲಿ ಯುಎನ್ಎ್ಚ್ಸಿಿಆರ್ ನ್ಯಾನ್ಸೆನ್ ನಿರಾಶ್ರಿತರ ಪುರಸ್ಕಾರ ಸ್ಥಾಪಿಸಲಾಗಿದೆ.





