ಅಮೆರಿಕ | ವಿವಾಹ ಕಾರ್ಯಕ್ರಮದಲ್ಲಿ ಫೆಲೆಸ್ತೀನ್ ಪರ ಘೋಷಣೆ ಕೂಗಿ ಗುಂಡಿನ ದಾಳಿ : ಒಬ್ಬ ಮೃತ್ಯು

ಸಾಂದರ್ಭಿಕ ಚಿತ್ರ (PTI)
ನ್ಯೂಯಾರ್ಕ್, ಸೆ.21: ಅಮೆರಿಕದ ನ್ಯೂ ಹ್ಯಾಂಪ್ಶೈರ್ ರಾಜ್ಯದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಓರ್ವ ವ್ಯಕ್ತಿ `ಪ್ರೀ ಫೆಲೆಸ್ತೀನ್' ಎಂದು ಕಿರುಚುತ್ತಾ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಮೃತಪಟ್ಟಿದ್ದು ಇತರ ಇಬ್ಬರು ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ನಷುವಾ ನಗರದ ಸ್ಕೈ ಮೆಡೋ ಕಂಟ್ರಿ ಕ್ಲಬ್ನಲ್ಲಿ ವಿವಾಹ ಸಮಾರಂಭ ನಡೆಯುತ್ತಿದ್ದಾಗ ಗುಂಡಿನ ದಾಳಿ ನಡೆದಿದ್ದು 59 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಶಂಕಿತ ಆರೋಪಿ 23 ವರ್ಷದ ಹಂಟರ್ ನಾಡೌನನ್ನು ಬಂಧಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
Next Story





