ತಾಂತ್ರಿಕ ವೈಫಲ್ಯದಿಂದ ಹೆಲಿಕಾಪ್ಟರ್ ದುರಂತ : ಇರಾನ್ ಮಾಧ್ಯಮ ವರದಿ
PC : INDIATODAY
ಟೆಹರಾನ್: ಇರಾನ್ ಅಧ್ಯಕ್ಷ ಇಬ್ರಾಹೀಂ ರಯೀಸಿ ಮತ್ತು ವಿದೇಶಾಂಗ ಸಚಿವ ಹುಸೈನ್ ಆಮಿರ್ ಅಬ್ದುಲಹಿಯಾನ್ ಹಾಗೂ 6 ಮಂದಿ ಇತರರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ವೈಫಲ್ಯದಿಂದಾಗಿ ಅಪಘಾತಕ್ಕೆ ಒಳಗಾಗಿದೆ ಎಂದು ಇರಾನ್ನ ಸರಕಾರಿ ಮಾಧ್ಯಮ ವರದಿ ಮಾಡಿದೆ.
ಹೆಲಿಕಾಪ್ಟರ್ ದುರಂತದ ಬಗ್ಗೆ ತನಿಖೆಗೆ ಇರಾನ್ ಮಿಲಿಟರಿ ಆದೇಶಿಸಿದೆ. ಈ ಮಧ್ಯೆ, ರಯೀಸಿ, ಆಮಿರ್ ಅಬ್ದುಲಹಿಯಾನ್ ಹಾಗೂ ಇತರರ ದುರಂತ ಮರಣಕ್ಕೆ ಅಮೆರಿಕ ಸಂತಾಪ ಸೂಚಿಸಿದ್ದು ಇರಾನ್ನಲ್ಲಿ ನೂತನ ಅಧ್ಯಕ್ಷರ ಅಡಿಯಲ್ಲಿ `ಮೂಲಭೂತ ಸ್ವಾತಂತ್ರ್ಯ ಅಸ್ತಿತ್ವದಲ್ಲಿರುವ' ಸಮಾಜವನ್ನು ಎದುರು ನೋಡುತ್ತಿರುವುದಾಗಿ ಹೇಳಿದೆ.
Next Story