ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ 7ನೇ ಬಾರಿಗೆ ಭಾರತ ಆಯ್ಕೆ

Photo Credit : ddnews.gov.in
ವಿಶ್ವಸಂಸ್ಥೆ,ಅ.15: 2025-28ನೇ ಅವಧಿಗೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ (ಯುಎನ್ಎಚ್ಆರ್ಸಿ)ಗೆ ಭಾರತವು ಆಯ್ಕೆಯಾಗಿದೆ. ಭಾರತವು ಯುಎನ್ಎಚ್ಆರ್ಸಿಗೆ ಆಯ್ಕೆಯಾಗುತ್ತಿರುವುದು ಇದು ಏಳನೇ ಬಾರಿಯಾಗಿದೆ.
ಈ ಮಂಡಳಿಯಲ್ಲಿ ಭಾರತದ ಮೂರು ವರ್ಷಗಳ ಅವಧಿಯು 2026ರ ಜನವರಿ 1ರಿಂದ ಆರಂಭವಾಗಲಿದೆ. ವಿಶ್ವಸಂಸ್ಥೆಗೆ ಭಾರತಕ್ಕೆ ನೀಡಿದ ಅಭೂತಪೂರ್ವ ಬೆಂಬಲಕ್ಕಾಗಿ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಅವರು ಎಲ್ಲಾ ನಿಯೋಗಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮಾನವ ಹಕ್ಕುಗಳಿಗೆ ಹಾಗೂ ಮೂಲಭೂತ ಸ್ವಾತಂತ್ರ್ಯಗಳ ಕುರಿತ ಭಾರತದ ಅಚಲ ಬದ್ಧತೆಯನ್ನು ಈ ಆಯ್ಕೆಯು ಪ್ರತಿಬಿಂಬಿಸುತ್ತದೆ ಎಂದರು.
Next Story





